*ಗೋಣಿಕೊಪ್ಪ, ಅ. ೨೯ : ಗೋಣಿಕೊಪ್ಪ ಬೈಪಾಸ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಶಾಸಕ ಕೆ.ಜಿ ಬೋಪಯ್ಯ ಅವರು ಭೂಮಿ ಪೂಜೆ ನೆರವೇರಿಸಿದರು.
ಶ್ರೀ ಉಮಾಮಹೇಶ್ವರಿ ದೇವಸ್ಥಾನ ಮುಂಭಾಗದ ತಿರುವಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್ ಮತ್ತು ಸದಸ್ಯರುಗಳ ಸಮ್ಮುಖದಲ್ಲಿ ಪೂಜೆ ನೆರವೇರಿಸಿ ವಿಶೇಷ ಪ್ಯಾಕೇಜ್ನಡಿಯಲ್ಲಿ ೫೦ ಲಕ್ಷ ಅನುದಾನದ ಬಳಕೆಯೊಂದಿಗೆ ಒಟ್ಟು ೩೦೦ ಮೀಟರ್ ಉದ್ದ ೭೦೦ ಮೀಟರ್ ಅಗಲದಲ್ಲಿ ಮೊದಲನೇ ಭಾಗ ಹಾಗೂ ಎರಡನೇ ಭಾಗ ಎಂದು ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.
ನವೆÀಂಬರ್ ೧೫ರಿಂದ ಕಾಮಗಾರಿ ಪ್ರಾರಂಭವಾಗಲಿದ್ದು ಈ ಭಾಗದಲ್ಲಿ ವಾಹನಗಳು ಓಡಾಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿ ಗೋಣಿಕೊಪ್ಪ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಗೆ ಮತ್ತಷ್ಟು ಅನುದಾನವನ್ನ ಒದಗಿಸಿಕೊಡುವ ಭರವಸೆಯನ್ನು ಈ ಸಂದರ್ಭ ನೀಡಿದರು.
ರಾಜ್ಯ ಕೃಷಿ ಮೋರ್ಚಾ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಸದಸ್ಯರುಗಳಾದ ಶರತ್ಕಾಂತ್, ಬಿ.ಎನ್. ಪ್ರಕಾಶ್, ರಾಮಕೃಷ್ಣ ಭಟ್, ವಿವೇಕ್ ರಾಯ್ಕರ್, ಸೌಮ್ಯ ಬಾಲು, ಹಕೀಂ, ರತಿ ಅಚ್ಚಪ್ಪ, ಪುಷ್ಪಾ ಮನೋಜ್, ಜಿ.ಕೆ. ಗೀತಾ, ಕೊಣಿಯಂಡ ಬೋಜಮ್ಮ ಉತ್ತಪ್ಪ, ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ರೈ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಇದ್ದರು.