ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
ಚೆಟ್ಟಳ್ಳಿ: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ದೀಪಾವಳಿ ಪ್ರಯುಕ್ತ ಲಕ್ಷಿö್ಮಪೂಜೆ ಹಾಗೂ ಗಣಪತಿ ಹೋಮ ನೆರವೇರಿತು. ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಸಂಘದ ಅಭಿವೃದ್ಧಿಗಾಗಿ ಪ್ರತಿ ವರ್ಷ ದೀಪಾವಳಿಯಂದು ಲಕ್ಷಿö್ಮಪೂಜೆ ನೆರವೇರಿಸಲಾಗುತ್ತಿದ್ದು, ಎಲ್ಲರಿಗೂ ಒಳಿತನ್ನು ಮಾಡಲೆಂದು ಬೇಡಿಕೊಂಡರು. ಮಹಾಪೂಜೆಯ ನಂತರ ಪ್ರಸಾದ ವಿತರಿಸಲಾಯಿತು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ, ಆಂತರಿಕ ಲೆಕ್ಕಪರಿಶೋಧಕ ರಮೇಶ್, ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.ಸೋಮವಾರಪೇಟೆ: ಬೆಳಕಿನ ಹಬ್ಬ ದೀಪಾವಳಿಯನ್ನು ತಾಲೂಕಿನೆಲ್ಲೆಡೆ ಸಡಗರ ಸಂಭ್ರಮದಿAದ ಆಚರಿಸಲಾಯಿತು. ಗ್ರಾಮೀಣ ಭಾಗಗಳಲ್ಲಿ ಗೋವುಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಮನೆಯ ಮುಂಭಾಗವನ್ನು ಸ್ವಚ್ಛಗೊಳಿಸಿ, ಸಗಣಿ ಕುಪ್ಪೆಗೆ ಚೆಂಡು ಹೂವಿನಿಂದ ಅಲಂಕಾರ ಮಾಡಿ, ರಂಗೋಲಿ ಬಿಡಿಸಿ ಅಲಂಕರಿಸಲಾಗಿತ್ತು. ಮನೆಗಳಲ್ಲಿ ಸಂಜೆ ದೀಪಗಳನ್ನಿರಿಸಿ ಪೂಜೆ ಸಲ್ಲಿಸಲಾಯಿತು. ಮಕ್ಕಳಾದಿಯಾಗಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ದೀಪಾವಳಿ ಹಿನ್ನೆಲೆ ಇಲ್ಲಿನ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಸಂಜೆ ದೇವಾಲಯಕ್ಕೆ ಗೋವುಗಳನ್ನು ತಂದು ಗೋ ಪೂಜೆ ನೆರವೇರಿಸಲಾಯಿತು. ಈ ಸಂದರ್ಭ ವೀರಶೈವ ಸಮಾಜದ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಮೃತ್ಯುಂಜಯ ಸೇರಿದಂತೆ ಭಕ್ತಾದಿಗಳು ಪಾಲ್ಗೊಂಡಿದ್ದರು.ಕಣಿವೆ: ಬೆಳಕಿನ ಹಬ್ಬ ದೀಪಾವಳಿಯನ್ನು ಗ್ರಾಮೀಣ ಪ್ರದೇಶಗಳ ಜನರು ಜನಪದ ಸಾಂಪ್ರದಾಯಿಕ ವಾಗಿ ಆಚರಿಸಿದರು. ಗ್ರಾಮ ಗಳಲ್ಲಿನ ಜನರ ಬದುಕಿನ ಜೀವಾಳ ವಾಗಿರುವ ಗೋವುಗಳು ಹಾಗೂ ಗೋವುಗಳಿಂದ ಉತ್ಪತ್ತಿ ಯಾಗುವ ಗೊಬ್ಬರದ ರಾಶಿಯನ್ನು ಪೂಜಿಸುವ ಮೂಲಕ ದೀಪಾವಳಿಯನ್ನು ಆಚರಿಸಿಕೊಂಡು ಬರುತ್ತಿರುವುದು ಜನಪದ ಸಂಸ್ಕೃತಿಯನ್ನು ಜೀವಂತಗೊಳಿಸಿತು. ಹಬ್ಬದ ದಿನದ ಸೂರ್ಯೋದಯದ ಸಂದರ್ಭ ಗೋವುಗಳ ಸಗಣಿಯ ಉಂಡೆಗೆ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿ ಮನೆ ಮುಂದಿನ ಬಾಗಿಲು ಹಾಗೂ ಆವರಣಕ್ಕಿಟ್ಟು ಪೂಜಿಸಲಾಯಿತು. ಬಳಿಕ ಸೂರ್ಯಾಸ್ತಮಾನದ ಹೊತ್ತಿನಲ್ಲಿ ಅಲಂಕೃತ ಹೂಗಳ ಸಗಣಿ ಉಂಡೆಗಳನ್ನು ತಿಪ್ಪೆಗಳಿಗೆ ಒಯ್ದು ಅಲ್ಲಿ ತಿಪ್ಪೆಯನ್ನು ಪೂಜಿಸಲಾಯಿತು. ಗೋವುಗಳು ಸಮೃದ್ಧಿಯಾದಷ್ಟು ಗೋವುಗಳ ಅವಲಂಬಿತ ಕೃಷಿ ಕುಟುಂಬಗಳು ಸಮೃದ್ಧಿಯಾಗುತ್ತವೆ. ಪೂರ್ವಜರ ಕಾಲದಿಂದಲೂ ದೀಪಾವಳಿಯಂದು ಗೋವುಗಳನ್ನು ಪೂಜಿಸಿ ತಿಪ್ಪೆಗಳನ್ನು ಪೂಜಿಸಿಕೊಂಡು ಬರಲಾಗುತ್ತಿದೆ ಎಂದು ಕೃಷಿ ಮಹಿಳೆ ಮಣಿಯಮ್ಮ ಹೇಳಿದರು.ಕಣಿವೆ: ಬೆಳಕಿನ ಹಬ್ಬ ದೀಪಾವಳಿಯನ್ನು ಗ್ರಾಮೀಣ ಪ್ರದೇಶಗಳ ಜನರು ಜನಪದ ಸಾಂಪ್ರದಾಯಿಕ ವಾಗಿ ಆಚರಿಸಿದರು. ಗ್ರಾಮ ಗಳಲ್ಲಿನ ಜನರ ಬದುಕಿನ ಜೀವಾಳ ವಾಗಿರುವ ಗೋವುಗಳು ಹಾಗೂ ಗೋವುಗಳಿಂದ ಉತ್ಪತ್ತಿ ಯಾಗುವ ಗೊಬ್ಬರದ ರಾಶಿಯನ್ನು ಪೂಜಿಸುವ ಮೂಲಕ ದೀಪಾವಳಿಯನ್ನು ಆಚರಿಸಿಕೊಂಡು ಬರುತ್ತಿರುವುದು ಜನಪದ ಸಂಸ್ಕೃತಿಯನ್ನು ಜೀವಂತಗೊಳಿಸಿತು. ಹಬ್ಬದ ದಿನದ ಸೂರ್ಯೋದಯದ ಸಂದರ್ಭ ಗೋವುಗಳ ಸಗಣಿಯ ಉಂಡೆಗೆ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿ ಮನೆ ಮುಂದಿನ ಬಾಗಿಲು ಹಾಗೂ ಆವರಣಕ್ಕಿಟ್ಟು ಪೂಜಿಸಲಾಯಿತು. ಬಳಿಕ ಸೂರ್ಯಾಸ್ತಮಾನದ ಹೊತ್ತಿನಲ್ಲಿ ಅಲಂಕೃತ ಹೂಗಳ ಸಗಣಿ ಉಂಡೆಗಳನ್ನು ತಿಪ್ಪೆಗಳಿಗೆ ಒಯ್ದು ಅಲ್ಲಿ ತಿಪ್ಪೆಯನ್ನು ಪೂಜಿಸಲಾಯಿತು. ಗೋವುಗಳು ಸಮೃದ್ಧಿಯಾದಷ್ಟು ಗೋವುಗಳ ಅವಲಂಬಿತ ಕೃಷಿ ಕುಟುಂಬಗಳು ಸಮೃದ್ಧಿಯಾಗುತ್ತವೆ. ಪೂರ್ವಜರ ಕಾಲದಿಂದಲೂ ದೀಪಾವಳಿಯಂದು ಗೋವುಗಳನ್ನು ಪೂಜಿಸಿ ತಿಪ್ಪೆಗಳನ್ನು ಪೂಜಿಸಿಕೊಂಡು ಬರಲಾಗುತ್ತಿದೆ ಎಂದು ಕೃಷಿ ಮಹಿಳೆ ಮಣಿಯಮ್ಮ ಹೇಳಿದರು.