ಮಡಿಕೇರಿ, ಅ. ೨೮: ಮಡಿಕೇರಿಯ ಪ್ರಸಿದ್ಧ ವಿಜಯ ವಿನಾಯಕ ದೇವಾಲಯದ ೨೪ನೇ ವಾರ್ಷಿಕ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ದೇವಾಲಯದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಅವರಿಂದ ವಿಶೇಷ ಪೂಜೆ, ಹೋಮ ನೆರವೇರಿತು. ಮಧ್ಯಾಹ್ನ ಶ್ರೀ ವಿಜಯ ವಿನಾಯಕನಿಗೆ ಮಹಾ ಮಂಗಳಾರತಿ ಭಕ್ತರ ಭಕ್ತಿಭಾವದ ನಡುವೆ ನೆರವೇರಿತು.
ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಅನ್ನ ಪ್ರಸಾದ ಸ್ವೀಕರಿಸಿದರು.
ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಪೌರಾಯುಕ್ತ ವಿಜಯ, ಕ.ಸಾ.ಪ. ಜಿಲ್ಲಾಧ್ಯಕ್ಷ ಕೇಶವ ಕಾಮತ್, ನಗರಸಭೆ ಸದಸ್ಯರು ಸೇರಿದಂತೆ ಹಲವು ಗಣ್ಯರು ಆಗಮಿಸಿ ದೇವರ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿದರು.
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಬಿ. ಪೂಣಚ್ಚ ನೇತೃತ್ವದಲ್ಲಿ ಟ್ರಸ್ಟಿಗಳು, ಸಾರ್ವಜನಿಕರು ಸ್ವಯಂಸೇವಕÀರಾಗಿ ಕಾರ್ಯ ನಿರ್ವಹಿಸಿದರು.