ಕುಶಾಲನಗರ, ಅ.೨೯: ನಿವೃತ್ತ ಸರ್ಕಾರಿ ನೌಕರರ ಸಂಘದ ಬೇಡಿಕೆಗಳನ್ನು ಸರ್ಕಾರದ ಮೂಲಕ ಈಡೇರಿಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ.ಎಂ ಪ್ರಕಾಶ್ ಭರವಸೆ ನೀಡಿದರು.
ಇಲ್ಲಿನ ಕೊಡವ ಸಮಾಜ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರತಿಯೊಬ್ಬ ನೌಕರ ತಮ್ಮ ಕುಟುಂಬದೊAದಿಗೆ ನಿವೃತ್ತಿ ಜೀವನವನ್ನು ನೆಮ್ಮದಿಯಾಗಿ ಕಳೆಯುವಂತಾಗಬೇಕು ಎಂದು ತಿಳಿಸಿದರು. ನಿವೃತ್ತಿ ನಂತರ ಸಮಾಜದ ಆಗುಹೋಗುಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಕರೆ ನೀಡಿದ ಪ್ರಕಾಶ್, ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ನಡೆದ ಸಂಘದ ಮಹಾಸಭೆಯಲ್ಲಿ ಪ್ರಾಸ್ತಾವಿಕವಾಗಿ ಸಂಘದ ಪದಾಧಿಕಾರಿಗಳಾದ ಕೆ.ಎ ನಾಣಯ್ಯ ಮಾತನಾಡಿದರು.
ತಾಲೂಕು ಅಧ್ಯಕ್ಷ ಸಿ.ಸಿ ರಾಘವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಸಲಹೆಗಾರರಾದ ಎಂ.ಹೆಚ್ ನಜೀರ್ ಅಹಮ್ಮದ್, ನೌಕರರ ಮನೋರಂಜನಾ ಕೇಂದ್ರದ ಅಧ್ಯಕ್ಷ ಹೆಚ್.ಬಿ ಸಂಗಮೇಶ್, ಮಡಿಕೇರಿ ಸಂಘದ ಅಧ್ಯಕ್ಷ ಬಿ.ಬಿ. ಮಾದಮಯ್ಯ, ಮಾಜಿ ಅಧ್ಯಕ್ಷ ಡಿ.ಕೆ. ಬೊಮ್ಮಯ್ಯ, ಸಂಘದ ಉಪಾಧ್ಯಕ್ಷ ಎಂ.ಬಿ. ಮೊಣ್ಣಪ್ಪ, ಕಾರ್ಯದರ್ಶಿ ಎಂ. ಅಬ್ರಹಾಂ ದಿವಾಕರ್, ಸಂಘದ ಸಂಘಟನಾ ಕಾರ್ಯದರ್ಶಿ ಸಿ.ಎ. ಸಾವಿತ್ರಿ, ನಿರ್ದೇಶಕರಾದ ಪಿ.ಬಿ ಸೋಮಣ್ಣ, ಎಸ್.ಎಂ. ರಾಜಶೇಖರ್, ಟಿ.ಎನ್ ಪಾರ್ವತಿ, ಎಸ್.ಬಿ ಗಣಪತಿ, ಸಿ.ಆರ್ ಬಸವರಾಜ್, ಕೆ.ಜಿ ಉತ್ತಯ್ಯ, ಬಿ.ಎಸ್ ರಮೇಶ್, ಸಿ.ಎ ಪಾರ್ವತಿ, ಸಿ.ಎ ಕಾವೇರಮ್ಮ, ಕೆ.ಬಿ ಶ್ರೀನಿವಾಸ್ ಇದ್ದರು.