ಗೋಣಿಕೊಪ್ಪಲು, ಅ. ೨೯: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ದಿ. ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ೩ನೇ ದಿನ ಪರದಂಡ, ಮಾತಂಡ, ಮಂಡೇಪAಡ ಹಾಗೂ ಮಚ್ಚಂಡ ತಂಡಗಳು ಪ್ರೀ-ಕ್ವಾರ್ಟರ್ ಹಂತಕ್ಕೆ ಲಗ್ಗೆ ಇಟ್ಟವು.

ಫಲಿತಾಂಶ: ೩ನೇ ದಿನದ ಮೊದಲ ಪಂದ್ಯದಲ್ಲಿ ಕೇಚಮಾಡ ವಿರುದ್ಧ ಮಂಡೇಪAಡ ೯-೩ ಗೋಲುಗಳ ಜಯಭೇರಿ ಬಾರಿಸಿತು. ಮಂಡೇಪAಡ ಗೌತಮ್ ಕೃಪನ್ ಮತ್ತು ಸಜನ್ ತಲಾ ೩ ಗೋಲು ಹೊಡೆದರು. ಕೇಚಮಾಡ ತಸ್ವಿನ್ ೨, ವಿಪುಲ್ ೧ ಗೋಲು ಗಳಿಸಿದರು. ಅಮ್ಮಂಡ ತಂಡ ಮನೆಯಪಂಡ ತಂಡವನ್ನು ೯-೧ಗೋಲಿನ ಅಂತರದಿAದ ಮಣಿಸಿತು. ಅಮ್ಮಂಡ ಅಯ್ಯಪ್ಪ ೫, ರೋಹನ್ ೩, ನಾಚಪ್ಪ ೧ ಗೋಲು ಬಾರಿಸಿದರೆ, ಮನೆಯಪಂಡ ಗಣಪತಿ ತಮ್ಮ ತಂಡದ ಪರ ಏಕೈಕ ಗೋಲು ಹೊಡೆದರು. ನಾಮೇರ ವಿರುದ್ಧ ಮಚ್ಚಂಡ ೩-೧ ಗೋಲಿನಿಂದ ಜಯ ಸಾಧಿಸಿತು. ಮಚ್ಚಂಡ ಕರುಂಬಯ್ಯ ೨, ಪ್ರಿನ್ಸ್ ೧, ನಾಮೆರ ಕರುಣ್ ೧ ಗೋಲು ಗಳಿಸಿದರು. ಕಂಬಿರAಡ ತಂಡ ತಿರ್‌ಟೇರ ವಿರುದ್ಧ ೪-೩ ಗೋಲುಗಳ ರೋಚಕ ಜಯ ಪಡೆಯಿತು. ಕಂಬಿರAಡ ಮಯೂರ್ ೨, ಯೋಗೇಶ್,ರಾಯ್ ತಲಾ ೧ ಗೋಲು, ತಿರ್‌ಟೆರ ವಿನು ೨, ಪೂವಯ್ಯ ೧ ಗೋಲು ಬಾರಿಸಿದರು.

ಅಮ್ಮಣಿಚಂಡ ತಂಡ ಚಂಗುಲAಡ ತಂಡವನ್ನು ೮-೬ ಗೋಲಿನ ಅಂತರದಿAದ ಮಣಿಸಿತು. ಅಮ್ಮಣಿಚಂಡ ಸಜನ್ ೪, ಬೆನ್ನಿ ಮತ್ತು ಯಶವಂತ್ ತಲಾ ೨, ಚಂಗುಲAಡ ವಿನಯ್ ೩, ಅಯ್ಯಪ್ಪ ೨, ಗೌತಮ್ ೧ ಗೋಲು ಹೊಡೆದರು.

ಕೊಂಗAಡ ತಂಡ ಕಂಗAಡ ವಿರುದ್ಧ ೬-೪ ಗೋಲಿನಿಂದ ಜಯಸಾಧಿಸಿತು. ಕೊಂಗAಡ ಯಶಸ್ ೪, ಪ್ರೇಮ್ ನಾಚಪ್ಪ ಮತ್ತು ರಚನ್ ತಲಾ ೧ ಗೋಲು ಬಾರಿಸಿದರೆ, ಕಂಗAಡ ಪರ ಪುನೀತ್ ೪ ಗೋಲು ಗಳಿಸಿದರು.

ನಡಿಕೇರಿಯಂಡ ವಿರುದ್ಧ ಕಳ್ಳಿಚಂಡ ೮-೩ ಅಂತರದ ಜಯಸಾಧಿಸಿತು. ಕಳ್ಳಿಚಂಡ ಸ್ವಾನ್, ಗೌತಮ್ ತಲಾ ೩, ಬೋಪಣ್ಣ ೨, ನಡಿಕೇರಿಯಂಡ ಅಮೋಘ ೨, ಗಿರೀಶ್ ೧ ಗೋಲು ಹೊಡೆದರು. ಕಾಂಡೆರ ವಿರುದ್ಧ ಮಾಚಿಮಂಡ ೮-೦ ಗೋಲಿನಿಂದ ಭರ್ಜರಿ ಜಯ ಸಾಧಿಸಿತು. ಮಾಚಿಮಂಡ ಹರ್ಷಿತ್ ೩, ಚಂಗಪ್ಪ, ಆಶಿಕ್, ತಲಾ ೨, ರೋಷನ್ ೧ ಗೋಲು ಬಾರಿಸಿದರು.

ನೂರೇರ ತಂಡ ಮಾಚೆಟ್ಟಿರ ತಂಡವನ್ನು ೭-೧ ಗೋಲಿನಿಂದ ಸೋಲಿಸಿತು. ನೂರೇರ ಶರಣ್ ಭರ್ಜರಿ ೬ ಗೋಲುಗಳಿಸಿ ಮಿಂಚಿದರು. ಚಿಣ್ಣಪ್ಪ ೧, ಮಾಚೆಟ್ಟಿರ ಭರತ್ ೧ ಗೋಲು ಗಳಿಸಿದರು. ದಾಸಂಡ ವಿರುದ್ಧ ಮೂಕೊಂಡ ೯-೨ ಗೋಲಿನಿಂದ ಜಯಸಾಧಿಸಿತು. ಮೂಕೊಂಡ ನಿಖಿತ್ ೩, ದರ್ಶನ್, ಮಿಥೇಶ್ ತಲಾ ೨, ಅಕ್ಷಿತ್, ಅಶ್ವಿನ್ ತಲಾ ೧, ದಾಸಂಡ ದೀರಜ್, ಆಕಾಶ್ ತಲಾ ೧ ಗೋಲು ಗಳಿಸಿದರು.

ಮಂಡೇಪAಡ ತಂಡ ಅಮ್ಮಂಡ ತಂಡದ ವಿರುದ್ಧ ೭-೫ ಗೋಲು ಗಳಿಂದ ರೋಚಕ ಜಯ ಸಾಧಿಸಿತು. ಮಂಡೇಪAಡ ಸಜನ್ ೪ ಗೋಲು ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವ ಹಿಸಿದರು. ಗೌತಮ್ ೨, ಮೊಣ್ಣಯ್ಯ ೧ ಗೋಲು ಬಾರಿಸಿದರೆ, ಅಮ್ಮಂಡ ರೋಷನ್ ೩, ಕಾರ್ಯಪ್ಪ ಮತ್ತು ಅಯ್ಯಪ್ಪ ತಲಾ ೧ ಗೋಲುಗಳಿಸಿದರು.

ಕಂಬಿರAಡ ಹಾಗೂ ಮಚ್ಚಂಡ ನಡುವೆ ನಡೆದ ೩ನೇ ದಿನದ ಕೊನೆಯ ಪಂದ್ಯ ಅತ್ಯಂತ ರೋಚಕವಾಗಿತ್ತು. ಎರಡೂ ತಂಡಗಳು ಉತ್ತಮ ಪ್ರದರ್ಶನ ತೋರುವ ಮೂಲಕ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದವು. ಅಂತಿಮವಾಗಿ ಮಚ್ಚಂಡ ತಂಡವು ಕಂಬಿರAಡ ತಂಡವನ್ನು ೯-೬ ಗೋಲುಗಳ ಅಂತರದಿAದ ಸೋಲಿಸಿ ಗೆಲುವಿನ ನಗೆ ಬೀರಿತು.

ಮಚ್ಚಂಡ ಪ್ರಿನ್ಸ್ ೫, ಸಜನ್ ೪ ಗೋಲುಗಳಿಸಿ ಮಿಂಚು ಹರಿಸಿದರು. ಕಂಬಿರAಡ ಯೋಗೇಶ್ ೩, ಬೋಪಣ್ಣ ೨, ಮಯೂರ್ ೧ ಗೋಲು ಗಳಿಸಿದರು.

ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ಕೊಡವ ಹಾಕಿ ಅಕಾಡೆಮಿಯ ಗೌ. ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ನಡೆಸಿ ಕೊಟ್ಟರು. ಪಂದ್ಯಾವಳಿ ವೀಕ್ಷಿಸಲು ಕ್ರೀಡಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಖ್ಯಾತ ಹಾಡುಗಾರ ಶರಣ್ ಅಯ್ಯಪ್ಪ ಆಗಮಿಸಿದ್ದು ಮೂರನೇ ದಿನದ ವಿಶೇಷತೆಯಾಗಿತ್ತು.

- ಹೆಚ್.ಕೆ. ಜಗದೀಶ್