ಪೆರಾಜೆ, ಅ. ೩೦: ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಎಲ್ಲಾ ಗ್ರಾಮಗಳಿಂದ ಮೃತ್ತಿಕೆ ಸಂಗ್ರಹಿಸುವ ರಥವನ್ನು ಪೆರಾಜೆಯಲ್ಲಿ ಸ್ವಾಗತಿಸಲಾಯಿತು.

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಎದುರಿನ ಕಾವೇರಿಗದ್ದೆಯ ವಠಾರದಲ್ಲಿ ರಥವನ್ನು ಊರಿನ ಮಹಿಳೆಯರು ಪೂರ್ಣಕುಂಭದಿAದ ಸ್ವಾಗತಿಸಿ ನಂತರ ಪೂಜಾ ಕೈಂಕರ್ಯವನ್ನು ನೆರವೇರಿಸಿ ಮಣ್ಣನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಆ ಕಾಲಘಟ್ಟದಲ್ಲಿಯೇ ಬೆಂಗಳೂರು ನಗರದ ಬಗ್ಗೆ ವಿಶೇಷ ಕಲ್ಪನೆಯನ್ನಿಟ್ಟುಕೊಂಡಿದ್ದರು. ನಗರದ ನಿರ್ಮಾಣ ಹೇಗಿರಬೇಕು ಎನ್ನುವ ದೂರದೃಷ್ಟಿಯನ್ನು ಇಟ್ಟುಕೊಂಡು ಬೆಂಗಳೂರು ನಗರವನ್ನು ಕಟ್ಟಿದ್ದರು. ಅವರ ಕಂಚಿನ ಪ್ರತಿಮೆಯನ್ನು ನಿರ್ಮಿಸುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭ ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪ್ರಮುಖರಾದ ಮನು ಮುತ್ತಪ್ಪ, ಕಾಂಗೀರ ಸತೀಶ್, ಗ್ರಾ.ಪಂ. ಉಪಾಧ್ಯಕ್ಷೆ ಜಯಲಕ್ಷಿö್ಮ ಧರಣೀದರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಅಶೋಕ್ ಪೆರುಮುಂಡ, ದೇವಸ್ಥಾನದ ಅರ್ಚಕರಾದ ವೆಂಕಟ್ರಮಣ ಕೆ.ಪಾಂಙಣ್ಣಾಯ, ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು ಸೇರಿದಂತೆ ಗ್ರಾ.ಪಂ. ಸದಸ್ಯರು, ಹಾಪ್‌ಕಾಮ್ಸ್ನ ನಿರ್ದೇಶಕರು, ಪೆರಾಜೆ ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕರು, ಕಂದಾಯ ಇಲಾಖೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಊರಿನ ವಿವಿಧ ಸ್ತಿçà ಶಕ್ತಿ ಸಂಘದ ಸದಸ್ಯರು ಸೇರಿದಂತೆ ಗ್ರಾಮಸ್ಥರು ಇದ್ದರು.