ಮಡಿಕೇರಿ, ಅ. ೩೧: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆ ಹಾಗೂ ಇನ್ನಿತರ ಹಲವು ಗ್ರಾ.ಪಂ.ಗಳಲ್ಲಿ ತೆರವಾಗಿದ್ದ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಬಹುತೇಕ ಕಡೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ತಾ.೨೯ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಇಂದು ನಿಗದಿತ ಕೇಂದ್ರಗಳಲ್ಲಿ ನಡೆಯಿತು.
ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ಈ ಹಿಂದಿನ ಅಧಿಕಾರಾವಧಿ ಇತ್ತೀಚೆಗಷ್ಟೇ ಮುಗಿದಿದ್ದು, ಈ ಪಂಚಾಯಿತಿಯ ೧೭ ಸ್ಥಾನಗಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಉಳಿದಂತೆ ವಿವಿಧ ಕಾರಣಗಳಿಂದ ತೆರವಾಗಿದ್ದ ಮಡಿಕೇರಿ ತಾಲೂಕಿನ ಪೆರಾಜೆ, ವೀರಾಜಪೇಟೆ ತಾಲೂಕಿನ ಬಿಳುಗುಂದ ಹಾಗೂ ಮಾಲ್ದಾರೆ ಮತ್ತು ಸೋಮವಾರಪೇಟೆ ತಾಲೂಕಿನ ನಿಡ್ತ ಹಾಗೂ ದೊಡ್ಡಮಳ್ತೆ ಗ್ರಾ.ಪಂ.ನ ಒಂದೊAದು ಸ್ಥಾನಕ್ಕೆ ಉಪಚುನಾವಣೆ ನಡೆದಿದೆ. ಕೊಡಗರಹಳ್ಳಿ ಗ್ರಾ.ಪಂ.ನ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು.
ಚೆನ್ನಯ್ಯನಕೋಟೆ ಗ್ರಾ.ಪಂ.ಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಹಾಗೂ ಬಿಳುಗುಂದ ಮತ್ತು ಮಾಲ್ದಾರೆಯ ಒಂದೊAದು ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ವೀರಾಜಪೇಟೆ ಪುರಭವನದಲ್ಲಿ ಹಾಗೂ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಮತ ಎಣಿಕೆ ಆಯಾ ತಾಲೂಕು ಕಚೇರಿಗಳಲ್ಲಿ ನಡೆಯಿತು. ಪ್ರಕಟವಾದ ಫಲಿತಾಂಶದಲ್ಲಿ ಬಹುತೇಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಚೆನ್ನಯ್ಯನಕೋಟೆ
ಚೆನ್ನಯ್ಯನಕೋಟೆ ಗ್ರಾ.ಪಂ.ನ ಒಟ್ಟು ೧೭ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ ೧೬ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಹಾಗೂ ಒಂದು ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯ ಗಳಿಸಿದ್ದಾರೆ.
ವಿಜೇತರು
ಚೆನ್ನಯ್ಯನಕೋಟೆ ಪಂಚಾಯಿತಿಯಲ್ಲಿ ಒಟ್ಟು ೬ ಕ್ಷೇತ್ರದ ೧೭ ಸ್ಥಾನಗಳಿಗೆ ಚುನಾವಣೆ ನಡೆದಿದ್ದು ವಿವಿಧ ರಾಜಕೀಯ ಪಕ್ಷಗಳ ಬೆಂಬಲಿತ ಒಟ್ಟು ೫೪ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ೧೬ ಸ್ಥಾನಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ ೧ ಸ್ಥಾನ ಪಡೆದುಕೊಂಡಿದೆ. ವೈ ಆರ್ ಜಯಲಕ್ಷಿö್ಮ (೨೦೦), ನಾಗರಾಜು (೨೩೮), ಗೀತಾ ಜೆ.ಆರ್ (೧೫೫), ಹೆಚ್. ಆರ್ ಮಂಜು (೧೬೭), ಶಿಲ್ಪಾ ಹೆಚ್. ಆರ್ (೧೫೫), ಎ.ಸಿ ರೋಹಿಣಿ (೨೦೯), ಎಂ ಡಿ ಅರುಣ್ ಕುಮಾರ್ (೨೦೩), ಲೇಖನ ಹೆಚ್.ಎಸ್ (೩೭೩), ಲಿಂಗಮ್ಮ ಜೆ,ಎ (೩೬೩), ಶಿವಲಿಂಗ ಹೆಚ್.ಎ (೩೨೫), ಎ.ಎಂ ವಿಜು (೪೨೦), ಹೆಚ್.ಎಲ್ ಕಾವೇರಿ (೨೬೦), ಬಿ.ವಿ ರೇಷ್ಮಾ (೨೫೦), ಅಪ್ಪಾಜಿ (೩೧೦), ಮಂಜುಳಾ (೨೭೮), ರವಿ(೪೩೪), ಶೀಲಾ (೩೫೭) ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.
ಚುನಾವಣಾಧಿಕಾರಿಗಳಾಗಿ ತಹಶೀಲ್ದಾರ್ ಅರ್ಚನಾಭಟ್, ಗ್ರೇಡ್ ೨ ತಹಶೀಲ್ದಾರ್ ಪ್ರದೀಪ್‌ಕುಮಾರ್, ಶಿರಸ್ಥೆದಾರ್ ಪೊನ್ನು, ಕೆ.ಕೆ ರಾಜೇಶ್, ಮಹೇಂದ್ರ, ಲೋಕೇಶ್, ಮಂಜುನಾಥ್ ಕಾರ್ಯ ನಿರ್ವಹಿಸಿದರು. ಎಣಿಕೆ ಸಂದರ್ಭದಲ್ಲಿ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ, ರೀನಾ ಪ್ರಕಾಶ್, ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್, ಕಾರ್ಯದರ್ಶಿ ವಾಟೇರಿರ ಬೋಪಣ್ಣ, ಮೂಕೊಂಡ ವಿಜು ಸುಬ್ರಮಣಿ, ಗುಮ್ಮಟ್ಟಿರ ಕಿಲನ್, ಕುಟ್ಟಂಡ ಅಜಿತ್ ಮತ್ತಿತರರು ಉಪಸ್ಥಿತರಿದ್ದರು.
ಬಿಳುಗುಂದ - ಮಾಲ್ದಾರೆ
ಬಿಳುಗುಂದ ಗ್ರಾ.ಪಂ.ನ ಒಂದು ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾದ ಹೆಚ್.ಹೆಚ್. ರಷ್ಮಿ (೩೭೫) ಹಾಗೂ ಮಾಲ್ದಾರೆಯಲ್ಲಿ ಜಯ ಪಿ. (೪೨೯) ಜಯಗಳಿಸಿದ್ದಾರೆ. ಮಾಲ್ದಾರೆಯಲ್ಲಿ ಮತ್ತೊಬ್ಬ ಅಭ್ಯರ್ಥಿ ತುಳಸಿ (೨೩೭) ಹಾಗೂ ಬಿಳುಗುಂದದಲ್ಲಿ ಇನ್ನೋರ್ವ ಅಭ್ಯರ್ಥಿ ಪ್ರದೀಪ್ (೧೯೫) ಮತ ಗಳಿಸಿದರು.
ಪೆರಾಜೆ
ಪೆರಾಜೆ ಗ್ರಾ.ಪಂ.ನ ತೆರವಾಗಿದ್ದ ಒಂದು ಸದಸ್ಯ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರವೀಣ್ ಮಜಿಕೋಡಿ ಜಯಗಳಿಸಿದ್ದಾರೆ.
(ಮೊದಲ ಪುಟದಿಂದ) ಇವರು ತಮ್ಮ ಪ್ರತಿಸ್ಪರ್ಧಿ ತುಳಸಿ ಗಾಂಧಿ ಪ್ರಸಾದ್ ಅವರ ವಿರುದ್ಧ ೫೮ ಮತಗಳ ಅಂತರದಿAದ ಜಯಗಳಿಸಿದರು.
ಈ ಹಿಂದೆ ಪೆರಾಜೆ ಗ್ರಾಮಪಂಚಾಯತ್‌ನ ಕೆ.ಪೆರಾಜೆ ವಾರ್ಡ್ನ ಸಾಮಾನ್ಯ ಕ್ಷೇತ್ರದಿಂದ ಗಾಂಧಿ ಪ್ರಸಾದ್ ಬಂಗಾರಕೋಡಿ ಅವರು ಸದಸ್ಯರಾಗಿದ್ದರು.
ಅವರ ಅಕಾಲಿಕ ನಿಧನದಿಂದ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ದಿ.ಗಾಂಧಿಪ್ರಸಾದ್ ಅವರ ಪತ್ನಿ ತುಳಸಿ ಗಾಂಧಿ ಪ್ರಸಾದ್ ೨೩೯ ಮತ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರವೀಣ್ ಮಜಿಕೋಡಿ ೨೯೬ ಮತ ಹಾಗೂ ಪಕ್ಷೇತರ ಅಭ್ಯರ್ಥಿಯಾದ ಜಯಪ್ರಕಾಶ್ ಹೊದ್ದೆಟ್ಟಿ ೧೭ ಮತಗಳನ್ನು ಪಡೆದುಕೊಂಡರು. ತಹಶೀಲ್ದಾರ್ ಮಹೇಶ್ ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು.
ನಿಡ್ತ- ದೊಡ್ಡಮಳ್ತೆ
ತಾಲೂಕಿನ ನಿಡ್ತ ಹಾಗೂ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿದ್ದ ತಲಾ ಒಂದೊAದು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತರು ಜಯಗಳಿಸಿದ್ದಾರೆ. ಇಂದು ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಮತ ಎಣಿಕೆ ನಡೆಯಿತು.
ನಿಡ್ತ ಗ್ರಾಮ ಪಂಚಾಯಿತಿಯ ಒಂದು ಸ್ಥಾನಕ್ಕೆ ೫ ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇದರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹರೀಶ್ ಅವರು ೩೫೯ ಮತಗಳನ್ನು ಗಳಿಸಿ ಜಯ ದಾಖಲಿಸಿದರು. ಉಳಿದಂತೆ ಕಣದಲ್ಲಿದ್ದ ಎಂ.ಬಿ. ಮಿಥುನ್ ಚಕ್ರವರ್ತಿ-೨೦೯, ಎನ್.ಎನ್. ರವೀಶ್-೦೪, ರಶ್ಮಿ- ೧೧೮, ಎನ್.ಇ. ರಾಮಯ್ಯ -೧೨೧ ಮತಗಳನ್ನು ಗಳಿಸಿ ಸೋಲನುಭವಿಸಿದರು. ಈ ಬೂತ್‌ನಲ್ಲಿ ಒಟ್ಟು ೮೧೯ ಮತಗಳು ಚಲಾವಣೆಯಾಗಿದ್ದು, ಇದರಲ್ಲಿ ೮ ಮತಗಳು ತಿರಸ್ಕೃತಗೊಂಡವು.ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿರಾಗಿದ್ದ ಅನುಕುಮಾರ್ ಅವರು ೧೨೨ ಮತಗಳಿಸಿ ಜಯ ಸಾಧಿಸಿದರು. ಉಳಿದಂತೆ ಕಣದಲ್ಲಿದ್ದ ಡಿ.ಎಸ್.ಪೂವಯ್ಯ-೧೧೦, ಮೋಹನ್-೨೭ ಮತಗಳಿಸಿ ಸೋಲನುಭವಿಸಿದರು. ಒಟ್ಟು ೨೬೦ ಮತಗಳು ಚಲಾವಣೆಯಾಗಿದ್ದು, ೧ ಮತ ತಿರಸ್ಕೃತವಾಯಿತು.
ಇಂದು ಬೆಳಿಗ್ಗೆ ಪಟ್ಟಣದಲ್ಲಿರುವ ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ತಾಲೂಕು ತಹಶೀಲ್ದಾರ್ ನರಗುಂದ ಅವರ ಉಪಸ್ಥಿತಿಯಲ್ಲಿ ಮತಗಳ ಎಣಿಕೆ ನಡೆಯಿತು. ಚುನಾವಣಾ ಶಾಖೆಯ ಶಿರಸ್ತೇದಾರ್ ಲೋಹಿತ್, ರಿಟರ್ನಿಂಗ್ ಅಧಿಕಾರಿಗಳಾದ ಹೇಮಂತ್, ಕಿರಣ್ ಅವರುಗಳು ಮತ ಎಣಿಕೆ ಪ್ರಕ್ರಿಯೆ ನಡೆಸಿದರು.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸುತ್ತಿದ್ದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು, ಭಾರತೀಯ ಜನತಾ ಪಾರ್ಟಿ ನೇತೃತ್ವದ ಸರ್ಕಾರದ ಜನಪರ ಕಾರ್ಯಕ್ರಮಗಳು ಗ್ರಾಮ ಮಟ್ಟದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಪಾರದರ್ಶಕ ಆಡಳಿತ ಹಾಗೂ ಜನತೆಯ ಸಮಸ್ಯೆಗಳಿಗೆ ತಕ್ಷಣಕ್ಕೆ ಸ್ಪಂದಿಸುವ ಸರ್ಕಾರವಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಸರ್ಕಾರದ ಕೆಲಸ ಕಾರ್ಯಗಳಿಂದಾಗಿ ಉಪ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಅಭಿಪ್ರಾಯಿಸಿದರು.
ಕೊಡಗರಹಳ್ಳಿ
ಕೊಡಗರಹಳ್ಳಿ ಗ್ರಾ.ಪಂ.ನ ಒಂದು ವಾರ್ಡ್ಗೆ ನಡೆದ ಉಪ ಚುನಾವಣೆಯಲ್ಲಿಯೂ ಸಹ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುನಿಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮತ ಎಣಿಕೆ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ. ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಪ್ರಮುಖರಾದ ಬಿ.ಬಿ. ಭಾರತೀಶ್, ಹೆಚ್.ಕೆ. ಮಾದಪ್ಪ, ಚಂದ್ರಶೇಖರ್ ಹೇರೂರು, ಬಗ್ಗನ ಸುದೀಪ್, ಎಸ್.ಕೆ. ರಘು, ಕೊಮಾರಿ ಸತೀಶ್, ಹೆಚ್.ಎನ್. ಅಶೋಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.