ಕೂಡಿಗೆ, ನ. ೧: ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಕುಶಾಲನಗರ ತಹಶೀಲ್ದಾರ್ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ತಾ. ೫ ರಂದು ಬೆಳಿಗ್ಗೆ ೧೧ ಗಂಟೆಯಿAದ ಒಂದು ಗಂಟೆಯವರೆಗೆ ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಜನತೆಗೆ ಪೌತಿ ಖಾತೆ ಬದಲಾವಣೆ, ಪಟ್ಟೆದಾರಿಕೆ ಬದಲಾವಣೆ ಹಾಗೂ ಗ್ರಾಮಗಳ ಜನತೆಗೆ ಪಹಣಿಯಲ್ಲಿ ತಿದ್ದುಪಡಿ ಸಂಬAಧ ಆಂದೋಲನವನ್ನು ಏರ್ಪಡಿಸಲಾಗಿದೆ.

ಅಗತ್ಯ ದಾಖಲಾತಿಗಳಾದ ಮೂಲ ಜಮಾಬಂದಿ, ಪಹಣಿ, ಆಕಾರ್ ಬಂದ್, ವಂಶವೃಕ್ಷ, ಮರಣ ದೃಢೀಕರಣ ಪತ್ರ, ನೈಜ ದೃಢೀಕೃತ ದಾಖಲೆಗಳೊಂದಿಗೆ ಹಾಜರಾಗಿ ಇದರ ಸದುಪಯೋಗ ಪಡೆದು ಕೊಳ್ಳುವಂತೆ ಉಪ ತಹಶೀಲ್ದಾರ್ ಕೆ.ಜೆ. ಮಧುಸೂದನ್ ಅವರು ತಿಳಿಸಿದ್ದಾರೆ.

ಅದೇ ರೀತಿಯಲ್ಲಿ ತಾ. ೯ ರಂದು ಕೂಡಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ, ತಾ. ೧೫ ರಂದು ಹೊಸಕೋಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.