ಪೊನ್ನAಪೇಟೆ, ಅ. ೨೯: ಇತ್ತೀಚೆಗೆ ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಬಿಟ್ಟಂಗಾಲ ಗ್ರಾಮದ ತಂಗಾಳಿ ಒಳಾಂಗಣ ಕ್ರೀಡಾಂಗಣದಲ್ಲಿ ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕಿನ ಒಕ್ಕಲಿಗರಿಗಾಗಿ ಆಯೋಜಿಸಲಾಗಿದ್ದ ೩ನೇ ವರ್ಷದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಬ್ಯಾಡ್ಮಿಂಟನ್ ಆಡುವ ಮೂಲಕ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸಮುದಾಯದ ಕ್ರೀಡಾಪಟುಗಳ ಪ್ರತಿಭೆ ಹೊರತರಲು ಇದು ಒಳ್ಳೆಯ ವೇದಿಕೆ. ಒಕ್ಕಲಿಗರು ಸಂಘಟಿತರಾಗಿ ಮುಂದೆ ಬರಬೇಕು. ಕೆಂಪೇಗೌಡರ ರಥಯಾತ್ರೆಯನ್ನು ಕೊಡಗಿನಲ್ಲಿ ಸಂಭ್ರಮದಿAದ ಬರಮಾಡಿಕೊಂಡು ಅಚ್ಚುಕಟ್ಟಾಗಿ ಕಳುಹಿಸಿಕೊಡಲು ಒಂದಾಗಿ ಕೆಲಸ ಮಾಡೋಣ ಎಂದರು. ಮತ್ತೊಬ್ಬ ಅತಿಥಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಹೆಚ್.ಎಸ್. ಚೇತನ್ ಕುಮಾರ್ ಮಾತನಾಡಿ, ಕ್ರೀಡಾ ತವರಿನಲ್ಲಿ ಸಮುದಾಯದ ಸಂಘಟನೆಗೆ ಕ್ರೀಡೆ ಬಹಳ ಸಹಕಾರಿಯಾಗಿದ್ದು, ಉತ್ತಮ ಕ್ರೀಡಾಪಟುಗಳು ಮುನ್ನಲೆಗೆ ಬಂದು ರಾಷ್ಟçಮಟ್ಟದಲ್ಲಿ ಪ್ರತಿನಿಧಿಸಲಿ ಎಂದರು. ಒಕ್ಕಲಿಗರ ಮೀಸಲಾತಿಗೂ ಕೂಡ ಒಕ್ಕಲಿಗರು ಒಂದಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು. ಕೊಡಗು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಡಿ ಕೃಷ್ಣಪ್ಪ, ಕಾಂಗ್ರೆಸ್ ಮುಖಂಡ ಮಂಥರ್ ಗೌಡ ಮಾತನಾಡಿ, ಪಂದ್ಯಾವಳಿಗೆ ಶುಭ ಕೋರಿದರು. ಯುವ ವೇದಿಕೆ ಅಧ್ಯಕ್ಷ ವಿ.ಪಿ. ಲೋಹಿತ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎನ್. ಮಂಜುನಾಥ್ ಮತ್ತು ಮಹೇಶ್, ಅಜಿತ್, ಅಕ್ಷತ್, ದಿತಿನ್, ದರ್ಶನ್ ಉಪಸ್ಥಿತರಿದ್ದರು.
ಫಲಿತಾಂಶ: ಬ್ಯಾಡ್ಮಿಂಟನ್ ಡಬಲ್ಸ್ನಲ್ಲಿ ದಿತಿನ್ ಮತ್ತು ಕೀರ್ತನ್ ಜೋಡಿ ಪ್ರಥಮ, ರಾಕೇಶ್ ಮತ್ತು ನವೀನ್ ದ್ವಿತೀಯ ಸ್ಥಾನ ಪಡೆದುಕೊಂಡರು. ಪುರುಷರ ಸಿಂಗಲ್ಸ್ ಪ್ರಮೋದ್ ಪ್ರಥಮ, ಅಜಯ್ ದ್ವಿತೀಯ, ಮಹಿಳೆಯರ ಸಿಂಗಲ್ಸ್ನಲ್ಲಿ ಸಹನಾ ಪ್ರಥಮ, ಗಾನವಿ ದ್ವಿತೀಯ ಸ್ಥಾನ ಪಡೆದುಕೊಂಡರು. ಹಾತೂರು ಗ್ರಾಮದ ಜೀವನ್ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದುಕೊಂಡರು. ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ವಿ.ಪಿ. ಲೋಹಿತ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾದ ನಿವೃತ್ತ ಶಿಕ್ಷಕರಾದ ಹೆಚ್.ಎಂ. ಗೋಪಾಲಕೃಷ್ಣ, ವೀರಾಜಪೇಟೆ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಖಜಾಂಚಿ ಡಿ. ಚಂದನ ಮಂಜುನಾಥ್, ವಿ.ಎನ್. ಮಹೇಶ್, ವಿ.ಸಿ. ಪ್ರಕಾಶ್, ವಿ.ಜಿ. ದಶರಥ, ವಿ.ಬಿ. ರಘು, ವಿ.ಪಿ. ಜೀವನ್, ವೇದಿಕೆ ಉಪಾಧ್ಯಕ್ಷ ವಿ.ಪಿ. ಡಾಲು, ಖಜಾಂಚಿ ಕೆ.ಬಿ. ಪವನ್ ಕುಮಾರ್, ಒಕ್ಕಲಿಗರ ಯುವ ವೇದಿಕೆಯ ಪದಾಧಿಕಾರಿಗಳು ಬಹುಮಾನ ವಿತರಿಸಿದರು.