ವೀರಾಜಪೇಟೆ, ಅ. ೨೯: ಹಿಂದಿ ರಾಷ್ಟç ಭಾಷೆ ಮಾತ್ರವಾಗಿರದೆ ಭಾವನಾತ್ಮಕ ಭಾಷೆಯು ಆಗಿದೆ, ಪ್ರತಿಯೊಬ್ಬ ಭಾರತೀಯನ ಸಾರ್ವಭೌಮದ ಪ್ರತೀಕವಾಗಿದೆ ಎಂದು ಗೋಣಿಕೊಪ್ಪಲು ಕಾಲ್ಸ್ ವಿದ್ಯಾಸಂಸ್ಥೆಯ ಹಿಂದಿ ಉಪನ್ಯಾಸಕಿ ರಂಜಿತಾ ಅಭಿಪ್ರಾಯಪಟ್ಟರು.
ವೀರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ಹಿಂದಿ ವಿಭಾಗ ಹಾಗೂ ಐಕ್ಯೂಎಸಿ ಘಟಕಗಳ ಸಹಯೋಗದಲ್ಲಿ ನಡೆದ ಹಿಂದಿ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟಾçದ್ಯಂತ ಹಿಂದಿಯನ್ನು ಸಾರ್ವತ್ರಿಕಗೊಳಿಸುವ ಅಗತ್ಯವಿದೆ. ಹಿಂದಿ ಭಾರತೀಯ ಸಂಸ್ಕöÈತಿಯ ಪ್ರತೀಕ, ಹಿಂದಿ ಭಾಷೆಯನ್ನು ಅಧ್ಯಯನ ವಿಷಯ ಎಂದು ವಿದ್ಯಾರ್ಥಿಗಳು ಪರಿಗಣಿಸುವುದಕ್ಕಿಂತಲೂ ಅದೊಂದು ರಾಷ್ಟಿçÃಯ ಭಾವೈಕ್ಯತೆಯ ಸಂಕೇತ ಎಂದು ಭಾವಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ ಮಾತನಾಡಿ, ಹಿಂದಿಯು ಭಾರತೀಯ ಪರಂಪರೆಯ ಪ್ರತೀಕವಾಗಿದೆ, ಹಿಂದಿ ಕಲಿಯುವುದರಿಂದ ವಿದ್ಯಾರ್ಥಿಗಳಿಗೆ ಭಾಷೆಯ ಸ್ವರೂಪ, ಮಹತ್ವದ ಅರಿವು ಮೂಡುತ್ತದೆ, ಅಧ್ಯಯನದಿಂದ ಭಾಷೆಯ ಬೆಳವಣಿಗೆ ಸಾಧ್ಯ. ಹಿಂದಿ ಭಾಷೆಯಲ್ಲಿ ಭಾರತೀಯ ಕಲೆ, ಸಂಸ್ಕöÈತಿ, ಇತಿಹಾಸವನ್ನು ನೋಡಲು ವಿವರಿಸಲು ಸಾಧ್ಯ, ಅಂತಹ ಹಿಂದಿ ಭಾಷೆಗೆ ಜಾಗತಿಕ ಮನ್ನಣೆ ಸಿಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಹಿಂದಿ ವಿಭಾಗದ ಮುಖ್ಯಸ್ಥೆ ದೀಪ, ಪ್ರಾಧ್ಯಾಪಕಿ ಶಶಿಕಲಾ ಹಾಗೂ ಆಂತರಿಕ ಗುಣಮಟ್ಟ ಕೋಶದ ಮುಖ್ಯಸ್ಥೆ ಹೇಮ ಉಪಸ್ಥಿತರಿದ್ದರು.
ಹಿಂದಿ ವಿಭಾಗದ ವಿದ್ಯಾರ್ಥಿಗಳು ದಿನದ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿ ಸಾಕ್ಷಿ ಸ್ವಾಗತಿಸಿ, ನಿತ್ಯ ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ಹಿಂದಿ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.