ಭಾಗಮಂಡಲ, ಅ. ೨೭: ಭಾಗಮಂಡಲ ತಲಕಾವೇರಿ ಕ್ಷೇತ್ರಗಳ ಹುಂಡಿ ಎಣಿಕೆ ಕಾರ್ಯವು ಇಂದು ನಡೆಯಿತು. ಬೆಳಿಗ್ಗೆ ೯ ರಿಂದ ಆರಂಭಗೊAಡ ಹುಂಡಿ ಎಣಿಕೆ ಕಾರ್ಯವು ರಾತ್ರಿ ೮ ರವರೆಗೆ ನಡೆದಿದ್ದು ಈ ಬಾರಿ ಅಧಿಕ ಹುಂಡಿ ಸಂಗ್ರಹವಾಗಿದೆ. ಕಳೆದ ತಿಂಗಳು ೨೧ ರಂದು ಹುಂಡಿ ಎಣಿಕೆ ನಡೆದಿತ್ತು. ಜಾತ್ರೆಯ ಬಳಿಕ ಹುಂಡಿ ಎಣಿಕೆ ಕಾರ್ಯವನ್ನು ನಡೆಸಲಾಗಿದ್ದು ತಲಕಾವೇರಿಯಲ್ಲಿ ೭ ಲಕ್ಷದ ಹದಿನೈದು ಸಾವಿರದ ೬೧೫ ಸಂಗ್ರಹವಾಗಿದ್ದರೆ ಭಾಗಮಂಡಲದಲ್ಲಿ ನಾಲ್ಕು ಲಕ್ಷ ತೊಂಬತ್ತಾರು ಸಾವಿರದ ೬೦೧ ಸಂಗ್ರಹವಾಗಿದೆ. ಅನ್ನದಾನದಲ್ಲಿ ೩,೧೭,೮೮೫ ಸಂಗ್ರಹವಾಗಿದ್ದು ಒಟ್ಟಾರೆ ಸಂಗ್ರಹ ೧೫ ಲಕ್ಷದ ಮೂವತ್ತು ಸಾವಿರದ ನೂರ ಒಂದು ರೂಪಾಯಿ ಆಗಿದೆ. ಇ ಖಾತೆಯಲ್ಲಿ (ಕ್ಯೂಆರ್ ಕೋಡ್ ಹಾಗೂ ಪೂಜಾ ಸೇವೆ)ಯಲ್ಲಿ ೯೩,೯೪೦ ಸಂಗ್ರಹವಾಗಿದ್ದು ಒಟ್ಟಾರೆ ರೂ. ೧೬,೨೪,೦೪೧ ರೂಪಾಯಿ ಸಂಗ್ರಹವಾಗಿದೆ. - ಸುನಿಲ್ ಕುಯ್ಯಮುಡಿ