ಮಡಿಕೇರಿ, ಅ. ೨೭: ದಾನಿಗಳ ನೆರವು ಪಡೆದು ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ. ಹಮೀದ್ ಅವರ ನೇತೃತ್ವದಲ್ಲಿ ಸಂಪಾಜೆ ಗ್ರಾಮದ ಬಡ ಕುಟುಂಬವೊAದಕ್ಕೆ ರೂ. ೧೦ ಲಕ್ಷ ವೆಚ್ಚದಲ್ಲಿ ಹೊಸ ಮನೆ ನಿರ್ಮಿಸಲಾಗಿದ್ದು, ತಾ. ೨೩ರಂದು ಹಸ್ತಾಂತರಿಸಲಾಯಿತು.

ಕಷ್ಟದಲ್ಲಿದ್ದ ಈ ವೃದ್ಧ ದಂಪತಿಗಳಿಗೆ ಅನಿವಾಸಿ ಭಾರತೀಯ ಕಲ್ಲುಗುಂಡಿಯ ಯುವಕರು ರೂ. ೨೫ ಸಾವಿರ ನೀಡಿದ್ದರು. ಆ ಹಣದಲ್ಲಿ ದಂಪತಿಗಳು ಹೊಸ ಮನೆಯ ಫೌಂಡೇಶನ್ ಕೆಲಸ ಮಾಡಿದರು. ಆದರೆ, ಮತ್ತೆ ಅವರಿಂದ ಮುಂದುವರಿಯಲು ಸಾಧ್ಯವಾಗಲಿಲ್ಲ. ವೃದ್ಧ ದಂಪತಿಯ ಮನೆಯ ಕನಸು ಅರ್ಧಕ್ಕೆ ನಿಂತಿತ್ತು.

ಕಳೆದ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಈ ಮನೆ ಭಾರೀ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.

ಮನೆ ಹಸ್ತಾಂತರ ಸಂದರ್ಭ ವರ್ತಕರ ಸಂಘದ ಅಧ್ಯಕ್ಷ ಚಕ್ರಪಾಣಿ ಹಾಗೂ ಗುತ್ತಿಗೆದಾರರಾದ ನಿಜಾರ್ ಪೋವಲ್ ರಿಬ್ಬನ್ ಕಟ್ ಮಾಡಿ ಚಾಲನೆ ನೀಡಿದರು. ಗೃಹ ಪ್ರವೇಶ ಧಾರ್ಮಿಕ ವಿಧಿ - ವಿಧಾನಗಳೊಂದಿಗೆ ಸಯ್ಯದ್ ಹಕೀಮ್ ತಂಗಳ್ ಆದೂರ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಲ್ಲುಗುಂಡಿ ಜುಮಾ ಮಸೀದಿ ಕತೀಬ್ ನÀಹೀಮ್ ಫೈಜಿ, ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಕೆ. ಹಮೀದ್, ಗೂನಡ್ಕ ಉಪಾಧ್ಯಕ್ಷ ಲಿಸ್ಸಿ ಮೊನಾಲಿಸಾ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಮ್. ಶಾಹಿದ್ ತೆಕ್ಕಿಲ್ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಉಮರ್ ಬೀಜದ ಕಟ್ಟೆ, ಪಂಚಾಯಿತಿ ಸದಸ್ಯರುಗಳಾದ ಜಗದೀಶ್ ರೈ, ಎಸ್.ಕೆ. ಹನೀಫ್, ಅಬೂಸಾಲಿ ಗೂನಡ್ಕ, ವಿಮಲಾ ಪ್ರಸಾದ್, ಸವಾದ್, ಮಾಜಿ ಅಧ್ಯಕೆÀ್ಷ ಯಮುನಾ, ಬಿ.ಎಸ್. ಪದ್ಮಯ್ಯ ಗೌಡ ಬೊಳುಗಲ್ಲು, ಕಿಶೋರ್ ಕುಮಾರ್, ಪ್ರಶಾಂತ್ ವಿ.ವಿ., ಅಯ್ಯುಬ್, ರಹೀಮ್ ಬೀಜದಕಟ್ಟೆ, ಸುನಿಲ್ ಕುಮಾರ್, ದುರ್ಗಾ ಪ್ರಸಾದ್, ದಿನಕರ ಗೌಡ ಸಣ್ಣಮನೆ, ಅಬ್ಬಾಸ್ ಸಂಟ್ಯಾರ್, ಇಬ್ರಾಹಿಂ ಎ.ಕೆ., ಹಸೈನಾರ್ ಎ.ಕೆ., ಸಲೀಂ ಪೆರುಂಗೋಡಿ, ಸಿರಾಜ್ ಕರಾವಳಿ ಮೊದಲಾದವರು ಭಾಗವಹಿಸಿದ್ದರು. ದಾನಿಗಳ ಸಹಕಾರದಿಂದ ಪಂಚಾಯಿತಿ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ, ಹಕೀಂ ತಂಗಳ್ ಆದೂರ್, ತಾಜ್ ಮಹಮದ್, ರಫೀಕ್ ಕೆ.ಎಮ್., ಪ್ರಗತಿ ಚಿಕನ್ ಮುತುವರ್ಜಿ ವಹಿಸಿ ಮನೆ ನಿರ್ಮಾಣ ಮಾಡುವಲ್ಲಿ ವಿಶೇಷವಾಗಿ ಸಹಕರಿಸಿದರು.