* ಸಿದ್ದಾಪುರ, ಅ. ೨೮ : ನಂಜರಾಯಪಟ್ಟಣದ ಶ್ರೀ ಚಾಮುಂಡೇಶ್ವರಿ ದೇವಾಲಯದ ೧೬ನೇ ವರ್ಷದ ವಾರ್ಷಿಕೋತ್ಸವವು ತಾ.೩೧ ಮತ್ತು ನ.೧ ರಂದು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಜರುಗಲಿದೆ. ತಾ.೩೧ ರಂದು ಸಂಜೆ ೫ ಗಂಟೆಯಿAದ ೯ ಗಂಟೆವರೆಗೆ ದುರ್ಗಾಪೂಜೆ, ಪುಣ್ಯಾಹ ಶುದ್ಧಿ ನಡೆಯಲಿದೆ.
ನ.೧ ರಂದು ಬೆಳಿಗ್ಗೆ ೬.೩೦ ಗಂಟೆಗೆ ಗಣಪತಿ ಹೋಮ, ೯ ಗಂಟೆಗೆ ನವಕ, ಕಳಸ ಪೂಜೆ, ೧೦ ಗಂಟೆಗೆ ಕಲಶಾಭಿಷೇಕ ಹಾಗೂ ಮಹಾಪೂಜೆ ನೆರೆವೇರಲಿದೆ. ಮಧ್ಯಾಹ್ನ ೧೨.೩೦ಕ್ಕೆ ಅನ್ನದಾನ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.