ವೀರಾಜಪೇಟೆ, ಅ. ೨೮: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಬಾರಿಕಾಡುವಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ಕಾಂಕ್ರಿಟ್ ರಸ್ತೆ ಮತ್ತು ಚರಂಡಿಯ ಬದಿ ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.

ಈ ಚರಂಡಿಗಳಲ್ಲಿ ಮಕ್ಕಳು, ಅಪರಿಚಿತರು, ವಯೋವೃದ್ಧರು ನಡೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದರೆ ಅಥವಾ ವಾಹನ ಚಲಾಯಿಸುವಾಗ ಅಪಾಯ ತಪ್ಪಿದ್ದಲ್ಲ. ರಸ್ತೆಗಳಂತೂ ಸಂಪೂರ್ಣ ಕಿತ್ತು ಹೋಗಿವೆ. ಕೆಲ ಕಡೆಗಳಲ್ಲಿ ಚರಂಡಿ ನೀರು ತುಂಬಿ ರಸ್ತೆಯಲ್ಲೇ ಹರಿಯುತ್ತಿದೆ.

ಸಂಬAಧಿಸಿದವರು ಚರಂಡಿಯ ಪಕ್ಕ ಉಂಟಾಗಿರುವ ಮಣ್ಣಿನ ಗುಂಡಿಯನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಹಾಗೂ ಅಪಾಯವನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.