ಎಲ್ಲಾದರೂ ಇರು, ಎಂತಾ ದರೂ ಇರು ಎಂದೆAದಿಗೂ ನೀ ಕನ್ನಡವಾಗಿರು’-ರಾಷ್ಟçಕವಿ ಕುವೆಂಪು
ವಿಫುಲವಾದ ಭೌಗೋಳಿಕ ಸಂಪತ್ತನ್ನು ಐತಿಹಾಸಿಕ ಪರಂಪರೆ ಯುಳ್ಳ ಕರ್ನಾಟಕ ಭಾರತದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಸಾಂಸ್ಕೃತಿಕವಾಗಿ ವಿಶ್ವ ಮಾನ್ಯತೆ ಯನ್ನು ಗಳಿಸಿದೆ. ಕಲೆ ಸಾಹಿತ್ಯ ಹಾಗೂ ಲಲಿತಕಲೆಗಳಲ್ಲಿ ತನ್ನದೇ ಆದ ವೈಶಿಷ್ಟö್ಯವನ್ನು ಬೆಳೆಸಿ ಕೊಂಡಿದೆ. ಪ್ರಾಚೀನ ಕಾಲ ದಿಂದಲೂ ಅದು ಕಾಲಚಕ್ರದಲ್ಲಿ ಒದಗಿ ಬಂದ ಏಳು-ಬೀಳುಗಳನ್ನು ಲೆಕ್ಕಿಸದೆ ಸ್ವಂತಿಕೆಯನ್ನು ಬೆಳೆಸಿ ಕೊಂಡು ಬಂದಿದೆ.
ಕರ್ನಾಟಕ ಅನೇಕ ಸಾಮ್ರಾಜ್ಯ ಗಳ ತವರು ಮನೆ. ಇದು ಅನೇಕ ಮನೆತನಗಳ ಗಣಿ ಶಿಲ್ಪಕಲೆಯ ಒಂದು ಕೇಂದ್ರ. ಇದರ ಸಂಸ್ಕೃತಿಯ ಪರಂಪರೆ ವೈಭಯುತ ವೈವಿಧ್ಯತೆ ಇದ್ದರೂ ಏಕತೆ, ಸಹನೆ ಮತ್ತು ಪರಸ್ಪರ ಹೊಂದಿಕೊಳ್ಳುವ ಮನೋಭಾವ, ವಿವಿಧ ಮತಗಳ ಸಮನ್ವಯ ಇವು ಇದರ ಸಂಸ್ಕೃತಿಯ ತಿರುಳು. ಈ ತಿರುಳನ್ನು ಇಲ್ಲಿನ ಅರಸರು, ಸಂತರು ಕವಿಗಳು ಬುದ್ಧಿಜೀವಿಗಳು ಸುಧಾರಕರು, ಬೋಧಕರು ಹಾಗೂ ಕಲಾಕಾರರು ಘೋಷಿಸಿದ್ದಾರೆ. ಉತ್ತರದ ಆರ್ಯ ಸಂಸ್ಕೃತಿ ಮತ್ತು ದಕ್ಷಿಣ ಭಾರತದ ದ್ರಾವಿಡ ಸಂಸ್ಕೃತಿಗಳ ಮಿಲನವನ್ನು ಇಲ್ಲಿ ಕಾಣಬಹು ದಾಗಿದೆ. ಭಾರತದ ಅನ್ಯಭಾಗಗಳಲ್ಲಿ ಕಾಣಲಾಗದ ರಾಜ ಮನೆತನಗಳ ಸುದೀರ್ಘ ಪರಂಪರೆ (ಕ್ರಿ.ಸ. ೨೩೦ ರಿಂದ ೧೯೪೭ರವರೆಗೆ) ಕರ್ನಾಟಕದ್ದಾಗಿದೆ.
ಶಾಲಿವಾಹನದಿಂದ ಆರಂಭಿಸಿ ಮೈಸೂರು ಓಡೆಯರವರೆಗೆ ಹಲವು ಮನೆತನಗಳು ಇದನ್ನು ಆಳಿವೆ. ಗೌತಮಿ ಪುತ್ರ, ಶಾತÀಕರ್ಣಿ, ಮಯೂರವರ್ಮ, ಇಮ್ಮಡಿ ಪುಲಿಕೇಶಿ, ೨ನೇ ಗೋವಿಂದ, ಕೃಷ್ಣದೇವರಾಯ, ಕೆಳದಿ ಚೆನ್ನಮ್ಮ ಮತ್ತು ಕಿತ್ತೂರು ಚೆನ್ನಮ್ಮ ಮೊದಲಾದ ವೀರಾಗ್ರಣಿಗಳಿಗೆ ಜನ್ಮವಿತ್ತನಾಡು ಕರುನಾಡು. ನಮ್ಮ ಕನ್ನಡ ನಾಡಿನ ಬಗ್ಗೆ ಸಾಹಿತ್ಯ ರೂಪದಲ್ಲಿ ಮಹಾನ್ ವ್ಯಕ್ತಿಗಳು ಶ್ರೀಮಂತ ಗೊಳಿಸಿದ್ದಾರೆ. ಕನ್ನಡಕ್ಕೆ ೮ ಮಂದಿ ಮಹಾನ್ ವ್ಯಕ್ತಿಗಳು ಜ್ಞಾನಪೀಠ ಪುರಸ್ಕಾರ ತಂದು ಕೊಟ್ಟಿದ್ದಾರೆ. ಅಲ್ಲದೆ ೩ ಜನ ಮಹಾನ್ ವ್ಯಕ್ತಿಗಳು ರಾಷ್ಟçಕವಿ ಎಂದು ಖ್ಯಾತಿ ತಂದಿದ್ದಾರೆ.
ಎರಡು ಸಾವಿರ ವರ್ಷಗಳಲ್ಲಿ ಕರ್ನಾಟಕ ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ ತನ್ನದೇ ಆದ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಬಂದಿದೆ. ಈ ದೀರ್ಘ ಕಾಲಾವಧಿಯಲ್ಲಿ ಶಾತವಾಹನ ಕದಂಬ ಗಂಗ ಬಾದಾಮಿ ಚಾಲುಕ್ಯ ರಾಷ್ಟçಕೂಟ ಕಲ್ಯಾಣಿ ಚಾಲುಕ್ಯ, ಹೊಯ್ಸಳ ವಿಜಯನಗರ ಕೆಳದಿ ಅರಸರು ಹಾಗೂ ಮೈಸೂರು ಒಡೆಯರು ಮುಂತಾದ ಕನ್ನಡ ರಾಜವಂಶಗಳು ತಮ್ಮ ಆಳ್ವಿಕೆ ನಡೆಸಿದವು. ಉಪಲಬ್ಧವಾಗಿರುವ ಕನ್ನಡದ ಅತ್ಯಂತ ಪ್ರಾಚೀನ ಕೃತಿ ಕವಿರಾಜ ಮಾರ್ಗದಲ್ಲಿ ಕನ್ನಡನಾಡು ಕಾವೇರಿಯಿಂದ ಗೋದಾವರಿಯ ವರೆಗೆ ಪಸರಿಸಿತ್ತೆಂದು ಉಲ್ಲೇಖಿಸಿರು ವುದಾದರೂ ವಿವಿಧ ರಾಜವಂಶಗಳ ಕಾಲದಲ್ಲಿ ಆಗಾಗ್ಗೆ ಕರ್ನಾಟಕ ಗಡಿ ಹಿಗ್ಗಿದಂತೆ ಕುಗ್ಗಿದ್ದೂ ಉಂಟು.
ಭಾಷಾವಾರು ಆಧಾರದ ಮೇಲೆ ಕರ್ನಾಟಕ ಪ್ರಾಂತದ ರಚನೆಗಾಗಿ ಆರಂಭವಾದ ಆಂದೊಲನ ಸ್ವಾತಂತ್ರö್ಯ ಸಂಗ್ರಾಮದ ಜೊತೆಯಲ್ಲೇ ಮೂಡಿ ಬರತೊಡಗಿತು. ಏಕೀಕರಣದ ಕಲ್ಪನೆ ಮೂಲತಃ ಒಂದು ಆಂದೋಲನ ವಾಗಿ ರೂಪುಗೊಳ್ಳಲು ಕಾರಣರಾದ ವರು ಉದಾರಿ ಇಂಗ್ಲೀಷ್ ಅಧಿಕಾರಿ ಗಳು ಬುದ್ಧಿಜೀವಿಗಳು, ಕವಿಗಳು, ಲೇಖಕರು ಹಾಗೂ ಪತ್ರಕರ್ತರು ಮೊದಲಾದವರು ಇವರ ಪ್ರಯತ್ನ ದಿಂದಾಗಿ ಜನತೆಯಲ್ಲಿ ಮೂಡಿದ ಭಾವನಾತ್ಮಕ ವಾತವರಣ ದೇಶದ ಸ್ವಾತಂತ್ರö್ಯಗಳಿಕೆಗೂ ಪೂರಕವಾಗಿದ್ದ ರಿಂದ ಸಹಜವಾಗಿಯೇ ರಾಜಕಾರಣಿ ಗಳೂ ಏಕೀಕರಣಕ್ಕಾಗಿ ಬೆಂಬಲಿಸ ತೊಡಗಿದರು.
ಇಲ್ಲಿನ ಜನರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಈ ನಾಡಿಗೆ ಕರ್ನಾಟಕ ಎಂಬ ನಾಮಕರಣದ ಬಗ್ಗೆ ದೀರ್ಘವಾದ-ವಿವಾದಗಳೇ ನಡೆದವು. ೧೯೭೩ನೇ ನವೆಂಬರ್ ೧ ರಂದು ಅಂದಿನ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಕಾಲದಲ್ಲಿ ಅದು ನೆರವೇರಿತು.
ಕನ್ನಡ ಭಾಷೆಯನ್ನು ಶ್ರೀಮಂತ ಗೊಳಿಸಿದ ಕೊಡಗು ಜಿಲ್ಲೆಯ ಬಿಳಿಗೇರಿ ಗ್ರಾಮದಲ್ಲಿ ಜನಿಸಿದ ಭಾರತೀಸುತರ ಬಯಲುದಾರಿ ಎಡಕಲ್ಲು ಗುಡ್ಡದ ಮೇಲೆ ಹುಲಿಯ ಹಾಲಿನಮೇವು ಮೊದಲಾದ ಕಾದಂಬರಿಗಳು ಕನ್ನಡ ಚಿತ್ರ ಲೋಕಕ್ಕೂ ಕಾಲಿರಿಸಿ ಕೀರ್ತಿತಂದು ಕೊಟ್ಟಿದ್ದಾರೆ ಅಲ್ಲದೆ ಕನ್ನಡ ಹೊನ್ನುಡಿ ದೇವಿಯನ್ನು ಪೂಜಿಸುವೆ ನಾ ಆರಾಧಿಸುವೆ, ಕನ್ನಡಡಿಂಡಿಮ ಬಾರಿಸುವೆ ಎಂದು ಬರೆಯುತ ಬಾಳುವೆ. ಹಂಸಲೇಖ ಬರೆದ ಎಸ್. ಪಿ. ಬಾಲಸುಬ್ರಮಣ್ಯಂ ಹಾಡಿರುವ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣನು ಮೆಟ್ಟಬೇಕು ಹಂಸ ಲೇಖರು ಬರೆದ ಡಾ|| ರಾಜ್ಕುಮಾರ್ ಹಾಡಿದ ಗೀತೆ ಯುವ ಜನರ ಮನಗೆದ್ದಿದೆ ಅಲ್ಲದೆ ಕನ್ನಡನಾಡಿನ ಜೀವನದಿ ಕಾವೇರಿ ಮತ್ತು ಅಂದವೋ ಚೆಂದವೋ ಕನ್ನಡನಾಡು ಮುಂತಾದ ಗೀತೆಗಳೂ ಸಹ ಸಂತಶಿಶುನಾಳ ಶರೀಫರ ತತ್ವಪದಗಳು ಜನಪದ ಸಾಹಿತ್ಯ ಹಾಗೂ ಲಾವಣಿ ಪದಗಳು ಕನ್ನಡ ಭಾಷಾಭಿಮಾನಕ್ಕೆ ಮನ್ನಣೆ ದೊರಕಿಸಿವೆ ಅಲ್ಲದೆ ಅನೇಕ ಮಹಾನ್ ವ್ಯಕ್ತಿಗಳು ಕನ್ನಡ ಭಾಷೆ ಯನ್ನು ಶ್ರೀಮಂತ ಗೊಳಿಸಿ ಕನ್ನಡಿಗ ರೆಲ್ಲರೂ ಒಂದಾಗಿ ಬಾಳಿ ಎಂದು ಹಾರೈಸಿದ್ದಾರೆ.