ವೀರಾಜಪೇಟೆ, ಅ. ೨೮: ಕಳೆದ ಹಲವು ವರ್ಷಗಳಿಂದ ಗ್ರಾಮೀಣ ರಸ್ತೆಗಳು ದುರಸ್ತಿ ಕಾಣದೆ ನೆನೆಗುದಿಗೆ ಬಿದ್ದಿದೆ, ಎಲ್ಲಿ ನೋಡಿದರೂ ಬೃಹತ್ ಗುಂಡಿಗಳ ದರ್ಶನ, ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆ ಮತ್ತು ಅಧಿಕಾರಿ ವರ್ಗಗಳ ಬೇಜವಾಬ್ದಾರಿ ನಡೆಯಿಂದ ಅತ್ತೂರು ಗ್ರಾಮದ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸ ಲಾಗಿದೆ ಎಂದು ಅತ್ತೂರು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು ಗ್ರಾಮ ಕಾರೆಕಾಡು ಜಂಕ್ಷನ್ನಿAದ ಪಾಲಿಬೆಟ್ಟ ಗದ್ದೆಮನೆ ತೆರಳುವ ೨೦೦ ಮೀಟರ್ ರಸ್ತೆ, ಕಾರೇಕಾಡು- ಕೈಕೇರಿ ೧.೫ ಕಿ.ಮೀ. ಕಾರೆಕಾಡು - ಜ್ಯೂಸ್ ಫ್ಯಾಕ್ಟರಿಯಿಂದ ಗೋಣಿಕೊಪ್ಪಲಿಗೆ ತೆರಳುವ ೨ ಕಿ.ಮೀ. ರಸ್ತೆ ಸಂಪೂರ್ಣ ಬೃಹತ್ ಗಾತ್ರದ ಗುಂಡಿಗಳಿAದ ಆವರಿಸಿದ್ದು ರಸ್ತೆಯಲ್ಲಿ ಸಂಚಾರ ಮಾಡುವುದು ಕಷ್ಟ ಸಾಧ್ಯವಾಗಿದೆ. ಒಂದು ಬದಿಯಿಂದ ಮತ್ತೊಂದು ಬದಿಗೆ ಸಂಚರಿಸುವ ವಾಹನ ಸವಾರರ ಮಧ್ಯೆ ಗುಂಡಿಗಳ ತಪ್ಪಿಸುವ ವಿಚಾರದಲ್ಲಿ ಸಂಘರ್ಷಗಳು ನಡೆದಿದೆ. ದಿನನಿತ್ಯ ಈ ಭಾಗದಲ್ಲಿ ಐದುನೂರುಕ್ಕಿಂತ ಹೆಚ್ಚಿನ ವಾಹನಗಳು ಸಂಚಾರ ಮಾಡುತ್ತಿವೆ. ದುರಸ್ತಿ ಕಾಣದ ರಸ್ತೆಯಲ್ಲಿ ವಾರಕ್ಕೆ ಒಂದಾದರೂ ಅಪಘಾತ ಸಂಭವಿಸುತ್ತಿದೆ. ಈ ಭಾಗದ ರಸ್ತೆಗಳಿಗಾಗಿ ಗ್ರಾಮ ಪಂಚಾಯಿತಿ, ತಾಲೂಕು ಆಡಳಿತ ಜಿಲ್ಲಾಡಳಿತ ಹಾಗೂ ಜನಪ್ರತಿ ನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯಲ್ಲಿ ಸ್ಪಂದನ ನೀಡುತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಗ್ರಾಮೀಣ ರಸ್ತೆಗಳ ಬಗ್ಗೆ ಮಾತನಾಡಿದ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಅವರು ಕಳೆದ ಐದು ವರ್ಷಗಳಿಂದ ರಸ್ತೆಗಳನ್ನು ದುರಸ್ತಿ ಮಾಡುವ ವಿಷಯದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವರ್ಗವು ತಾತ್ಸಾರ ಮನೋಭಾವ ಹೊಂದಿದ್ದಾರೆ. ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟದ ಸಾಮಗ್ರಿಗಳನ್ನು ಬಳಕೆ ಮಾಡುತ್ತಿಲ್ಲ. ಮಳೆಗಾಲದಲ್ಲಿ ರಸ್ತೆಯ ಗುಂಡಿಗಳಲ್ಲಿ ಮಳೆನೀರು ತುಂಬಿಕೊAಡು ದ್ವೀಪದಂತೆ ಗೋಚರಿಸುತ್ತದೆ. ರಸ್ತೆಯಲ್ಲಿ ಒಂದು ಬಾರಿ ಸಂಚಾರ ಮಾಡಿದರೆ ಸಾಕು ವಾಹನ ದುರಸ್ತಿಗಾಗಿ ಸಾವಿರಾರು ರೂಪಾಯಿ ಗಳನ್ನು ವೆಚ್ಚ ಮಾಡುವುದು ಸರ್ವೆ ಸಾಮಾನ್ಯವಾಗಿದೆ ಎಂದು ದೂರಿದರು. ಒಟ್ಟಿನಲ್ಲಿ ರಸ್ತೆಯ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿ ನಿರ್ಮಾಣವಾಗಿದೆ. ಎಂದು ಗ್ರಾಮೀಣ ರಸ್ತೆಯ ಬಗ್ಗೆ ದೂರಿದರು.
ಅಧಿಕಾರಿಗಳ ವರ್ಗವು ರಸ್ತೆ ಅಭಿವೃದ್ಧಿಗೆ ತಳಮಟ್ಟದಿಂದ ಕಾಮಗಾರಿಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು ಇಲ್ಲಿ ಅದು ನಡೆಯುತ್ತಿಲ್ಲ. ಅಧಿಕಾರಿ ವರ್ಗವು ಗ್ರಾಮದಲ್ಲಿ ಹಾದು ಹೋಗುವ ರಸ್ತೆಗಳನ್ನು ಕಡೆಗಣಿಸಿ ದ್ದಾರೆ ಎಂದು ಮಾಜಿ ಗ್ರಾ.ಪಂ. ಸದಸ್ಯ ಪಟ್ಟು ಕಾವೇರಪ್ಪ ದೂರಿದರು.
ಅಮ್ಮತ್ತಿ ಹೊಸೂರು ರಸ್ತೆ, ಕೈಕೇರಿ ರಸ್ತೆ, ಗೋಣಿಕೊಪ್ಪ ಪಾಲಿಬೆಟ್ಟ ಸಂಪರ್ಕ ರಸ್ತೆ, ಕಾರೆಕಾಡು ಅತ್ತೂರು ಸಂಪರ್ಕ ರಸ್ತೆಗಳು ತೀವ್ರ ರೀತಿಯಲ್ಲಿ ದುಸ್ಥಿತಿ ತಲುಪಿವೆ. ಸಂಚಾರಕ್ಕೆ ಯೋಗ್ಯವಲ್ಲದಾಗಿದೆ. ರಸ್ತೆಯ ದುರಸ್ತಿಗೆ ಹಲವಾರು ಬಾರಿ ಮನವಿ ಮಾಡಿದರು ಜನಪ್ರತಿನಿಧಿಗಳು ಮುಂದಾಗದಿರುವುದು ದುರಾ ದೃಷ್ಟವಾಗಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ ಸಂಚಾರವು ಮುಖ್ಯವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ರಸ್ತೆಯಲ್ಲಿ ಕ್ರಮಿಸಿದರೆ ನಿಗದಿತ ಸ್ಥಳಕ್ಕೆ ತಲುಪುವುದು ಸಾಹಸದ ಕೆಲಸವಾಗಿದೆ ಎಂದು ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕುಶಾಲಪ್ಪ ಅಭಿಪ್ರಾಯಿಸಿದ್ದಾರೆ.
ರಸ್ತೆಯ ದುರಸ್ತಿಗಾಗಿ ಕಾರೆಕಾಡು, ಹೊಸೂರು, ಅತ್ತೂರು, ಗದ್ದೆಮನೆ, ಗ್ರಾಮದ ಗ್ರಾಮಸ್ಥರಾದ ಸಿ.ಪಿ. ಬೆಳ್ಯಪ್ಪ, ಕೆ.ಯು. ಗಣಪತಿ, ಪಟ್ಟಡ ಅರುಣ್ ಚೆಂಗಪ್ಪ, ಮಚ್ಚಾರಂಡ ಪ್ರೇಮ್, ಕುಪ್ಪಂಡ ಸುರೇಶ್, ಕಾವೇರಪ್ಪ ಹೂಸೂರು ಗ್ರಾಮದ ಪಿ.ಟಿ. ಉತ್ತಯ್ಯ ಅವರುಗಳು ಆಗ್ರಹಿಸಿದ್ದಾರೆ.
-ಕಿಶೋರ್ ಕುಮಾರ್ ಶೆಟ್ಟಿ