ಮಡಿಕೇರಿ, ಅ. ೩೦: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಗೋಲ್ಡನ್ ಪಾಮ್ ಮಿಲಿಟರಿ ಕ್ಯಾಂಟೀನ್ನಲ್ಲಿ ದಾಖಲೆಯ ವಹಿವಾಟು ನಡೆದಿದೆ. ಅಧಿಕ ಸಂಖ್ಯೆಯಲ್ಲಿ ನಿವೃತ್ತ ಯೋಧರಿರುವ ಜಿಲ್ಲೆಯಲ್ಲಿ ಮಾಜಿ ಸೈನಿಕರಿಗೆ ಅನುಕೂಲವಾಗುವಂತೆ ೧೯೮೩ರಲ್ಲಿ ಕ್ಯಾಂಟೀನ್ ಪ್ರಾರಂಭಿಸಲಾಗಿದೆ. ಇದೀಗ ೧೯೮೩ರಿಂದಲೇ ಪ್ರಥಮ ಬಾರಿಗೆ ಎಂಬAತೆ ತಿಂಗಳೊAದರಲ್ಲಿ ರೂ. ೧ ಕೋಟಿ ೨ ಲಕ್ಷದಷ್ಟು ವಹಿವಾಟು ನಡೆದಿದೆ. ೨೦೨೨ರ ಅಕ್ಟೋಬರ್ ತಿಂಗಳ ದಾಖಲೆ ಇದಾಗಿದೆ. ಈ ಹಿಂದೆ ಕಳೆದ ಮೇ ತಿಂಗಳಿನಲ್ಲಿ ತಿಂಗಳೊAದರಲ್ಲಿ ರೂ. ೯೬ ಲಕ್ಷ ವಹಿವಾಟು ನಡೆದಿದ್ದು, ಈ ತನಕದ ದಾಖಲೆಯಾಗಿತ್ತು. ಕಳೆದ ಎರಡು ವರ್ಷಗಳ ಹಿಂದೆ ವೀರಾಜಪೇಟೆಯಲ್ಲಿಯೂ ಮತ್ತೊಂದು ಮಿಲಿಟರಿ ಕ್ಯಾಂಟೀನ್ ಪ್ರಾರಂಭಿಸಲಾಗಿದ್ದು, ಇಲ್ಲಿಯೂ ಈ ತಿಂಗಳಲ್ಲಿ ರೂ. ೭೫ ಲಕ್ಷದಷ್ಟು ವಹಿವಾಟು ನಡೆದಿದೆ. ಉಳಿದಂತೆ ಈ ತನಕ ಸರಾಸರಿ ರೂ. ೭೦-೭೫ ಲಕ್ಷದಷ್ಟು ವಹಿವಾಟು ತಿಂಗಳೊAದರಲ್ಲಿ ನಡೆಯುತ್ತಿತ್ತು. ಮಡಿಕೇರಿ ಕ್ಯಾಂಟೀನ್ ಈ ಬಾರಿ ದಾಖಲೆ ಸೃಷ್ಟಿಸಿದೆ ಎಂದು ಕ್ಯಾಂಟೀನ್ ವ್ಯವಸ್ಥಾಪಕ ನಿವೃತ್ತ ಸುಬೇದಾರ್ ಮುಂಡ್ಯೋಳAಡ ಅಜಿತ್ ಸುಬ್ಬಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.