ಸೋಮವಾರಪೇಟೆ, ಅ. ೨೯: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯ ವಳಗುಂದ ವಾರ್ಡ್ ಉಪಚುನಾವಣೆಯ ಮತದಾನ ಶುಕ್ರವಾರ ವಳಗುಂದ ಅಂಗನವಾಡಿಯಲ್ಲಿ ನಡೆಯಿತು.
೩೨೦ ಮತದಾರರ ಪೈಕಿ ೨೭೦ ಮಂದಿ ಮತಚಲಾಯಿಸಿದರು. ಆ ಮೂಲಕ ಶೇ.೮೦ ರಷ್ಟು ಮತದಾನವಾಯಿತು. ವಾರ್ಡ್ನ ಸದಸ್ಯ ಸತೀಶ್ ಇತ್ತೀಚೆಗೆ ಮೃತರಾದ ಹಿನ್ನೆಲೆ, ಚುನಾವಣೆ ಏರ್ಪಟ್ಟಿತ್ತು. ಚುನಾವಣಾಧಿಕಾರಿಯಾಗಿ ಶಿಕ್ಷಣ ಇಲಾಖೆಯ ಕಿರಣ್ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಡಿ.ಎಸ್.ಪೂವಯ್ಯ, ಬಿಜೆಪಿಯಿಂದ ಅನುಕುಮಾರ್, ಪಕ್ಷೇತರರಾಗಿ ಮೋಹನ್ ಕಣದಲ್ಲಿದ್ದಾರೆ. ತಾ. ೩೧ರಂದು ಮತ ಎಣಿಕೆ ನಡೆಯಲಿದೆ.