ಸೋಮವಾರಪೇಟೆ, ಅ. ೨೯: ಸಮೀಪದ ಐಗೂರು ಗ್ರಾಮದ ಮಡಿಕೇರಿ ರಸ್ತೆಯಲ್ಲಿರುವ ಶ್ರೀಗುಳಿಗಪ್ಪಸ್ವಾಮಿ ಮತ್ತು ಶ್ರೀವನದುರ್ಗಿ ದೇವಸ್ಥಾನದ ೩೦ನೇ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಬುಧವಾರ ಜರುಗಿತು.
ಅಂದು ಬೆಳಗ್ಗೆ ೮ಗಂಟೆಗೆ ಮೆರವಣಿಗೆ, ನಂತರ ದೇವರಿಗೆ ಅಭಿಷೇಕ ಮಾಡಲಾಯಿತು. ದೇವಾಲಯದ ಅರ್ಚಕ ಅಚ್ಯುತ್ತನ್, ಸೋಮವಾರಪೇಟೆಯ ಅರ್ಚಕರಾದ ಈಶ್ವರಭಟ್ ಪೌರೋಹಿತ್ಯದಲ್ಲಿ ಪೂಜಾ ವಿಧಿವಿಧಾನಗಳು ನಡೆದು ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ನೆರವೇರಿತು. ನಂತರ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ಮತ್ತು ರಾಜ್ಯದ ವಿವಿಧೆಡೆಗಳಲ್ಲಿರುವ ಗ್ರಾಮದ ಭಕ್ತಾದಿಗಳು ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿ ದೇವರ ಅನುಗ್ರಹಕ್ಕೆ ಪಾತ್ರರಾದರು. ವಾರ್ಷಿಕೋತ್ಸವದಲ್ಲಿ ದೇವಾಲಯ ಸಮಿತಿ ಅಧü್ಯಕ್ಷ ಆರ್.ರವಿ, ಕಾರ್ಯದರ್ಶಿ ಕೆ.ಆರ್.ರಮೇಶ್, ಉಪಾಧ್ಯಕ್ಷ ಟಿ.ಜಿ.ಮುತ್ತಪ್ಪ, ಖಜಾಂಚಿ ಕೆ.ಪಿ.ಮುತ್ತಪ್ಪ ಅವರುಗಳ ನೇತೃತ್ವದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ವಾರ್ಷಿಕೋತ್ಸವ ಜರುಗಿತು.