ಮುಳ್ಳೂರು, ಅ. ೨೭: ಸಮೀಪದ ನಿಡ್ತ ಗ್ರಾ.ಪಂ.ಯ ತೆರವಾಗಿದ್ದ ಒಂದು ಸದಸ್ಯ ಸ್ಥಾನಕ್ಕಾಗಿ ತಾ.೨೮ರಂದು (ಇಂದು) ಚುನಾವಣೆ ನಡೆಯಲಿದೆ. ಈ ಹಿಂದೆ ನಿಡ್ತ ಗ್ರಾ.ಪಂ.ಯ ಮುಳ್ಳೂರು ವಾರ್ಡಿನಿಂದ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಎಂ.ಎಸ್.ಅಶೋಕ್ ಅವರು ಸದಸ್ಯರಾಗಿದ್ದರು. ಆದರೆ ಅವರ ಅಕಾಲಿಕ ನಿಧನದಿಂದ ಈಗ ಚುನಾವಣೆ ನಡೆಸಲಾಗುತ್ತಿದ್ದು ತೆರವಾದ ೧ ಸ್ಥಾನಕ್ಕಾಗಿ ಪರಿಶಿಷ್ಟ ಜಾತಿ ಕ್ಷೇತ್ರದಿಂದ ೪ ಪುರುಷ ಅಭ್ಯರ್ಥಿಗಳು ಮತ್ತು ದಿ. ಅಶೋಕ್ ಅವರ ಪತ್ನಿ ಸೇರಿದಂತೆ ೫ ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಚುನಾವಣೆ ಬೆಳಿಗ್ಗೆ ೮ ಗಂಟೆಯಿAದ ಸಂಜೆ ೫ ಗಂಟೆವರೆಗೆ ನಿಡ್ತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿ ವೆಂಕಟ್‌ನಾಯಕ್ ತಿಳಿಸಿದ್ದಾರೆ.