ಮುಳ್ಳೂರು, ನ. ೧: ಸಮೀಪದ ಆಲೂರು-ಸಿದ್ದಾಪುರ ಗ್ರಾ.ಪಂ. ಆಡಳಿತ ಮಂಡಳಿಯ ಸಾಮಾನ್ಯ ಸಭೆ ಗ್ರಾ.ಪಂ. ಅಧ್ಯಕ್ಷ ಮೋಹನ್ ಕುಮಾರ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯುತು.

ಗ್ರಾ.ಪಂ. ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ, ಗ್ರಾ.ಪಂ. ವ್ಯಾಪ್ತಿಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಮಸ್ಯೆ ಪರಿಹರಿ ಸುವ ಕುರಿತು ಚರ್ಚಿಸಲಾಯಿತು.

ನರೇಗ ಯೋಜನೆಯಡಿ ವಿವಿಧ ಕಾಮಗಾರಿ ಕೈಗೊಳ್ಳುವುದು, ೧೫ನೇ ಹಣಕಾಸು ಯೋಜನೆಯಡಿಯಲ್ಲಿರುವ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೊಳ್ಳುವುದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೋರಿ ಪಂಚಾಯತ್ ರಾಜ್ ಇಲಾಖೆಗೆ ಗ್ರಾ.ಪಂ.ಯಿAದ ಮನವಿ ಪತ್ರ ನೀಡುವುದು. ಗ್ರಾಮ ಪಂಚಾಯಿತಿಗೆ ಖಾಲಿ ಇರುವ ಕಾರ್ಯದರ್ಶಿ ಹುದ್ದೆ ತುಂಬುವ ಬಗ್ಗೆ ತಾಲೂಕು ಪಂಚಾಯಿತಿ ಸಿ.ಇ.ಓ. ಅವರಿಗೆ ಪತ್ರ ಬರೆಯುವಂತೆ ತೀರ್ಮಾನಿಸ ಲಾಯಿತು. ಈ ಸಂದರ್ಭ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಮೋಹನ್, ಸದಸ್ಯರ ಸಹಕಾರ ಇದ್ದಲ್ಲಿ ಮಾತ್ರ ಗ್ರಾ.ಪಂ. ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸದಸ್ಯರ ಸಲಹೆ ಮತ್ತು ಸಹಕಾರದಿಂದ ಉತ್ತಮ ಕೆಲಸ ಕಾರ್ಯ ಮಾಡಲು ಸಾಧ್ಯವಾಗುವು ದಲ್ಲದೆ ಸರಕಾರದ ವಿವಿಧ ಯೋಜನೆ ಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದರು.

ಸಭೆಯಲ್ಲಿ ಪಿ.ಡಿ. ಹರೀಶ್ ಸರಕಾರಿ ಪತ್ರ ಸುತ್ತೋಲೆಗಳ ಬಗ್ಗೆ ಮತ್ತು ಸಾರ್ವಜನಿಕರ ಅರ್ಜಿ ಅಹವಾಲುಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ದಮಯಂತಿ ಕರುಂಬಯ್ಯ, ಸದಸ್ಯರಾದ ಪಿ.ಎನ್. ಗಂಗಾಧರ್, ಪಿ.ಎಸ್. ಸತೀಶ್ ಕುಮಾರ್, ಕಿರಣ್, ಚಂದ್ರಮೋಹನ್, ರಂಗಶೆಟ್ಟಿ, ಮಲ್ಲಪ್ಪ, ಮುತ್ತಮ್ಮ, ಲೀಲಮ್ಮ, ರಾಧಮಣಿ, ಯಮುನಾ, ಮೀನಾಕ್ಷಿ ಮತ್ತು ಗ್ರಾ.ಪಂ.ಸಿಬ್ಬAದಿ ಕೆ.ಎಸ್. ಮಂಗಳ, ಲಕ್ಷಿö್ಮ ಹಾಜರಿದ್ದರು.