ಮಡಿಕೇರಿ, ಅ. ೩೧ : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ), ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢ ಶಾಲಾ ವಿಭಾಗ) ಬ್ಲಾಕ್ -೧, ಸಂತ ಮೈಕಲರ ಪ್ರೌಢಶಾಲೆ, ಸಂತ ಜೋಸೆಫರ ಪ್ರೌಢ ಶಾಲೆ, ಸಂತ ಜೋಸೆಫರ ಪದವಿ ಪೂರ್ವ ಕಾಲೇಜು ಈ ಐದು ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ತಾ. ೬ ರಂದು ಬೆಳಗ್ಗೆ ೯.೩೦ ಗಂಟೆಯಿAದ ೧೨ ಗಂಟೆಯವರೆಗೆ ಮತ್ತು ಮಧ್ಯಾಹ್ನ ೨ ಗಂಟೆಯಿAದ ೪ ಗಂಟೆಯವರೆಗೆ ನಡೆಯಲಿದೆ.
ಆದ್ದರಿಂದ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದ ಬಳಿ ಹಾಜರಿರಬೇಕು. ಪರೀಕ್ಷೆ ಪ್ರಾರಂಭವಾದ ನಂತರ ಯಾವುದೇ ಅಭ್ಯರ್ಥಿ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶವಿರುವುದಿಲ್ಲ. ಅಭ್ಯರ್ಥಿ ಪ್ರವೇಶ ಪತ್ರದೊಂದಿಗೆ ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ನನ್ನು ಮಾತ್ರ ತರಲು ಅವಕಾಶವಿದೆ. ಇದರೊಂದಿಗೆ ಅಗತ್ಯವಿದ್ದಲ್ಲಿ ಪೆನ್ಸಿಲ್, ಸ್ಕೇಲ್, ಕೋನಮಾಪಕ, ಕೈವಾರಗಳನ್ನು ಬಳಸಬಹುದು. ಆದರೆ ಮೊಬೈಲ್, ಪುಸ್ತಕ, ಹಾಳೆ, ಲಾಗ್ ಟೇಬಲ್, ಕ್ಯಾಲ್ಕುಲೇಟರ್, ಯಾವುದೇ ಬಗೆಯ ಎಲೆಕ್ಟಾçನಿಕ್ ಉಪಕರಣ ಮತ್ತಿತರ ಬಳಸುವ ಅವಕಾಶವಿರುವುದಿಲ್ಲ. ಆದ್ದರಿಂದ ಅನುಮತಿ ಇರುವ ಸಾಮಗ್ರಿಗಳೊಂದಿಗೆ ಮಾತ್ರ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು.
ಹೆಚ್ಚಿನ ವಿವರಗಳಿಗೆ ಕಚೇರಿಯ ಪರೀಕ್ಷಾ ನೋಡಲ್ ಅಧಿಕಾರಿ ಡಾ.ದೊಡ್ಡೆ ಗೌಡ ಬಿ.ಸಿ. ಅವರ ಮೊ.ಸಂ.೮೭೨೨೫೦೫೧೪೬ ನ್ನು ಸಂಪರ್ಕಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವೇದಮೂರ್ತಿ ಅವರು ತಿಳಿಸಿದ್ದಾರೆ.