ಸೋಮವಾರಪೇಟೆ, ಅ. ೨೮: ವೀರಾಜಪೇಟೆ ತಾಲೂಕು ಬಿಳಿಮಗ್ಗ ಸಮಾಜದ ೩ನೇ ವರ್ಷದ ವಾರ್ಷಿಕ ಮಹಾಸಭೆ ಪಂಜರಪೇಟೆಯಲ್ಲಿರುವ ಸರ್ವೋದಯ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಬಿಳಿಮಗ್ಗ ಸಮಾಜದ ಅಧ್ಯಕ್ಷ ಬಿ.ಆರ್. ಅನಿಲ್‌ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಡಿ. ಮಂಜುನಾಥ್ ಅವರು, ಸಮಾಜ ಬಾಂಧವರು ಸಂಘಟಿತರಾದಾಗ ಮಾತ್ರ ಸವಲತ್ತುಗಳನ್ನು ಪಡೆಯಲು ಸಾಧ್ಯ. ಜನಾಂಗದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು. ಸಮಾಜ ಬಾಂಧವರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷೆ ಬಿ. ಚೈತ್ರ ಚೇತನ್, ನಿವೃತ್ತ ಪ್ರಾಂಶುಪಾಲೆ ಶಶಿಕಲಾ, ಕಾಫಿ ಬೆಳೆಗಾರ ಬಿ.ಎಸ್. ಶೀನಪ್ಪ, ಗೋಣಿಕೊಪ್ಪಲು ಗ್ರಾ.ಪಂ. ಸದಸ್ಯ ಬಿ.ಎನ್. ಪ್ರಕಾಶ್, ಸೋಮವಾರಪೇಟೆ ತಾಲೂಕು ಬಿಳಿಮಗ್ಗ ಸಮಾಜದ ಅಧ್ಯಕ್ಷ ಸತೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.