ಕುಶಾಲನಗರ, ಅ. ೨೯: ಶ್ರೀ ಕೋಣ ಮಾರಿಯಮ್ಮ ದೇವಾಲಯದ ವಾರ್ಷಿಕ ಪೂಜೆ ಅಂಗವಾಗಿ ೩ ದಿನಗಳ ಕಾಲ ನಡೆದ ಕಾರ್ಯಕ್ರಮಗಳಿಗೆ ತೆರೆ ಬಿದ್ದಿದೆ. ಕುಶಾಲನಗರ ತಾಲೂಕು ಮುಳ್ಳುಸೋಗೆಯ ಗ್ರಾಮ ವ್ಯಾಪ್ತಿಗೆ ಸೇರಿದ ಐತಿಹಾಸಿಕ ದೇವಾಲಯದಲ್ಲಿ ಸಂಪ್ರದಾಯದAತೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಶುಕ್ರವಾರ ಮಧ್ಯಾಹ್ನ ಮಹಾ ಮಂಗಳಾರತಿ ನಂತರ ಸಾವಿರಾರು ಸಂಖ್ಯೆಯ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಸುತ್ತಮುತ್ತ ವ್ಯಾಪ್ತಿಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ದೇವಾಲಯ ಸೇವಾ ಟ್ರಸ್ಟ್ನ ಅಧ್ಯಕ್ಷ ಎಸ್.ಜೆ. ಸತೀಶ್, ಉಪಾಧ್ಯಕ್ಷ ಇ. ರಾಜು, ಕಾರ್ಯದರ್ಶಿ ಕುಮಾರ್, ಖಜಾಂಚಿ ಹೆಚ್.ಜೆ. ಲೋಕೇಶ್ ಪ್ರಮುಖರಾದ ಆರ್. ಸುರೇಶ್, ಜಯವರ್ಧನ್, ಎಂ.ಎಸ್. ಶಿವಾನಂದ್, ಚೆಲುವರಾಜ್, ದುಷ್ಯಂತ್, ಮಂಜುನಾಥ್, ಎಂ.ಬಿ. ಸುರೇಶ್, ಧನರಾಜ್ ಮತ್ತಿತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವೀರಗಾಸೆ, ಡೊಳ್ಳು ಕುಣಿತ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಂಜೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ದೇವಿ ಮೆರವಣಿಗೆ ನಡೆಯಿತು.