ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ
ಬೆಂಗಳೂರು, ಅ. ೩೦: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳು, ಸಂಸ್ಥೆಗಳಿಗೆ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಪ್ರದಾಯವನ್ನು ಸರ್ಕಾರ ಅನುಸರಿಸಿಕೊಂಡು ಬಂದಿದ್ದು, ಈ ಬಾರಿ ಚಲನಚಿತ್ರ ಕ್ಷೇತ್ರದಲ್ಲಿ ದತ್ತಣ್ಣ, ಅವಿನಾಶ್, ಕಿರುತೆರೆ ಕ್ಷೇತ್ರದಲ್ಲಿ ಸಿಹಿಕಹಿ ಚಂದ್ರು, ಲೇಖಕ ಅ.ರಾ. ಮಿತ್ರಾ ಸೇರಿದಂತೆ ೬೭ ಸಾಧಕರು ಹಾಗೂ ೧೦ ಸಂಘ-ಸAಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲು ಸರ್ಕಾರ ನಿರ್ಧರಿಸಿದೆ. ಪತ್ರಿಕೋದ್ಯಮ-ಬೆಂಗಳೂರಿನ ಹೆಚ್.ಆರ್. ಶ್ರೀಶಾ, ಗದಗ ಜಿಲ್ಲೆಯ ಜಿ.ಎಂ. ಶಿರಹಟ್ಟಿ, ವಿಜ್ಞಾನ ಮತ್ತು ತಂತ್ರಜ್ಞಾನ- ಬೆಂಗಳೂರಿನ ಇಸ್ರೋ ಸಂಸ್ಥೆ ಮಾಜಿ ನಿರ್ದೇಶಕ ಕೆ. ಶಿವನ್, ರಾಯಚೂರಿನ ಡಾ. ಡಿ.ಆರ್. ಬಳೂರಗಿ, ಕೃಷಿ-ಕೊಡಗಿನ ಗಣೇಶ್ ತಿಮ್ಮಯ್ಯ, ಚಿಕ್ಕಮಗಳೂರಿನ ಚಂದ್ರಶೇಖರ್ ನಾರಾಯಣಪುರ, ಪರಿಸರ- ರಾಮನಗರದ ಸಾಲುಮರದ ನಿಂಗಣ್ಣ, ಪೌರಕಾರ್ಮಿಕ - ಮಲ್ಲಮ್ಮ ಹೂವಿನ ಹಡಗಲಿ, ಆಡಳಿತ- ಡಾ. ಎಲ್.ಹೆಚ್. ಮಂಜುನಾಥ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಶಿವಮೊಗ್ಗ, ಮಧನ್ ಗೋಪಾಲ್ ಬೆಂಗಳೂರು ಮತ್ತಿತರರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. "೨೦೨೧-೨೨ನೇ ಸಾಲಿನ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ'ಗೆ ಆಯ್ಕೆಯಾಗಿರುವ ಎಲ್ಲ ಸಾಧಕರು ಹಾಗೂ 'ಅಮೃತ ಮಹೋತ್ಸವ ರಾಜ್ಯಪ್ರಶಸ್ತಿ' ಪುರಸ್ಕೃತ ರಾಜ್ಯದ ೧೦ ಸಂಘ-ಸAಸ್ಥೆ ಗಳನ್ನು ಅಭಿನಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲ ಸಾಧಕರ ಸಾಧನೆಗಳು ಯುವಜನತೆಗೆ ಸ್ಫೂರ್ತಿಯಾಗಲೆಂದು ಆಶಿಸಿದ್ದಾರೆ.
ಆರ್ಎಸ್ಎಸ್ನ ಜ್ಯೇಷ್ಠ ಪ್ರಚಾರಕ ಚಂದ್ರಶೇಖರ ಭಂಡಾರಿ ನಿಧನ
ಬೆಂಗಳೂರು, ಅ. ೩೦: ರಾಷ್ಟಿçÃಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ, ಲೇಖಕ ಚಂದ್ರಶೇಖರ ಭಂಡಾರಿ (೮೭) ತಾ. ೩೦ ರಂದು ನಿಧನರಾದರು. ಇವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಮಾಜಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ವಿಶ್ವ ಸಂವಾದ ಕೇಂದ್ರ ಕರ್ನಾಟಕದ ಸಂಸ್ಥಾಪಕ ಟ್ರಸ್ಟಿ ಆಗಿದ್ದರು. ಆರ್ಎಸ್ಎಸ್ನ ಸಂಘಟನಾತ್ಮಕ ಚಟುವಟಿಕೆ ಗಳಲ್ಲಿ ಹಲವು ಹೊಣೆಗಾರಿಕೆಯನ್ನು ನಿಭಾಯಿಸಿದ್ದ ಭಂಡಾರಿಯವರು ಅನೇಕ ಪುಸ್ತಕಗಳ ಲೇಖಕರಷ್ಟೇ ಅಲ್ಲದೇ ಕನ್ನಡ ಭಾಷೆಗೆ ಅನೇಕ ಕೃತಿಗಳನ್ನು ಅನುವಾದ ಮಾಡಿದ್ದರು. ೬ ದಶಕಗಳ ಕಾಲ ಆರ್ಎಸ್ ಎಸ್ನ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದ ಚಂದ್ರಶೇಖರ ಭಂಡಾರಿ 'ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು, ಸೇರಿದಂತೆ ಅನೇಕ ದೇಶಭಕ್ತಿಗೀತೆಗಳನ್ನು ರಚಿಸಿದ್ದರು. ಡಾ. ಬಿಆರ್ ಅಂಬೇಡ್ಕರ್ ಕುರಿತು ಚಂದ್ರಶೇಖರ್ ಭಂಡಾರಿ ಅನುವಾದಿಸಿದ್ದ ಕೃತಿ ೨೦೧೧ರಲ್ಲಿ ಪ್ರಕಟವಾಗಿತ್ತು. ಕುವೆಂಪು ಭಾಷಾ ಭಾರತಿ, ಚಂದ್ರಶೇಖರ ಭಂಡಾರಿಗೆ ಉತ್ತಮ ಅನುವಾದಕ ಪ್ರಶಸ್ತಿ ನೀಡಿ ಗೌರವಿಸಿತ್ತು.
ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣ : ಕಣ್ಣೂರು ಶ್ರೀ, ಯುವತಿ ಸೇರಿ ಮೂವರ ಬಂಧನ
ಬೆAಗಳೂರು, ಅ. ೩೦: ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ ೪೫ ವರ್ಷದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಭಾನುವಾರ ದೊಡ್ಡ ತಿರುವು ಸಿಕ್ಕಿದೆ. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಮಾಗಡಿ ತಾಲೂಕಿನ ಕಣ್ಣೂರು ಮಠದ ಡಾ. ಮೃತ್ಯುಂಜಯ ಶ್ರೀ ಹಾಗೂ ಯವತಿ ನೀಲಾಂಬಿಕೆ ಹಾಗೂ ನಿವೃತ್ತ ಶಿಕ್ಷಕ ಹಾಗೂ ವಕೀಲ ಮಹದೇವಯ್ಯ ಎಂಬವರನ್ನು ಬಂಧಿಸಿದ್ದಾರೆ. ಅಲ್ಲದೆ ಕಣ್ಣೂರು ಶ್ರೀಗಳನ್ನು ಎ೧, ಯುವತಿ ನೀಲಾಂಬಿಕೆ ಅಲಿಯಾಸ್ ಚಂದು ಎ೨ ಮತ್ತು ನಿವೃತ್ತ ಶಿಕ್ಷಕ ಮಹದೇವಯ್ಯ ಅವರನ್ನು ಎ೩ ಆರೋಪಿ ಎಂದು ಪ್ರಕರಣ ದಾಖಲಿ ಸಲಾಗಿದೆ. ಮಹದೇವಯ್ಯ ತುಮಕೂರಿನ ನಿವಾಸಿಯಾಗಿದ್ದಾರೆ. ಬಸವಲಿಂಗ ಶ್ರೀಗಳು ಆತ್ಮಹತ್ಯೆಗೂ ಮುನ್ನ ಡೆತ್ನೋಟ್ನಲ್ಲಿ ಇವರ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ ೨೧ ವರ್ಷದ ಯುವತಿಯನ್ನು ಬಿಟ್ಟು ಕಣ್ಣೂರು ಶ್ರೀಗಳು ಹನಿಟ್ರಾö್ಯಪ್ ಮಾಡಿಸಿರುವ ಕುರಿತು ಹಾಗೂ ಕಣ್ಣೂರು ಶ್ರೀಗಳ ಷಡ್ಯಂತ್ರ್ಯದ ಬಗ್ಗೆಯೂ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದರು. ಅಷ್ಟೇ ಅಲ್ಲದೇ ಕಣ್ಣೂರು ಸ್ವಾಮೀಜಿ ಹಾಗೂ ಇತರ ಏಳೆಂಟು ಮಂದಿಯಿAದ ಕಿರುಕುಳ ಎದುರಾಗುತ್ತಿದೆ. ಅವರು ಮಠದ ವಿಚಾರದಲ್ಲಿ ಆಗಾಗ ತೊಂದರೆ ಉಂಟು ಮಾಡುತ್ತಿದ್ದಾರೆ. ನನ್ನ ಸಾವಿಗೆ ಗೊತ್ತಿಲ್ಲದಿರುವ ಆ ಯುವತಿಯೇ ಕಾರಣ ಎಂದು ಸಾವಿಗೂ ಮೊದಲು ಬಂಡೆ ಮಠದ ಶ್ರೀಗಳು ಡೆತ್ನೋಟ್ ಬರೆದಿಟ್ಟಿದ್ದರು. ಯುವತಿ ನೀಲಾಂಬಿಕೆ ದೊಡ್ಡಬಳ್ಳಾಪುರದಲ್ಲಿ ಇಂಜಿನಿ ಯರಿಂಗ್ ಶಿಕ್ಷಣ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ. ಬಂಡೆಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣವು ಪ್ರತಿದಿನ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿ ರಾಮನಗರ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಭಗತ್ ಸಿಂಗ್ ಪಾತ್ರ ಅಭ್ಯಾಸ ವೇಳೆ ಫ್ಯಾನಿಗೆ ಹಗ್ಗ ಬಿಗಿದು ಬಾಲಕ ಸಾವು
ಚಿತ್ರದುರ್ಗ, ಅ. ೩೦: ಸ್ವಾತಂತ್ರö್ಯ ಹೋರಾಟಗಾರ ಭಗತ್ ಸಿಂಗ್ ಬಗ್ಗೆ ನಾವೆಲ್ಲಾ ಕೇಳಿದ್ದೇವೆ, ಓದಿದ್ದೇವೆ, ಭಗತ್ ಸಿಂಗ್ ಜೀವನ ಅನೇಕರಿಗೆ ಸ್ಪೂರ್ತಿಯಾಗಬಹುದು. ಆದರೆ ನೇಣಿಗೆ ಕೊರಳೊಡ್ಡಿದ ಭಗತ್ ಸಿಂಗ್ ಪಾತ್ರವನ್ನು ಮಾಡಲು ಹೊರಟ ಬಾಲಕನೊಬ್ಬ ಸಾವಿಗೀಡಾಗಿದ್ದಾನೆ. ಆತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನವೆಂಬರ್ ೧ ರಂದು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆಂದು ಬಾಲಕ ಭಗತ್ ಸಿಂಗ್ ಪಾತ್ರವನ್ನು ಅಭ್ಯಾಸ ಮಾಡುತ್ತಿದ್ದ. ಶಾಲೆಯಿಂದ ಮನೆಗೆ ಬಂದು ಪಾತ್ರವನ್ನು ಅಭ್ಯಾಸ ಮಾಡುತ್ತಿರುವಾಗ ನಿಜಯವಾಗಿಯೂ ಫ್ಯಾನಿಗೆ ಹಗ್ಗ ಬಿಗಿದು ಕೊರಳೊಡ್ಡಿ ಸಾವನ್ನಪ್ಪಿದ್ದಾನೆ. ಮೃತ ಬಾಲಕನನ್ನು ಚಿತ್ರದುರ್ಗದ ಕೆಳಗೋಟೆ ಬಡಾವಣೆಯ ಸಂಜಯ್ ಗೌಡ (೧೨) ಎಂದು ಗುರುತಿಸಲಾಗಿದೆ. ಇಲ್ಲಿನ ಎಸ್ಎಲ್ವಿ ಶಾಲೆಯಲ್ಲಿ ೭ನೇ ತರಗತಿಯಲ್ಲಿ ಓದುತ್ತಿದ್ದ ಸಂಜಯ್, ಭಗತ್ ಸಿಂಗ್ ಪಾತ್ರದಲ್ಲಿ ಅಭಿನಯಿಸಲು ಭಾರೀ ಸಿದ್ಧತೆ ನಡೆಸುತ್ತಿದ್ದ, ನಿನ್ನೆ ಮನೆಗೆ ಬಂದ ಬಳಿಕ ರಿಹರ್ಸಲ್ಗೆ ಮುಂದಾಗಿದ್ದ ಸಂಜಯ್, ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೂಲಿನ ಹಗ್ಗ ಬಿಗಿದು ಮಂಚದ ಮೇಲೆ ನಿಂತಿದ್ದಾನೆ. ಬಳಿಕ ತನ್ನ ಮುಖಕ್ಕೆ ಉಲ್ಲನ್ ಟೋಪಿ ಹಾಕಿಕೊಂಡು ಮಂಚದಿAದ ಜಿಗಿದಿದ್ದಾನೆ. ಜಿಗಿದ ರಭಸಕ್ಕೆ ಸ್ಥಳದಲ್ಲಿಯೇ ಸಂಜಯ್ ಪ್ರಾಣಪಕ್ಷಿ ಹಾರಿಹೋಗಿದೆ.
ದಕ್ಷಿಣ ಕೊರಿಯಾದಲ್ಲಿ ಭೀಕರ ದುರಂತ: ೧೨೦ ಸಾವು
ಸಿಯೋಲ್, ಅ. ೩೦: ಶನಿವಾರ ತಡರಾತ್ರಿ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ನಲ್ಲಿ ನಡೆದ ಹ್ಯಾಲೋವೀನ್ ಆಚರಣೆಯ ಸಂದರ್ಭ ಸಂಭವಿಸಿದ ಕಾಲ್ತುಳಿತದಲ್ಲಿ ೧೨೦ ಮಂದಿ ಸಾವನ್ನಪ್ಪಿದ್ದು ೧೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಟಾವಾನ್ ಲೆಸ್ಸರ್ ಜಿಲ್ಲೆಯ ಕಿರಿದಾದ ರಸ್ತೆಯಲ್ಲಿ ಜನಸಂದಣಿ ಜಮಾಯಿಸಿದ್ದರಿಂದ ಕಾಲ್ತುಳಿತ ಸಂಭವಿಸಿ ಈ ಘಟನೆ ನಡೆದಿದೆ ಎಂದು ರಾಷ್ಟಿçÃಯ ಅಗ್ನಿಶಾಮಕ ಏಜೆನ್ಸಿಯ ಅಧಿಕಾರಿ ಚೋಯ್ ಚಿಯೋನ್-ಸಿಕ್ ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಘಟನಾ ಸ್ಥಳದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ ಹೃದಯ ಸ್ತಂಭನದಿAದ ಬಳಲುತ್ತಿರುವ ಸುಮಾರು ೫೦ ಜನರಿಗೆ ಸಿಪಿಆರ್ ನೀಡಲಾಗಿದೆ. ಉಸಿರಾಟದ ತೊಂದರೆ ಇರುವವರಿಂದ ೮೧ ಕರೆಗಳು ಬಂದಿವೆ ಎಂದು ತುರ್ತು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್ ಯೋಲ್ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೊಮಾಲಿಯಾದಲ್ಲಿ ಭೀಕರ ಕಾರು ಬಾಂಬ್ ಸ್ಫೋಟ-ಕನಿಷ್ಟ ೧೦೦ ಸಾವು
ಮೊಗದಿಶು, ಅ. ೩೦: ಸೊಮಾಲಿಯಾದ ರಾಜಧಾನಿಯ ಜನನಿಬಿಡ ಜಂಕ್ಷನ್ನಲ್ಲಿ ಶನಿವಾರ ನಡೆದ ಎರಡು ಕಾರು ಬಾಂಬ್ ಸ್ಫೋಟಗಳಲ್ಲಿ ಕನಿಷ್ಟ ೧೦೦ ಜನರು ಮೃತಪಟ್ಟಿದ್ದಾರೆ. ಭೀಕರ ದಾಳಿಯಿಂದಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೊಮಾಲಿಯಾದ ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ತಿಳಿಸಿದ್ದಾರೆ. ಐದು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಟ್ರಕ್ ಬಾಂಬ್ ಸ್ಫೋಟದಲ್ಲಿ ೫೦೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಆದಾದ ಬಳಿಕ ನಡೆದ ಭೀಕರ ದಾಳಿ ಇದಾಗಿದೆ. ‘ಸ್ಫೋಟಗಳಿಂದಾಗಿ ಸ್ಥಳದಲ್ಲಿ ಸುಮಾರು ೩೦೦ ಜನರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ದೇಶದ ಹೊರಗೆ ಕಳುಹಿಸಲು ಸಾಧ್ಯವಿಲ್ಲದ ಕಾರಣ ನಮ್ಮ ಅಂರ್ರಾಷ್ಟಿçÃಯ ಪಾಲುದಾರರು ಮತ್ತು ಪ್ರಪಂಚದಾದ್ಯAತ ಇರುವ ಮುಸ್ಲಿಮರು ಅವರ ವೈದ್ಯರನ್ನು ಇಲ್ಲಿಗೆ ಕಳುಹಿಸಲು ನಾವು ಕೇಳುತ್ತೇವೆ' ಎಂದು ಅವರು ಹೇಳಿದರು.