ಸುಂಟಿಕೊಪ್ಪ, ಅ. ೨೯: ಲಯನ್ಸ್ ಸಂಸ್ಥೆಯು ಸಮಾಜÀ ಸೆೆÃವೆಯಲ್ಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಿದ್ದು, ಯುವಕರು ಇಂತಹ ಸಂಸ್ಥೆಯ ಸದಸ್ಯರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿ ಹೇಳಿದರು.

ಸುಂಟಿಕೊಪ್ಪ ಲಯನ್ಸ್ ಸಂಸ್ಥೆಗೆ ಅಧಿಕೃತ ಭೇಟಿ ನೀಡಿ ಇಲ್ಲಿಯ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ ನಂತರ ಸಮೀಪದ ಗುಡ್ಡೆಹೊಸೂರಿನ ಖಾಸಗಿ ರೆಸಾರ್ಟ್ನಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಲಯನ್ಸ್ ಸಂಸ್ಥೆಯು ನಿರ್ಗತಿಕರಿಗೆ ನೆರವು, ಆರೋಗ್ಯ ತಪಾಸಣೆ, ಪರಿಸರ ಕಾಳಜಿ ಇನ್ನಿತರ ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುವುದರ ಜೊತೆಗೆ ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸುವುದರ ಮೂಲಕ ಈ ಸಂಸ್ಥೆಯು ಹೆಮ್ಮರವಾಗಿ ಬೆಳೆದಿದೆ. ಮುಂದಿನ ದಿನಗಳಲ್ಲಿ ಸಮಾಜ ಸೇವೆಯ ಜೊತೆಯಲ್ಲಿ ಯುವಕರನ್ನು ಸಂಘಟಿಸಿ ಆ ಮೂಲಕ ಸಮಾಜದ ಏಳಿಗೆಗೆ ಕೈ ಜೋಡಿಸುವಂತೆ ಕಾರ್ಯ ನಿರ್ವಹಿಸಬೇಕೆಂದು ಕರೆ ನೀಡಿದರು. ಸಮಾರಂಭದಲ್ಲಿ ಅಧ್ಯಕ್ಷ ದಾಸಂಡ ಚಮನ್ ಚೆÀಟ್ಟಿಯಪ್ಪ, ಮಾಜಿ ಪ್ರಾಂತೀಯ ಅಧ್ಯಕ್ಷ ಶಾಸ್ವತ್ ಬೋಪಣ್ಣ, ಕಾರ್ಯದರ್ಶಿ ಲಯನ್ ಶಶಾಂಕ್ ಶ್ರೀನಿವಾಸ್, ಖಜಾಂಚಿ ಲಯನ್ ಡಿ.ಜೆ.ದರ್ಶನ್. ಸದಸ್ಯರಾದ ಪ್ರೀತಂ ಪ್ರಭಾಕರ್, ಗ್ಲೇನ್ ನಿಶಾಂತ್ ಮನೇಜಸ್, ನಿಕೇಶ್ ಜಗ್ಗಂಡ ಅಪ್ಪಚ್ಚು, ಲಯನ್ಸ್ ಸಂಸ್ಥೆಯ ಹಿರಿಯರಾದ ಎಸ್.ಜಿ.ಶ್ರೀನಿವಾಸ್, ಡಾ: ಯಶೋಧರ್ ಪೂಜಾರಿ, ಟಿ.ಕೆ ರಾಜೀವ್, ಎಂ.ಎ.ವಸAತ, ಪಿ.ಜಿ.ಪೆÀಮ್ಮಯ್ಯ, ವಿಜಯಕುಮಾರ್ ಹಾಜರಿದ್ದರು.