ಮಡಿಕೇರಿ, ಅ. ೨೯: ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೯೪ಎ(೪)ಗೆ ತಿದ್ದುಪಡಿ ಮಾಡಿದ ತರುವಾಯ ನಮೂನೆ-೫೭ ರಲ್ಲಿ ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಲಾಗಿದೆ.
ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಮಾಡಿಕೊಂಡಿರುವ ರೈತರು ಮತ್ತು ಸಣ್ಣ ರೈತರ ಹಿತದೃಷ್ಟಿಯಿಂದ ಅಂತಹ ಜಮೀನುಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ಹಾಗೂ ಸಕ್ರಮೀಕರಣಕ್ಕಾಗಿ ಬಹಳಷ್ಟು ಅನಧಿಕೃತ ಸಾಗುವಳಿದಾರರು ತಿಳುವಳಿಕೆಯ ಕೊರತೆಯಿಂದ ಅರ್ಜಿ ಸಲ್ಲಿಸದೆ ಇರುವವರಿಗೆ ಮತ್ತೊಂದು ಅವಕಾಶವನ್ನು ನೀಡುವ ಹಿತದೃಷ್ಟಿಯಿಂದ ನಮೂನೆ-೫೭ ರಲ್ಲಿ ಅರ್ಜಿ ಸಲ್ಲಿಸಲು ೨೦೨೨ರ ಮೇ ೩೦ ರಿಂದ ಒಂದು ವರ್ಷದ ಅವಧಿಯವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ತಿಳಿಸಿದ್ದಾರೆ.