ಮಡಿಕೇರಿ, ಅ.೨೯: ದಾನ ಮಾಡುವದು ಮನುಷ್ಯನ ಒಂದು ಪ್ರಮುಖ ಗುಣವಾಗಿದ್ದು, ಎಲ್ಲರೂ ದಾನ ಮಾಡುವ ಗುಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಕರೆ ನೀಡಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಮಡಿಕೇರಿ ಲಯನ್ಸ್ ಸಂಸ್ಥೆ ಜಂಟಿ ಆಶ್ರಯದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಮೊದಲನೇ ವರ್ಷದ ಸಂಸ್ಮರಣೆ ಹಾಗೂ ಮಡಿಕೇರಿ ನಿವಾಸಿ ದಿ.ಪಂದ್ಯAಡ ಆಶಾ ಗಣಪತಿ ಮರಣದ ನಂತರ ದೇಹದ ಅಂಗಾAಗಗಳನ್ನು ದಾನ ನೀಡಿದರ ಪ್ರೇರೇಪಣೆಯಿಂದ ಹಮ್ಮಿಕೊಳ್ಳಲಾಗಿದ್ದ ನೇತ್ರದಾನ-ದೇಹದಾನ-ರಕ್ತದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೇತ್ರದಾನ-ರಕ್ತದಾನ-ಅಂಗಾAಗ ದಾನ ಮಾಡುವಂತಹ ಪುಣ್ಯದ ಕಾರ್ಯ ಮತ್ತೊಂದಿಲ್ಲ, ಮಾಡುವ ಸಂಪಾದನೆಯಲ್ಲಿ ಒಂದಿಷ್ಟು ದಾನ ಮಾಡಬೇಕು, ದಾನ ಮಾಡುವದರಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯವೆಂದು ಹೇಳಿದರು. ಹಿಂದೆ ತುರ್ತು ಸಂದರ್ಭದಲ್ಲಿ ರಕ್ತ ಸಿಗುವದು ಬಹಳ ಕಷ್ಟವಿತ್ತು, ಇದೀಗ ಲಯನ್ಸ್ ನೇತ್ರದಾನಕ್ಕೆ ೨೫ ಮಂದಿ ನೋಂದಣಿ

ಕಾರ್ಯಕ್ರಮದಲ್ಲಿ ೨೫ ಮಂದಿ ನೇತ್ರದಾನ ಮಾಡಲು ಮುಂದೆ ಬಂದಿದ್ದು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿಕೊAಡಿದ್ದಾರೆ. ೮ ಮಂದಿ ತಮ್ಮ ದೇಹದಾನ ಮಾಡಲು ನೋಂದಾಯಿಸಿದರೆ, ೧೪ ಮಂದಿ ರಕ್ತದಾನ ಮಾಡಿದರು.ಸಂಸ್ಥೆ ಬಂದ ಬಳಿಕ ಎಲ್ಲೆಡೆ ರಕ್ತ ಲಭ್ಯವಾಗುತ್ತಿದೆ ಎಂದು ಲಯನ್ಸ್ ಸೇವೆಯನ್ನು ಶ್ಲಾಘಿಸಿದರಲ್ಲದೆ, ಸಂಸ್ಥೆ ಯೊಂದಿಗೆ ದಸಂಸ ಕೈಜೋಡಿಸಿ ರುವದು ಉತ್ತಮ ಕಾರ್ಯವೆಂದು ಹೇಳಿದರು.

(ಮೊದಲ ಪುಟದಿಂದ) ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಸಾವು-ನೋವುಗಳನ್ನು ಕಂಡಿದ್ದೇವೆ. ಇನ್ನೂ ಕೂಡ ಅಮತ್ಯವಾಗಿಲ್ಲ, ಕೊರೊನಾದಿಂದ ಸಂಕಷ್ಟಕ್ಕೀಡಾದವರ ಭಾಗವಾಗಿ ನಾವುಗಳು ನಿಲ್ಲಬೇಕಿದೆ. ಹಾಗಾದರೆ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ. ದೇವರು ಮನುಷ್ಯನನ್ನು ಸಮಾನತೆಯಿಂದ ಸೃಷ್ಟಿ ಮಾಡಿದ್ದಾನೆ, ಸಮಾನತೆಯನ್ನು ನಾವು ಸೃಷ್ಟಿ ಮಾಡಿಕೊಂಡಿದ್ದೇವೆ. ಪರಸ್ಪರ ಬೇಧ ಬಾವ ಮಾಡಿಕೊಂಡಿದ್ದೇವೆ. ದೇಶದ ಅಭಿವೃದ್ಧಿಗೆ ಧರ್ಮ, ಜಾತಿ, ಭ್ರಷ್ಟಾಚಾರ ದೊಡ್ಡ ಸವಾಲಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಸಂಸ ಜಿಲ್ಲಾಧ್ಯಕ್ಷ ಹೆಚ್.ಎಲ್. ದಿವಾಕರ್; ಕಳೆದ ಹಲವು ವರ್ಷಗಳಿಂದ ಸಂಘಟನೆ ಮೂಲಕ ಹಲವಾರು ಹೋರಾಟ, ಸಮಾಜ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಇದರೊಂದಿಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇದರೊಂದಿಗೆ ರಕ್ತದಾನದಂತಹ ಕಾರ್ಯವನ್ನು ಕೂಡ ಮಾಡಿಕೊಂಡು ಬರಲಾಗುತ್ತಿದ್ದು, ಸಂಘಟನೆಯಲ್ಲಿಯೇ ೧೨೫ ಮಂದಿ ರಕ್ತದಾನಿಗಳಿರುವದಾಗಿ ಹೇಳಿದರು.

ಲಯನ್ಸ್ ಸಂಸ್ಥೆ ಅಧ್ಯಕ್ಷೆ ಕನ್ನಂಡ ಕವಿತಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಡಗದಾಳು ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಎಂ.ಜೆ. ಗಂಗಮ್ಮ ಮುಖ್ಯ ಬಾಷಣ ಮಾಡಿದರು. ಅತಿಥಿಗಳಾಗಿ ನೇತ್ರದಾನ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕೃಪಾಲಿನಿ ಅಯ್ಯಪ್ಪ, ರಕ್ತನಿಧಿ ವಿಭಾಗದ ಅಧಿಕಾರಿ ಡಾ.ಕೆ.ಪಿ. ಕರುಂಬಯ್ಯ, ಲಯನ್ಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ನವೀನ್ ಅಂಬೆಕಲ್, ಕಡಗದಾಳುವಿನ ದಾನಿ ಟಿ.ಆರ್. ವಾಸುದೇವ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ, ದಸಂಸ ಮಡಿಕೇರಿ ತಾಲೂಕು ಸಂಚಾಲಕ ಎ.ಪಿ. ದೀಪಕ್ ಉಪಸ್ಥಿತರಿದ್ದರು.