ಗೋಣಿಕೊಪ್ಪಲು, ನ. ೧: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ದಿ.ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ ಕೊಡವ ಕೌಟಂಬಿಕ ರಿಂಕ್ ಹಾಕಿ ಪಂದ್ಯಾವಳಿಯ ೬ನೇ ದಿನದಾಟದಲ್ಲಿ ಚೇಂದAಡ ಮತ್ತು ಕುಪ್ಪಂಡ (ಕೈಕೇರಿ) ತಂಡಗಳು ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದುಕೊಂಡವು.
ನೆರವAಡ ವಿರುದ್ಧ ಚೇಂದAಡ ೯-೩ ಗೋಲುಗಳ ಭರ್ಜರಿ ಜಯ ಗಳಿಸುವ ಮೂಲಕ ಪ್ರಿ -ಕ್ವಾರ್ಟರ್ ಗೆ ಪ್ರವೇಶಿಸಿತು. ಚೇಂದAಡ ಉತ್ತಪ್ಪ ೩, ಸೋನು, ಬೋಪಣ್ಣ, ಅಮೋಘ ತಲಾ ೨ ಗೋಲು ಬಾರಿಸಿದರು. ನೆರವಂಡ ನಾಚಪ್ಪ ೨, ಪ್ರವೀಣ್ ೧ ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಬಾರಿಯಂಡ ತಂಡವನ್ನು ೫-೨ ಗೋಲುಗಳ ಅಂತರ ದಿಂದ ಸೋಲಿಸುವ ಮೂಲಕ ಕುಪ್ಪಂಡ ತಂಡ ಪ್ರಿ - ಕ್ವಾರ್ಟರ್ ಗೆ ಲಗ್ಗೆ ಇಟ್ಟಿತು. ಕುಪ್ಪಂಡ ನಾಚಪ್ಪ ೪ ಗೋಲು ಗಳಿಸಿ ಮಿಂಚಿದರು.
ಜಗತ್ ೧ ಗೋಲು ಬಾರಿಸಿದರು. ಬಾರಿಯಂಡ ಬೆಳ್ಳಿಯಪ್ಪ ೨ ಗೋಲು ಬಾರಿಸಿ ಸೋಲಿನ ಅಂತರ ತಗ್ಗಿಸಿದರು. ದಿನದ ಮೊದಲನೇ ಪಂದ್ಯದಲ್ಲಿ ಬಾರಿಯಂಡ ತಂಡ ಕಳ್ಳಂಗಡ ತಂಡವನ್ನು ೪-೨ ಗೋಲುಗಳಿಂದ ಮಣಿಸಿತು. ಬಾರಿಯಂಡ ಬೆಳ್ಳಿಯಪ್ಪ ೩, ಭೀಮಯ್ಯ ೧, ಕಳ್ಳಂಗಡ ಚೆಂಗಪ್ಪ, ಮಂದಣ್ಣ ತಲಾ ೧ ಗೋಲು ಗಳಿಸಿದರು. ಕುಪ್ಪಂಡ ತಂಡ ಬೊಟ್ಟೋಳಂಡ ತಂಡವನ್ನು ೪-೦ ಗೋಲಿನಿಂದ ಸೋಲಿಸಿತು. ಕುಪ್ಪಂಡ ಚಂಗಪ್ಪ ೨, ಕೆನಿತ್, ನಾಚಪ್ಪ ತಲಾ ೧ ಗೋಲು ಗಳಿಸಿದರು.
ಪಾಲಚಂಡ ತಂಡದ ವಿರುದ್ಧ ನೆರವಂಡ ೮-೫ ಗೋಲುಗಳ ಜಯ ಪಡೆಯಿತು. ನೆರವಂಡ ದರ್ಶನ್ ೩, ನಾಚಪ್ಪ, ದೇವಯ್ಯ ತಲಾ ೨, ಪ್ರವೀಣ್ ೧ ಗೋಲು ಹೊಡೆದರು ಸೋಲಿನ ನಡುವೆಯೂ ಪಾಲಚಂಡ ಬೋಪಣ್ಣ ೫ ಗೋಲು ಬಾರಿಸಿ ಮಿಂಚಿದರು.
ಚೇAದAಡ ತಂಡ ಪಾಲಂದಿರ ತಂಡದ ವಿರುದ್ಧ ೯-೪ ಗೋಲುಗಳಿಂದ ಜಯಭೇರಿ ಬಾರಿಸಿತು. ಚೇಂದAಡ ಉತ್ತಪ್ಪ ೫, ಬೋಪಣ್ಣ ೨, ಸೋನು, ಶಮ್ಮಿ ತಲಾ ೧ ಗೋಲು ಹೊಡೆದರು. ಪಾಲಂದಿರ ಉತ್ತಪ್ಪ ೩, ಮುತ್ತಣ್ಣ ೧ ಗೋಲು ಬಾರಿಸಿ ಸೋಲಿನ ಅಂತರ ತಗ್ಗಿಸಿದರು. ಕೇಳಂಗಡ ತಂಡ ಕುಮ್ಮಂಡ ತಂಡವನ್ನು ೭-೫ ಗೋಲುಗಳಿಂದ ಮಣಿಸಿತು. ಕೇಳಂಗಡ ಬೋಪಣ್ಣ ೪, ಬಿದ್ದಪ್ಪ, ಸುಹಾನ್, ಭವನ್ ತಲಾ ೧ ಗೋಲು ಬಾರಿಸಿದರು. ಕುಮ್ಮಂಡ ನಾಣಯ್ಯ ೪, ಗಣಪತಿ ೧ ಗೋಲು ಗಳಿಸಿದರು.
ಅಪ್ಪಚೆಟ್ಟೋಳಂಡ ವಿರುದ್ಧ ಚೆಕ್ಕೆರ ೮-೩ ಗೋಲಿನಿಂದ ಗೆಲುವು ಪಡೆಯಿತು. ಚೆಕ್ಕೆರ ಆದರ್ಶ್ ೪, ಬಿಷ್ನಲ್ ೨, ಸಿದ್ಧಾಂತ್, ಬೋಪಣ್ಣ ತಲಾ ೧, ಅಪ್ಪಚೆಟ್ಟೋಳಂಡ ಅಯ್ಯಪ್ಪ ೨, ಯಾನ್ ೧ ಗೋಲು ಗಳಿಸಿದರು. ಮುಕ್ಕಾಟಿರ (ಕಡಗದಾಳ್) ತಂಡ ಮುಲ್ಲೇಂಗಡ ತಂಡದ ವಿರುದ್ಧ ೧೨-೧ ಗೋಲಿನಿಂದ ಭರ್ಜರಿ ಜಯ ಸಾಧಿಸಿತು. ಮುಕ್ಕಾಟಿರ ನಾಣಯ್ಯ ೫, ಕಾವ್ಯ ೩, ಅಶ್ವಿನ್ ೨, ರಿಶ್ವಿನ್, ಕುಟ್ಟಯ್ಯ ತಲಾ ೧ ಗೋಲು ಗಳಿಸಿದರು. ಮುಲ್ಲೇಂಗಡ ಪರ ಉತ್ತಪ್ಪ ಏಕೈಕ ಗೋಲು ಹೊಡೆದರು.
ಇಟ್ಟೀರ ತಂಡ ತೀತಿಮಾಡ ತಂಡವನ್ನು ೩-೧ ಗೋಲಿನಿಂದ ಸೋಲಿಸಿತು. ಇಟ್ಟಿರ ಲೆಹರ್ ೨, ರೋಷನ್ ೧, ತೀತಿಮಾಡ ಉತ್ತಪ್ಪ ೧ ಗೋಲು ಗಳಿಸಿದರು. ಮುರುವಂಡ ತಂಡ ಕೊಂಗೇಟಿರ ವಿರುದ್ಧ ೪-೨ ಗೋಲುಗಳ ಜಯ ದಾಖಲಿಸಿತು. ಮುರುವಂಡ ಪೊನ್ನಪ್ಪ ೨, ಕಾರಿಯಪ್ಪ, ಅಣ್ಣಪ್ಪ ತಲಾ ೧ ಗೋಲು ಬಾರಿಸಿದರು. ಕೊಂಗೇಟಿರ ಪೆಮ್ಮಯ್ಯ ೨ ಗೋಲು ಹೊಡೆದರು. ಚೇನಂಡ ತಂಡ ಪಳೆಯಂಡ ವಿರುದ್ಧ ೫-೨ ಗೋಲುಗಳ ಅಂತರದ ಜಯ ಸಾಧಿಸಿತು. ಚೇನಂಡ ಮೌರ್ಯ ೩, ಹರ್ಷ, ಚಮನ್ ತಲಾ ೧, ಪಳೆಯಂಡ ಮೊಣ್ಣಪ್ಪ, ಕರುಂಬಯ್ಯ ತಲಾ ೧ ಗೋಲು ಗಳಿಸಿದರು.ಮೈದಾನದಲ್ಲಿ ನಡೆಯುತ್ತಿರುವ ದಿ.ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ ಪಂದ್ಯಾವಳಿಗೆ ಆಗಮಿಸಿದ ಚೇನಂಡ ಕುಟುಂಬಸ್ಥರು. ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರಾದ ಪಾಂಡAಡ ಬೋಪಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷರು, ಕಾರ್ಯದರ್ಶಿ, ನಿರ್ದೇಶಕರು ಸೇರಿದಂತೆ ಚೇನಂಡ ಕುಟುಂಬಸ್ಥರು ಉಪಸ್ಥಿತರಿದ್ದರು.