ಗೋಣಿಕೊಪ್ಪಲು, ಅ. ೨೮: ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕದ ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಪ್ರತಿಮೆಗಳನ್ನು ಶುಚಿಗೊಳಿಸುವುದರ ಮೂಲಕ ಕೆಡೆಟ್‌ಗಳು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಬಿ. ಕಾವೇರಪ್ಪ ಪರಿಸರ ಸಚ್ಛವಾಗಿದ್ದರೆ ಮನಸ್ಸು ಸ್ವಚ್ಛವಾಗಿರುತ್ತದೆ. ಆದ್ದರಿಂದ ಎಲ್ಲರೂ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಎಸ್.ಎಸ್.ಮಾದಯ್ಯ, ಪ್ರೊ. ಪೂವಮ್ಮ, ಲೆಫ್ಟಿನೆಂಟ್ ಅಕ್ರಂ, ಎನ್.ಸಿ.ಸಿ. ಘಟಕದ ನಾಯಕರಾದ ಕವನ್ ಕಾರ್ಯಪ್ಪ, ರಂಜಿತ್ ಮತ್ತು ಕೆಡೆಟ್‌ಗಳು ಹಾಜರಿದ್ದರು.