ನಾಪೋಕ್ಲು, ಅ. ೨೮: ಇಲ್ಲಿನ ನಾಲ್ನಾಡ್ ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ದ್ವಿತೀಯ ವರ್ಷದ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಿತು.
ನಾಲ್ನಾಡ್ ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ನಾಪೋಕ್ಲು ವತಿಯಿಂದ ೦.೨೨ ರೈಫಲ್ ೫೦ ಮೀಟರ್ ರೇಂಜ್, ೨ನೇ ವಿಭಾಗ ೧೨ ಬೋರ್ ೩೦ ಮೀಟರ್ ರೇಂಜ್ ಮತ್ತು ಏರ್ ಗನ್ ಎಗ್ ಶೂಟಿಂಗ್ ಸೇರಿದಂತೆ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ಜರುಗಿದವು.
೦.೨೨ ವಿಭಾಗದಲ್ಲಿ ಕನ್ನಿಕಂಡ ಶ್ಯಾಂ ಪ್ರಥಮ ಸ್ಥಾನವನ್ನು ಪಡೆದರು. ದ್ವಿತೀಯ ಸ್ಥಾನವನ್ನು ಬಡುವಂಡ ದೇವಯ್ಯ ಹಾಗೂ ತೃತೀಯ ಸ್ಥಾನವನ್ನು ಪುದಿಯೊಕ್ಕಡ ಪೂಣಚ್ಚ ಪಡೆದರು. ೧೨ ಬೋರ್ ವಿಭಾಗದಲ್ಲಿ ಚೋನಿರ ಸಜನ್ ಪ್ರಥಮ ಸ್ಥಾನವನ್ನು ಪಡೆದರು. ದ್ವಿತೀಯ ಸ್ಥಾನವನ್ನು ಅಜ್ಜೆಟ್ಟಿರ ಸೋಮಯ್ಯ ಪಡೆದರೆ ತೃತೀಯ ಸ್ಥಾನವನ್ನು ಮುಂಡAಡ ರಂಜನ್ ಗಳಿಸಿದರು.
ಏರ್ ರೈಫಲ್ ವಿಭಾಗದಲ್ಲಿ ಪುತ್ತರಿರ ನಂಜಪ್ಪ ಪ್ರಥಮ ಸ್ಥಾನಗಳಿಸಿದರೆ, ನೆಲ್ಲಿರ ಧನು ದ್ವಿತೀಯ ಸ್ಥಾನ ಗಳಿಸಿದರು. ತೃತೀಯ ಸ್ಥಾನವನ್ನು ಕನ್ನಂಡ ಯತೀಶ್ ಗಳಿಸಿದರು. ಮೊದಲನೇ ವಿಭಾಗದಲ್ಲಿ ವಿಜೇತರಾದವರಿಗೆ ನಬಾರ್ಡ್ನ ನಿವೃತ್ತ ಡಿಡಿಎಂ ಮುಂಡAಡ ಸಿ.ನಾಣಯ್ಯ ಅವರು ತಮ್ಮ ತಂದೆ ಚಿಣ್ಣಪ್ಪ ಮತ್ತು ತಾಯಿ ಗೋಪಿ ಪೂವವ್ವ ಅವರ ಜ್ಞಾಪಕಾರ್ಥವಾಗಿ ನೀಡಿರುವ ಪ್ರಥಮ ಬಹುಮಾನ ೫೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ಮಾಜಿ ಅಡಿಷನಲ್ ಅಡ್ವೋಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ತಮ್ಮ ತಂದೆ ಎ.ಕೆ. ಸುಬ್ಬಯ್ಯ ಮತ್ತು ತಾಯಿ ಪೊನ್ನಮ್ಮ ಅವರ ಜ್ಞಾಪಕಾರ್ಥವಾಗಿ ನೀಡಿರುವ ದ್ವಿತೀಯ ಬಹುಮಾನ ೩೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ಯವಕಪಾಡಿಯ ಕಾಫಿ ಬೆಳೆಗಾರರಾದ ಪಾಂಡAಡ ಕಿಶನ್ ಪೂಣಚ್ಚ ಅವರು ನೀಡಿರುವ ತೃತೀಯ ಬಹುಮಾನ ೨೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ಲಭಿಸಿತು.
೨ನೇ ವಿಭಾಗದಲ್ಲಿ ವಿಜೇತರಾದವರಿಗೆ ನೆಲಜಿಯ ಜಯ ಕಾಫಿಯ ಮಂಡೀರ ಜಯ ದೇವಯ್ಯ ನೀಡಿರುವ ಪ್ರಥಮ ಬಹುಮಾನ ೨೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ಯವಕಪಾಡಿಯ ಅಂಜಪರವAಡ ಕುಶಾಲಪ್ಪ ಅವರು ತಮ್ಮ ತಂದೆ ಸದಾ ಅಯ್ಯಪ್ಪ ಅವರ ಜ್ಞಾಪಕಾರ್ಥವಾಗಿ ನೀಡಿರುವ ದ್ವಿತೀಯ ಬಹುಮಾನ ೧೫ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ನೆಲಜಿಯ ಕಾಫಿ ಬೆಳೆಗಾರರಾದ ಚೀಯಕಪೂವಂಡ ಕಂಬು ನಂಜಪ್ಪ ಅವರು ತಮ್ಮ ಪತ್ನಿ ಮೀನಾಕ್ಷಿ ಅವರ ಜ್ಞಾಪಕಾರ್ಥವಾಗಿ ನೀಡಿರುವ ತೃತೀಯ ಬಹುಮಾನ ೧೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಯಿತು.
೩ನೇ ವಿಭಾಗ ಕೋಳಿ ಮೊಟ್ಟೆಗೆ ಗುರಿ ಇಡುವುದು: ಪ್ರಥಮ ಬಹುಮಾನ ೫ ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ ೩ ಸಾವಿರ ನಗದು ಮತ್ತು ಟ್ರೋಫಿ, ತೃತೀಯ ಬಹುಮಾನ ೨ ಸಾವಿರ ನಗದು ಮತ್ತು ಟ್ರೋಫಿಯನ್ನು ದಾನಿಗಳಾದ ಕಾಫಿ ಬೆಳೆಗಾರ ಅರೆಯಡ ಎಂ. ರತ್ನ ಪೆಮ್ಮಯ್ಯ ಅವರು ತಮ್ಮ ತಂದೆ ಎ.ಬಿ.ಮೇದಪ್ಪ ಅವರ ಜ್ಞಾಪಕಾರ್ಥವಾಗಿ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಬಾರ್ಡ್ನ ನಿವೃತ್ತ ಡಿಡಿಎಂ ಮುಂಡAಡ ಸಿ. ನಾಣಯ್ಯ ಮಾತನಾಡಿ, ಯುವಕರಿಗೆ ಧೈರ್ಯತುಂಬುವ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ಸಮಾಜ ಹಾಗೂ ಸಂಘ-ಸAಸ್ಥೆಗಳು ಕಾರ್ಯೋನ್ಮುಖರಾಗುವುದರ ಜೊತೆಗೆ ಸ್ಪರ್ಧಾತ್ಮಕ ಯುಗದಲ್ಲಿ ಕೋವಿಯ ಗುರಿಮಾತ್ರವಲ್ಲ ಬದುಕಿನ ಗುರಿ ಸಾಧಿಸುವ ಛಲ ಬೆಳೆಯಬೇಕು ಎಂದರು. ಅಸೋಸಿಯೇಷನ್ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಈ ಸಂದರ್ಭ ನಗದು ಮತ್ತು ಟ್ರೋಫಿ ದಾನಿ ಪಾಂಡAಡ ಕಿಶನ್ ಪೂಣಚ್ಚ, ನೆಲಜಿಯ ಉದ್ಯಮಿ ಮಂಡೀರ ಜಯ ದೇವಯ್ಯ, ಅರೆಯಡ ಎಂ. ರತ್ನ ಪೆಮ್ಮಯ್ಯ, ಅಂಜಪರವAಡ ಕುಶಾಲಪ್ಪ , ಚೀಯಕಪೂವಂಡ ಕಂಬು ನಂಜಪ್ಪ, ಅಸೋಸಿಯೇಷನ್ ಉಪಾಧ್ಯಕ್ಷ ಅರೆಯಡ ರತ್ನಾ ಪೆಮ್ಮಯ್ಯ, ಕಾರ್ಯದರ್ಶಿ ಚೀಯಕಪೂವಂಡ ಎಂ. ಅಪ್ಪಚ್ಚು, ಜಂಟಿ ಕಾರ್ಯದರ್ಶಿ ಕೇಟೋಳಿರ ಹರೀಶ್ ಪೂವಯ್ಯ, ಖಜಾಂಚಿ ಕರವಂಡ ಬೆಲ್ಲು ಬೆಳ್ಯಪ್ಪ, ನಿರ್ದೇಶಕರಾದ ಬೊಳ್ಳಜೆಟ್ಟೀರ ಎಂ. ಸುರೇಶ್, ಅರೆಯಡ ಅಶೋಕ್ ಮುದ್ದಪ್ಪ, ಚೇನಂಡ ಸುರೇಶ್ ನಾಣಯ್ಯ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಬಡಕಡ ಸುರೇಶ್ ಬೆಳ್ಳಿಯಪ್ಪ, ಕೇಟೋಳಿರ ಪಿ ವಿನೋದ್, ಕುಂಡಿಯೊಳAಡ ಬೋಪಣ್ಣ, ಕೇಟೋಳಿರ ಶಮ್ಮಿ , ಚೋಕಿರ ಎಸ್. ರೋಷನ್ ಇನ್ನಿತರರು ಉಪಸ್ಥಿತರಿದ್ದು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ದಾನಿಗಳು ನೀಡಿದ ನಗದು ಹಾಗೂ ಟ್ರೋಫಿ ಮತ್ತು ಮಡಿಕೇರಿ ಮುಳಿಯ ಜುವೆಲರ್ಸ್ ಅವರು ವಿಜೇತರಿಗೆ ನೀಡಿದ ಬೆಳ್ಳಿಯ ನಾಣ್ಯಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಚೋಕಿರ ಯಾನ ಚಿನ್ನಪ್ಪ ಪ್ರಾರ್ಥಿಸಿದರು. ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಬಾಚಮಂಡ ಲವ ಚಿನ್ನಪ್ಪ ಸ್ವಾಗತಿಸಿದರು. ಮುಕ್ಕಾಟಿರ ಎಂ. ವಿನಯ್ ನಿರೂಪಿಸಿ, ವಂದಿಸಿದರು.