ಮಡಿಕೇರಿ, ಅ. ೩೧: ನವೆಂಬರ್ ತಿಂಗಳಿನಲ್ಲಿ ೪ ರಿಂದ ೧೩ ರವರೆಗೆ ಆಸ್ಟೆçÃಲಿಯಾದ ಕ್ವೀನ್ಸ್ಲ್ಯಾಂಡಿನ ಗೋಲ್ಡ್ ಕೋಸ್ಟ್ನಲ್ಲಿ ನಡೆಯುವ ೧೨ನೇ ಪಾನ್ ಪೆಸಿಫಿಕ್ ಮಾಸ್ಟರ್ಸ್ ಗೇಮ್ಸ್ನಲ್ಲಿ ವೀರಾಜಪೇಟೆ ತಾಲೂಕು ಕದನೂರು ಗ್ರಾಮದ ನಿವಾಸಿಯಾದ ಪಾಲೇಕಂಡ ಪಿ. ಬೋಪಯ್ಯ (೯೪) ಅವರು ೨೦೦ ಮಿ.,
೧೦೦ ಮಿ. ಓಟ ಮತ್ತು ಜಾವಲೀನ್ ಹಾಗೂ ಅವರ ಸಹೋದರ ಪೊನ್ನಂಪೇಟೆ ತಾಲೂಕು, ಕುಟ್ಟಂದಿ ಗ್ರಾಮದ ನಿವಾಸಿ ಪಾಲೇಕಂಡ ಪಿ. ಬೆಳ್ಯಪ್ಪ (೮೫) ಅವರು ೨೦೦ ಮೀ., ೧೦೦ ಮೀ., ೧೫೦೦ ಮೀ. ಓಟ ಮತ್ತು ೧೫೦೦ ಮೀ. ರೇಸ್ ವಾಕ್ ಹಾಗೂ ಜಾವಲೀನ್ ಥ್ರೋ ಇವುಗಳಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಇವರುಗಳು ತಾ. ೨ ರಂದು (ನಾಳೆ) ಆಸ್ಟೆçÃಲಿಯಾಕ್ಕೆ ಪ್ರಯಾಣ ಮಾಡಲಿದ್ದಾರೆ.
ಈ ಮೊದಲು ಇವರು ರಾಜ್ಯ ಹಾಗೂ ರಾಷ್ಟçಮಟ್ಟದ ಮಾಸ್ಟರ್ಸ್ ಗೇಮ್ಸ್ನಲ್ಲಿ ಭಾಗವಹಿಸಿ ಹಲವಾರು ಪದಕ ಮತ್ತು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.