ಮಡಿಕೇರಿ, ನ. ೨: ಅಕ್ಟೋಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ, ಜಿಲ್ಲೆಯಲ್ಲಿ ಅವಧಿಗೂ ಮುನ್ನವೇ ಅರೇಬಿಕಾ ಕಾಫಿ ಹಣ್ಣಾಗಿದ್ದು, ಇದೀಗ ಅವಧಿಗೂ ಮೊದಲೇ ಕಾಫಿ ಕೊಯ್ಲು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಗೆ ಜಿಲ್ಲೆಯ ಕಾಫಿ ಬೆಳೆಗಾರರು ಸಿಲುಕಿಕೊಂಡಿದ್ದಾರೆ.

ಸಾಮಾನ್ಯವಾಗಿ ಕೊಡಗಿನಲ್ಲಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಕಾಫಿ ಕೊಯ್ಲಿಗೆ ಬರುತ್ತದೆ. ಆದರೆ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆ ಯಿಂದ ಅರೇಬಿಕಾ ಕಾಫಿ ಬೇಗನೇ ಹಣ್ಣಾಗಿದ್ದು, ಜಿಲ್ಲೆಯಲ್ಲಿ ಅರೇಬಿಕಾ ಕಾಫಿ ಕೊಯ್ಲು ಆರಂಭಗೊAಡಿದೆ.

ಅಧಿಕ ವೆಚ್ಚ, ದುಬಾರಿ ಸಂಬಳ

ಒAದೇ ಬಾರಿ ಕಾಫಿ ಕೊಯ್ಲು ಮಾಡುವುದರಿಂದ, ಕಾಫಿ ಬೆಳೆಗಾರರಿಗೆ ಕಡಿಮೆ ಹೊರೆ ಯಾಗುತ್ತದೆ ಹಾಗೂ ವೆಚ್ಚವು ಕೂಡ ಕಡಿಮೆಯಾಗುತ್ತದೆ. ಆದರೆ ಅರೇಬಿಕಾ ಕಾಫಿ ಅವಧಿಗೂ ಮೊದಲೇ ಹಣ್ಣಾಗಿರುವುದರಿಂದ ಗಿಡದಲ್ಲೇ ಹಣ್ಣಾದ ಕಾಫಿಯನ್ನು ಬಿಡಲು ಆಗದೇ, ಕೊಯ್ಲು ಮಾಡಲೇ ಬೇಕಾದ ಪರಿಸ್ಥಿತಿ ಕಾಫಿ ಬೆಳಗಾರರದ್ದು. ಕಾಫಿ ಗಿಡದಲ್ಲಿ ಹಣ್ಣಾಗಿರುವ, ಕಾಫಿಯನ್ನು ಮಾತ್ರ ಕೊಯ್ಲು ಮಾಡಬೇಕಾಗುತ್ತದೆ. ಒಂದೇ ಗಿಡದಲ್ಲಿ ಎರಡರಿಂದ, ಮೂರು ಬಾರಿ ಕೊಯ್ಲು ಮಾಡ ಬೇಕಾಗುತ್ತದೆ. ಇದರಿಂದ ಕಾಫಿ ಬೆಳೆಗಾರರು ನಷ್ಟ ಅನುಭವಿಸು ವಂತಾಗಿದೆ.

ಕಾರ್ಮಿಕರಿಗೆ ದುಬಾರಿ ಸಂಬಳ ನೀಡಿ ಕಾಫಿ ಕೊಯ್ಲು ಮಾಡಬೇಕು. ಇತ್ತೀಚಿನ

(ಮೊದಲ ಪುಟದಿಂದ) ವರ್ಷಗಳಲ್ಲಿ ಕಾಫಿ ಕೊಯ್ಲು ಮಾಡಲು,ದಿನಕ್ಕೆ ೪೦೦ ರಿಂದ ೪೫೦ ರೂ ಸಂಬಳ ನೀಡಿದರೆ ಮಾತ್ರ ಕಾಫಿ ಕೊಯ್ಲಿಗೆ, ಜನರು ಬರುವುದು. ಅಕಾಲಿಕ ಮಳೆಯಿಂದ ಅವಧಿಗೂ ಮೊದಲೇ ಅರೇಬಿಕಾ ಕಾಫಿ ಹಣ್ಣಾಗಿರುವುದರಿಂದ ಹಣ್ಣಾಗಿರುವ ಕಾಫಿಯನ್ನು ಗಿಡದಲ್ಲೇ ಬಿಟ್ಟರೆ,ಇರುವ ಕಾಫಿ ಕೂಡ ನೆಲಕಚ್ಚುತ್ತದೆ.ಸಿಗುವುದು ಸಿಗಲಿ ಎಂದು ಹೇಳಿ, ಇದೀಗ ಕಾಫಿ ಬೆಳೆಗಾರರು ಅರೇಬಿಕಾ ಕಾಫಿ ಕೊಯ್ಲಿಗೆ ಮುಂದಾಗಿದ್ದಾರೆ.

ಒಣಗಿಸಲು ತೊಂದರೆ

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣವಿದ್ದು, ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಕಾಫಿ ಬೆಳೆಗಾರರಿಗೆ ಸಮಸ್ಯೆ ಎದುರಾಗಿದೆ. ಅಕಾಲಿಕ ಮಳೆಯಿಂದ ಅರೇಬಿಕಾ ಕಾಫಿ, ಹಣ್ಣಾಗಿ ಕೊಯ್ಲು ಮಾಡಿದ ಕಾಫಿ ಒಣಗಿಸಲು ಬೆಳೆಗಾರರು ಹರಸಾಹಸಪಡುವಂತಾಗಿದೆ. ಅಕಾಲಿಕ ಮಳೆ, ಹವಾಮಾನ ವೈಪರೀತ್ಯ, ಕಾರ್ಮಿಕ ಕೊರತೆ, ಸೂಕ್ತ ಬೆಲೆ ಸಮಸ್ಯೆ, ಇದರ ನಡುವೆ ಅವಧಿಗೂ ಮುನ್ನವೇ ಅರೇಬಿಕಾ ಕಾಫಿ ಹಣ್ಣಾಗಿರುವುದು ಜಿಲ್ಲೆಯ ಕಾಫಿ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

- ಇಸ್ಮಾಯಿಲ್ ಕಂಡಕರೆ