ಕಡತ ವಿಲೇವಾರಿಗೆ ಸಮಯ ನಿಗದಿ
ಮಡಿಕೇರಿ, ಅ. ೩೦: ಕರ್ನಾಟಕ ಭೂ ಕಂದಾಯ ಅಧಿನಿಯಮ ೧೯೬೪ ಕಲಂ ೮೦ಕ್ಕೆ ತಿದ್ದುಪಡಿಯಾದಂತೆ ಕೊಡಗು ಜಿಲ್ಲೆಯಲ್ಲಿನ ಬಾಣೆ ಜಮೀನುಗಳಿಗೆ ಕಂದಾಯ ನಿಗದಿ ಮಾಡಲಾಗುತ್ತಿದೆ.
ಕಂದಾಯ ನಿಗದಿ ಕಡತಗಳ ವಿಲೇವಾರಿಗೆ ಸಂಬAಧಿಸಿದAತೆ ಈ ಕುರಿತಾಗಿ ಸಮಯ ನಿಗದಿಪಡಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಸುತ್ತೋಲೆಯ ವಿವರ ಇಂತಿದೆ.
ಕರ್ನಾಟಕ ಭೂಕಂದಾಯ ಅಧಿನಿಯಮ ೧೯೬೪ ಕಲಂ ೮೦ಕ್ಕೆ ತಿದ್ದುಪಡಿಯಾದಂತೆ ಕೊಡಗು ಜಿಲ್ಲೆಯಲ್ಲಿನ ಬಾಣೆ ಜಮೀನುಗಳಿಗೆ ಕಂದಾಯ ನಿಗದಿ ಮಾಡಲಾಗುತ್ತಿದೆ. ಪ್ರಸ್ತುತ ಕಂದಾಯ ನಿಗದಿ ಪ್ರಕರಣಗಳಲ್ಲಿ ಸಾರ್ವಜನಿಕರು ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ನೀಡಿ ಸದ್ರಿ ಅರ್ಜಿಗಳನ್ನು ಆಯಾ ತಾಲೂಕಿನ ತಹಶೀಲ್ದಾರರ ಕಚೇರಿಯಿಂದ ನಾಡಕಚೇರಿಗಳಿಗೆ ಕಳುಹಿಸಲಾಗುತ್ತಿದೆ. ಆಯಾ ಹೋಬಳಿಗಳ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ಪರಿವೀಕ್ಷಕರು ಸ್ಥಳ ಪರಿಶೀಲನೆ ಮಾಡಿ ಚೆಕ್‌ಲಿಸ್ಟ್ ತಯಾರಿಸಿ, ತಹಶೀಲ್ದಾರರ ಕಚೇರಿಗೆ ಕಡತಗಳನ್ನು ಕಳುಹಿಸುತ್ತಿರುವುದಾಗಿದೆ. ನಂತರ ತಹಶೀಲ್ದಾರ್ ಕಚೇರಿಯಿಂದ ಸದ್ರಿ ಕಡತವನ್ನು ಸರ್ವೆ ಶಾಖೆಗೆ ಕಳುಹಿಸುತ್ತಿದ್ದು, ಸಂಬAಧಿಸಿದ ಭೂಮಾಪಕರು ಅಳತೆ ಮಾಡಿ, ಪ್ರತಿ ಪುಸ್ತಕ, ಟಿಪ್ಪಣಿ, ಕಂದಾಯ ತಖ್ತೆ, ಪಿ.ಟಿ. ಶೀಟ್ ಹಾಗೂ ಚೆಕ್‌ಲಿಸ್ಟ್ ತಯಾರಿಸಿ ಪರ್ಯಾವೇಕ್ಷಕರ ಅನುಮೋದನೆ ಪಡೆದು ಭೂದಾಖಲೆಗಳ ಸಹಾಯಕ ನಿರ್ದೇಶಕರ ಅನುಮೋದನೆಯ ನಂತರ ತಹಶೀಲ್ದಾರ್ ಕಚೇರಿಯ ಎಂ.ಸಿ. ಶಾಖೆಗೆ ಕಳುಹಿಸಲಾಗುತ್ತಿತ್ತು. ಬೆಳೆಯ ಬಗ್ಗೆ ತಹಶೀಲ್ದಾರರು ಸ್ಥಳ ತನಿಖೆ ಮಾಡಿ ಕಂದಾಯ ಅನುಮೋದನೆಗೆ ಉಪವಿಭಾಗಾಧಿಕಾರಿಗಳಿಗೆ ಕಳುಹಿಸುತ್ತಿರುವುದಾಗಿದೆ.
ಅಧಿಕ ವಿಸ್ತೀರ್ಣವಿದ್ದಲ್ಲಿ ಉಪವಿಭಾಗಾಧಿಕಾರಿಗಳು ಸ್ಥಳ ತನಿಖೆ ಮಾಡಿ, ಕಂದಾಯ ನಿಗದಿ ಮಾಡಿ ಆದೇಶ ಹೊರಡಿಸಿದ ನಂತರ ತಹಶೀಲ್ದಾರರ ಕಚೇರಿಗೆ ಕಳುಹಿಸಲಾಗುತ್ತಿದೆ. ನಂತರ ಕಡತವನ್ನು ಹಿಂದಳ ಕಂದಾಯ ವಸೂಲಾತಿಗಾಗಿ ನಾಡಕಚೇರಿಗೆ ಕಳುಹಿಸಲಾಗುತ್ತಿದ್ದು, ಕಂದಾಯ ಪಾವತಿಸಿಕೊಂಡ ನಂತರ ಆಕಾರ್ ಬಂದ್ ದುರಸ್ತಿಗೆ ತಹಶೀಲ್ದಾರರ ಕಚೇರಿಯಿಂದ ಭೂದಾಖಲೆಗಳ ಉಪನಿರ್ದೇಶಕರ ಕಚೇರಿಗೆ ಕಳುಹಿಸಿ, ಭೂದಾಖಲೆಗಳ ಉಪನಿರ್ದೇಶಕರ ಮೇಲು ಸಹಿಯ ನಂತರ ಅಂತಿಮವಾಗಿ ಭೂಮಿ ಶಾಖೆಗೆ ಆರ್.ಟಿ.ಸಿ. ಇಂಡೀಕರಣಕ್ಕಾಗಿ ಕಳುಹಿಸಲಾಗುತ್ತಿದೆ.
ಮೇಲೆ ತಿಳಿಸಿದಂತೆ ಕಂದಾಯ ನಿಗದಿ ಪ್ರಕರಣಗಳಲ್ಲಿ ಅನುಸರಿಸುತ್ತಿರುವ ಕ್ರಮದಲ್ಲಿ ಕೆಲವೊಂದು ಅನಗತ್ಯ ಅಂಶಗಳಿದ್ದು ಹಾಗೂ ಕಂದಾಯ ನಿಗದಿಗೆ ಇಂತಿಷ್ಟೇ ಕಾಲಾವಧಿಯನ್ನು ನಿಗದಿಪಡಿಸದೇ ಇರುವುದರಿಂದ ಹಲವು ಪ್ರಕರಣಗಳಲ್ಲಿ ಕಡತ ವಿಲೇವಾರಿಗೊಳಿಸುವಲ್ಲಿ ವಿಳಂಬವುAಟಾಗುತ್ತಿದ್ದು, ಸಾರ್ವಜನಿಕರಿಂದ ದೂರುಗಳು ಸ್ವೀಕೃತಗೊಳ್ಳುತ್ತಿರುತ್ತದೆ. ಆದ್ದರಿಂದ ಕಂದಾಯ ನಿಗದಿಗಾಗಿ ಸ್ವೀಕಾರಗೊಳ್ಳುವ ಅರ್ಜಿಗಳನ್ನು ಸಮರ್ಪಕವಾಗಿ, ತ್ವರಿತವಾಗಿ ವಿಲೇವಾರಿಗೊಳಿಸಲು ಕಾರ್ಯ ವಿಧಾನ ಮತ್ತು ಮಾರ್ಗಸೂಚಿಯನ್ನು ಅನುಸರಿಸಲು ಸೂಚಿಸಲಾಗಿದೆ.
ಕಾರ್ಯ ವಿಧಾನ: ಆಯಾ ತಾಲೂಕಿನ ತಹಶೀಲ್ದಾರರ ಕಚೇರಿಯಲ್ಲಿ ದ್ವಿಪ್ರತಿಯಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸ್ವೀಕರಿಸುವುದು ಹಾಗೂ ಸ್ವೀಕರಿಸಿದ ಅರ್ಜಿಗಳನ್ನು ಪ್ರತ್ಯೇಕ ವಹಿಯಲ್ಲಿ ನಿರ್ವಹಿಸಿ ಸಂಬAಧಿಸಿದ ಕಂದಾಯ ಪರಿವೀಕ್ಷಕರು ಹಾಗೂ ಆಯಾ ತಾಲೂಕಿನ ಸರ್ವೆ ಶಾಖೆಗೆ ಕಳುಹಿಸುವುದು (೩ ದಿನಗಳು).
ಕಂದಾಯ ಪರಿವೀಕ್ಷಕರು ಸಂಬAಧಿಸಿದ ಭೂಮಾಪಕರೊಂದಿಗೆ ಸ್ಥಳ ಪರಿಶೀಲಿಸಿ ಹೇಳಿಕೆ ಮಹಜರು, ಸ್ಪಷ್ಟ ವರದಿಯೊಂದಿಗೆ ತಹಶೀಲ್ದಾರ್ ಕಚೇರಿಗೆ ವರದಿ ಸಲ್ಲಿಸುವುದು ಹಾಗೂ ಭೂಮಾಪಕರು ಸರ್ವೆ ಮಾಡಿ ನೆಲ ಪ್ರತಿ, ಪಿ.ಟಿ. ಶೀಟ್, ಕಂದಾಯ ತಖ್ತೆಯೊಂದಿಗೆ ಪರ್ಯಾವೇಕ್ಷಕರ ಸಹಿ ಹಾಗೂ ಸಹಾಯಕ ನಿರ್ದೇಶಕರು, ಭೂದಾಖಲಾತಿಗಳ ಇಲಾಖೆ ಇವರ ಸಹಿಯೊಂದಿಗೆ ತಹಶೀಲ್ದಾರರ ಕಚೇರಿಗೆ ಸಲ್ಲಿಸುವುದು (೯ ದಿನಗಳು)
ತಹಶೀಲ್ದಾರರು ಉಪವಿಭಾಗಾಧಿಕಾರಿಗಳಿಗೆ ಕಂದಾಯ ದರ ಅನುಮೋದನೆಗೆ ಕಡತ ಸಲ್ಲಿಸುವುದು (೪ ದಿನಗಳು). ಉಪವಿಭಾಗಾಧಿಕಾರಿಗಳು ಕಂದಾಯ ದರ ಅನುಮೋದಿಸುವ ಬಗ್ಗೆ ಕ್ರಮವಹಿಸಿ, ಸರ್ವೆ ಶಾಖೆಗೆ ದುರಸ್ತಿ ಕಾರ್ಯಕ್ಕೆ ಕಡತ ಕಳುಹಿಸುವುದು ಹಾಗೂ ಪ್ರತ್ಯೇಕ ವಹಿಯಲ್ಲಿ ವಿಲೇವಾರಿ ವಿವರಗಳನ್ನು ದಾಖಲಿಸುವುದು (೪ ದಿನಗಳು). ಸರ್ವೆ ಶಾಖೆಯಲ್ಲಿ ದುರಸ್ತಿ ಕ್ರಮ ಕೈಗೊಂಡು ಭೂದಾಖಲೆಗಳ ಉಪನಿರ್ದೇಶಕರ ಮೇಲು ರುಜುವಿನೊಂದಿಗೆ ಆಕಾರ್ ಬಂದ್ ಪ್ರತಿಯೊಂದಿಗೆ ತಾಲೂಕು ಕಚೇರಿಗೆ ಕಳುಹಿಸುವುದು (೫ ದಿನಗಳು). ತಾಲೂಕು ಕಚೇರಿ ಭೂಮಿ ಶಾಖೆಯಲ್ಲಿ ಹಿಂದಳ ಬಾಕಿ ವಸೂಲಿಸಿ ಪಹಣಿಯಲ್ಲಿ ಕಂದಾಯ ದಾಖಲಿಸಲು ಕ್ರಮ ವಹಿಸುವುದು (೫ ದಿನಗಳು).
ಮೇಲ್ಕಂಡAತೆ ಸಂಬAಧಿಸಿದ ಅಧಿಕಾರಿ, ಸಿಬ್ಬಂದಿಗಳು ಕಂದಾಯ ನಿಗದಿ ಕಡತಗಳ ನಿರ್ವಹಣೆಗೆ ಪ್ರತ್ಯೇಕ ವಹಿ ನಿರ್ವಹಿಸಿ ತಮಗೆ ನೀಡಲಾದ ಕಾಲಾವಧಿಯೊಳಗೆ ಕಂದಾಯ ನಿಗದಿಗೊಳಿಸಿ ಪಹಣಿಯಲ್ಲಿ ದಾಖಲಿಸಿ ಕಡತ ವಿಲೇಗೊಳಿಸಲು ಕ್ರಮವಹಿಸಲು ಜಿಲ್ಲಾಧಿಕಾರಿಗಳು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.