*ಗೋಣಿಕೊಪ್ಪ, ಅ. ೩೧: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ ನಿಯಮಿತದಿಂದ ನಡೆದ ಡಿಪ್ಲೋಮೋ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪರೀಕ್ಷೆಯಲ್ಲಿ ಮಡಿಕೇರಿಯ ಕೆ.ಐ.ಸಿ.ಎಂ ಕಾಲೇಜಿನ ವಿದ್ಯಾರ್ಥಿನಿ ಎಂ.ಕೆ ಕಾವ್ಯಶ್ರೀ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದಿದ್ದಾರೆ.
ಕಾವ್ಯಶ್ರೀ ಅಮ್ಮತ್ತಿ ಬಿಳುಗುಂದ ಗ್ರಾಮದ ಶಿಕ್ಷಕಿ ಹೇಮಾವತಿ ಹಾಗೂ ಕಾಂತರಾಜ್ ದಂಪತಿಯ ಪುತ್ರಿಯಾಗಿದ್ದು ಅರಮೇರಿ ಎಸ್.ಎಂ.ಎಸ್ ಅಕಾಡೆಮಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.