ಮಡಿಕೇರಿ ಅ. ೨೯ : ಹೊಳೆಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಹೊರವಲಯದ ಕೂಟುಹೊಳೆಯಲ್ಲಿ ನಡೆದಿದೆ.

ಇಲ್ಲಿನ ಆಜಾದ್ ನಗರದ ನಿವಾಸಿ ಆಟೋ ಚಾಲಕ ಸೈಫುದ್ದೀನ್ (೩೧) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಕಾಲಿಗೆ ದೊಡ್ಡ ಕಲ್ಲು ಬಿದ್ದ ನಂತರ ಮಾನಸಿಕವಾಗಿ ಬಳಲುತ್ತಿದ್ದ ಮೃತ ವ್ಯಕ್ತಿ ತಾ. ೨೮ರಂದು ಆಟೋ ಚಲಾಯಿಸಿಕೊಂಡು ಕೂಟುಹೊಳೆ ಬಳಿ ಬಂದು ತನ್ನ ಸ್ನೇಹಿತನಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ತಕ್ಷಣ ಸ್ನೇಹಿತ ಸ್ಥಳಕ್ಕೆ ತೆರಳಿದ್ದು, ಹೋಗುವಷ್ಟರಲ್ಲಿ ಸೈಫುದ್ದೀನ್ ಆಟೋ ಅಲ್ಲಿ ಪತ್ತೆಯಾಗಿದೆ. ಅದರೊಳಗೆ ಮೊಬೈಲ್, ಚಪ್ಪಲಿ ದೊರೆತಿದೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮರುದಿನ ಬೆಳಿಗ್ಗೆಯಿಂದ ನುರಿತ ಈಜುರಾರರೊಂದಿಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಶವವನ್ನು ಮೇಲೆತ್ತಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.