*ಗೋಣಿಕೊಪ್ಪ, ಅ. ೨೮: ಹುಲಿ ದಾಳಿಯಿಂದ ಹಸುವನ್ನು ಕಳೆದುಕೊಂಡಿದ್ದ ನಿಟ್ಟೂರು-ಕಾರ್ಮಾಡು ಗ್ರಾಮದ ರಾಜು ಅವರಿಗೆ ಶಾಸಕ ಕೆ.ಜಿ. ಬೋಪಯ್ಯ ಪರಿಹಾರ ಚೆಕ್ ವಿತರಿಸಿದರು. ಹದಿನಾರು ಸಾವಿರ ರೂಪಾಯಿ ಚೆಕ್ ವಿತರಣೆಯೊಂದಿಗೆ ಮರಿಯಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂಸ್ಥೆಯ ಪರವಾಗಿ ನಿರ್ದೇಶಕ ಕೆ. ಸುಬ್ಬಯ್ಯ ಮೂರು ಸಾವಿರ ಚೆಕ್ ವಿತರಣೆ ಮಾಡಿದರು. ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ಸದಸ್ಯರುಗಳಾದ ಚಕ್ಕೇರ ಸೂರ್ಯ ಅಯ್ಯಪ್ಪ, ಪಡಿಞರಂಡ ಕವಿತಾ ಪ್ರಭು, ಭಾರತೀಯ ಜನತಾ ಪಕ್ಷದ ವೀರಾಜಪೇಟೆ ಮಂಡಳ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಚೆಪ್ಪುಡಿರ ಮಾಚಯ್ಯ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಮಾಚಂಗಡ ಸುಜಾ ಪೂಣಚ್ಚ, ನಿಟ್ಟೂರು ಬಿಜೆಪಿ ಭೂತ್ ಪ್ರಮುಖ್ ಮುಕ್ಕಾಟಿರ ಸೋಮಯ್ಯ, ಅರಣ್ಯ ಇಲಾಖೆ ಕಲ್ಲಳ ವಲಯ ಸಂರಕ್ಷಣಾಧಿಕಾರಿ ಯೋಗೀಶ್, ಮುಜಾಪರ್ ಫಕಾಲಿ, ಪ್ರಮುಖರುಗಳಾದ ಮೇಚಂಡ ರಮೇಶ್, ಪಡಿಞರಂಡ ಪ್ರಭುಕುಮಾರ್, ರಘು, ಮಲ್ಲೇಂಗಡ ಶಶಿಮಣಿ, ಮೂರೀರ ಅಪ್ಪÀ್ಪಚ್ಚು, ರಾಜು, ಕಿಶು ಇದ್ದರು.