ಮಡಿಕೇರಿ, ಅ. ೨೮: ಗಂಭೀರ ಕಾಯಿಲೆಗಳಿಗೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಯೇ ಪರಿಹಾರ ಇದೆ. ಇದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಅಳಿವಿನಂಚಿನಲ್ಲಿರುವ ಗಿಡಮೂಲಿಕೆ ಗಳನ್ನು ಅಭಿವೃದ್ಧಿಗೊಳಿಸಬೇಕು. ಈ ಹಿನ್ನೆಲೆ ಪ್ರಾಯೋಗಿಕವಾಗಿ ೧೦ ಎಕರೆ ಸರಕಾರಿ ಜಾಗದಲ್ಲಿ ಗಿಡಮೂಲಿಕೆ ಗಳನ್ನು ಬೆಳೆಸಲು ಕ್ರಿಯಾಯೋಜನೆ ರೂಪಿಸಿ ಅದನ್ನು ಸರಕಾರದ ಗಮನಕ್ಕೆ ತರುವಂತೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಸಲಹೆ ನೀಡಿದರು.
ನಗರದ ಕ್ರಿಸ್ಟಲ್ ಕೋರ್ಟ್ ಸರಕಾರಿ ಜಾಗದಲ್ಲಿ ಗಿಡಮೂಲಿಕೆ ಗಳನ್ನು ಬೆಳೆಸಲು ಕ್ರಿಯಾಯೋಜನೆ ರೂಪಿಸಿ ಅದನ್ನು ಸರಕಾರದ ಗಮನಕ್ಕೆ ತರುವಂತೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಸಲಹೆ ನೀಡಿದರು.
ನಗರದ ಕ್ರಿಸ್ಟಲ್ ಕೋರ್ಟ್ ಪಾಲುದಾರರ ಸಮಾವೇಶ ನಡೆಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಕಾಡು ಉಳಿದರೆ ನಾಡು ಉಳಿಯುತ್ತದೆ.
(ಮೊದಲ ಪುಟದಿಂದ) ಕಾಡು ಅಂದರೆ ಮರ, ಗಿಡಗಳು ಮಾತ್ರ ಅಲ್ಲ. ಅಲ್ಲಿ ಹಲವು ಜೀವಸಂಕುಲವಿದೆ. ಕಾಡಿನ ವಿವಿಧ ಹಣ್ಣುಗಳಲ್ಲಿ ಔಷಧೀಯ ಗುಣವಿದೆ. ಗಂಭೀರ ಕಾಯಿಲೆಗಳಿಗೆ ನಾಟಿ ವೈದ್ಯರು ಸಸ್ಯ ಬಳಸಿ ಔಷಧಿ ತಯಾರಿಸುತ್ತಾರೆ. ತಪ್ಪು ತಿಳುವಳಿಕೆಯಿಂದ ಕಾಡು ಗಿಡಗಳಿಂದಾಗುವ ಪ್ರಯೋಜನಗಳನ್ನು ಅವರು ತಿಳಿಸಲು ಹಿಂದೇಟು ಹಾಕುತ್ತಿದ್ದಾರೆ. ಆಧುನೀಕರಣದ ಭರದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಗಿಡಮೂಲಿಕೆಗಳು ನಾಶವಾಗುತ್ತಿವೆ. ವನ್ಯಪ್ರಾಣಿಗಳು ಗ್ರಾಮ, ನಗರಗಳಿಗೆ ಬರಲು ಆಹಾರದ ಕೊರತೆಯ ಜೊತೆಗೆ ಕಾಡುಗಳ ನಾಶವೂ ಒಂದು ಕಾರಣವಾಗಿದೆ. ಕಾಡುಗಳ ವೃದ್ಧಿಯಿಂದ ವನ್ಯಜೀವಿ ಮಾನವ ಸಂಘರ್ಷ ಕೊನೆಗಾಣುತ್ತದೆ. ಜೀವ ವೈವಿಧ್ಯ ಉಳಿದರೆ ಮಾತ್ರ ಉತ್ತಮ ನಾಳೆಗಳು ನಮ್ಮದಾಗುತ್ತದೆ. ಪ್ರಾಣಿ, ಕೀಟ, ಪರಿಸರ ಪ್ರಬೇಧ ವಿನಾಶವಾದರೆ ಮನುಷ್ಯರ ಬದುಕಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದನ್ನು ಅರಿತು ಪ್ರತಿಯೊಬ್ಬರು ಜೀವ ಸಂಕುಲ ಹಾಗೂ ಪ್ರಕೃತಿಯ ರಕ್ಷಣೆಗೆ ಮುಂದಾಗುವAತೆ ಕರೆ ನೀಡಿದರು.
ಜೀವ ವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಅನಿತಾ ಎಸ್. ಅರೇಕಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಜೀವ ವೈವಿಧ್ಯ ಕ್ಷೀಣಿಸಿದರೆ ಮನುಷ್ಯನ ಬದುಕಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಾಟಿ ವೈದ್ಯರ ಬಳಿ ಗಿಡಮೂಲಿಕೆಗಳ ಬಗ್ಗೆ ಅಪಾರ ಮಾಹಿತಿ ಇದೆ. ಅವರನ್ನು ಸಂಪರ್ಕಿಸಿ ಮಾಹಿತಿಯನ್ನು ಕಲೆಹಾಕುವ ಕೆಲಸವಾಗುತ್ತಿದೆ. ಇದರಿಂದ ಜನರಿಗೆ ಉಪಯೋಗವಾಗಬೇಕು ಎಂಬುದು ಸರಕಾರದ ಚಿಂತನೆ ಆಗಿದೆ. ಗಿಡಮೂಲಿಕೆಗಳಿಂದ ತಯಾರದ ಹಲವು ಉತ್ಪನ್ನಗಳು ಮಾರಾಟವಾಗುತ್ತಿವೆ. ಅದರಲ್ಲಿನ ಲಾಭಾಂಶದ ಮೊತ್ತವನ್ನು ಸರಕಾರ ಪಡೆದು ಆ ಹಣವನ್ನು ಉತ್ಪನ್ನಗಳು ದೊರೆತ ಸ್ಥಳೀಯ ಗ್ರಾಮ ಪಂಚಾಯ್ತಿಗೆ ನೀಡುತ್ತಿದೆ. ಈ ಕಾರಣಕ್ಕಾಗಿ ಸ್ಥಳೀಯವಾಗಿ ಲಭ್ಯವಾಗುವ ಉತ್ಪನ್ನಗಳು ವ್ಯವಸ್ಥಿತವಾಗಿ ಮಾರಾಟವಾದರೆ ವೈಯಕ್ತಿಕ ಆದಾಯದೊಂದಿಗೆ ಸಮಾಜದ ಬೆಳವಣಿಗೆಯೂ ಸಾಧ್ಯ ಎಂದು ತಿಳಿಸಿದ ಅವರು, ಕೊಡಗಿನಲ್ಲಿ ದೊರೆಯುವ ಹಲಸಿನ ಹಣ್ಣಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಆದರೆ, ಇಲ್ಲಿನ ರೈತರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಈ ರೀತಿಯ ಕಾರ್ಯಾಗಾರದಿಂದ ಕಲಿಕೆಗೆ ಅವಕಾಶ ದೊರೆಯುತ್ತದೆ ಎಂದರು.
ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಹಳೆಯ ಕಾಲದಲ್ಲಿ ಮನೆಯ ಹಿತ್ತಲಲ್ಲಿ ಔಷಧಿ ಗುಣಗಳ ಸಸ್ಯಗಳು ಸಿಗುತ್ತಿದ್ದವು. ಬದಲಾದ ಕಾಲಘಟ್ಟದಲ್ಲಿ ಇವುಗಳು ನಾಶವಾಗಿವೆ. ಜಿಲ್ಲೆಯಲ್ಲಿ ಗಿಡಮೂಲಿಕೆಗಳ ಉದ್ಯಾನ ಮಾಡುವಂತೆ ಮನವಿ ಮಾಡಿದರು.
ಕೊಡಗು ಪ್ಲಾಂಟರ್ಸ್ ಕ್ಲಬ್ ಮಾಜಿ ಅಧ್ಯಕ್ಷ ಮೋಹನ್ ದಾಸ್ ಮಾತನಾಡಿ, ನಾಟಿ ಔಷಧೀಯ ಸಸ್ಯಗಳು ಮೊದಲು ಉಪಬೆಳೆಯಾಗಿ ರೈತರು ಬೆಳೆಯುತ್ತಿದ್ದರು. ಇಂದು ಸಸ್ಯ ಸಂಕುಲದ ಮಹತ್ವವನ್ನು ಜನರು ಮರೆತಿದ್ದಾರೆ. ಈ ಕೃಷಿ ಪದ್ಧತಿ ಅಳವಡಿಕೆಯಿಂದ ರೈತರು ಆರ್ಥಿಕವಾಗಿ ಮುಂದುವರೆಯಲು ಸಾಧ್ಯ ಎಂದು ಮಾಹಿತಿ ನೀಡಿದರು.
ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವವೈವಿಧ್ಯ ಮಂಡಳಿಗೆ ಪ್ರತಿಯೊಬ್ಬರೂ ಪಾಲುದಾರ ರಾಗಿರುತ್ತಾರೆ. ಗ್ರಾಮ ಮಟ್ಟದಿಂದ ಗಿಡಮೂಲಿಕೆಗಳ ದಾಖಲೀಕರಣ ಕೆಲಸವಾಗುತ್ತಿದೆ. ನಾಟಿಗಿಡಗಳ ಉದ್ಯಾನ ಸಂಬAಧ ಸರಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು. ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮುಕ್ಕಾಟೀರ ಜಯ ಮಾತನಾಡಿದರು.