ಚೆಟ್ಟಳ್ಳಿ, ಅ. ೨೮: ಕಂಡಕರೆಯ ಗಾಂಧಿ ಯುವಕ ಸಂಘದ ವತಿಯಿಂದ ಚೆಟ್ಟಳ್ಳಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಅಂಡರ್ ೨೦ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಫ್ಲಸ್ಟರ್ಸ್ ಅಮ್ಮತ್ತಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.

ರನ್ನರ್ಸ್ ಪ್ರಶಸ್ತಿಯನ್ನು ನೆಹರು ಎಫ್.ಸಿ ಪಾಲಿಬೆಟ್ಟ ತಂಡ ಪಡೆದುಕೊಂಡಿತು. ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಫ್ಲಸ್ಟರ್ಸ್ ತಂಡವು ೧ ಗೋಲುಗಳಿಸಿ ಮುನ್ನಡೆ ಪಡೆಯಿತು. ಪಾಲಿಬೆಟ್ಟ ತಂಡವು ಸಮಬಲದ ಗೋಲು ಬಾರಿಸಿತು.

ಆದರೆ ದ್ವಿತೀಯಾರ್ಧದಲ್ಲಿ ಫ್ಲಸ್ಟರ್ಸ್ ತಂಡದ ನಾಯಕ ಸಿನಾನ್ ಅವರ ಅಮೋಘ ಎರಡು ಗೋಲುಗಳ ನೆರವಿನಿಂದ ೩-೧ ಗೋಲುಗಳ ಅಂತರದಿAದ ಗೆದ್ದು ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡರು. ಇದಕ್ಕೂ ಮೊದಲು ನಡೆದ ಮೊದಲನೆಯ ಸೆಮಿಫೈನಲ್ ಪಂದ್ಯವು ಆತಿಥೇಯ ಗಾಂಧಿ ಎಫ್.ಸಿ ಹಾಗೂ ಫ್ಲಸ್ಟರ್ಸ್ ಅಮ್ಮತ್ತಿ ತಂಡಗಳ ನಡುವೆ ನಡೆಯಿತು. ಫ್ಲಸ್ಟರ್ಸ್ ತಂಡವು ೩-೧ ಗೋಲುಗಳ ಅಂತರದಿAದ ಗೆದ್ದು ಫೈನಲ್ ಪ್ರವೇಶಿಸಿತು.

ದ್ವಿತೀಯ ಸೆಮಿಫೈನಲ್ ಪಂದ್ಯವು ನೆಹರು ಎಫ್.ಸಿ ಪಾಲಿಬೆಟ್ಟ ಹಾಗೂ ಅಮಿಟಿ ಗದ್ದೆಹಳ್ಳ ತಂಡಗಳ ನಡುವೆ ನಡೆಯಿತು. ಎರಡು ತಂಡಗಳು ೨-೨ ಗೋಲುಗಳ ಸಮಬಲಗಳಿಸಿತು. ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ನೆಹರು ಎಫ್.ಸಿ ಪಾಲಿಬೆಟ್ಟ ತಂಡವು ೩-೨ ಗೋಲುಗಳ ಅಂತರದಿAದ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟಿತ್ತು.

ಪಂದ್ಯಾವಳಿಯ ಉದಯೋನ್ಮುಖ ಆಟಗಾರನಾಗಿ ಗಾಂಧಿ ಎಫ್.ಸಿ ತಂಡದ ನಾಯಕ ಸಮ್ಮಾಸ್, ಅತ್ಯುತ್ತಮ ಡಿಫೆಂಡರ್ ನೆಹರು ಎಫ್.ಸಿ ತಂಡದ ಶರ್ಫು, ಅತ್ಯುತ್ತಮ ಗೋಲ್‌ಕೀಪರ್ ನೆಹರು ಎಫ್.ಸಿ ತಂಡದ ಶಿಜು, ಅತ್ಯುತ್ತಮ ಸ್ರೆöÊಕರ್ ಫ್ಲಸ್ಟರ್ಸ್ ತಂಡದ ರಯೀಸ್, ಅತ್ಯುತ್ತಮ ಆಟಗಾರನಾಗಿ ಮಾಸ್ಟರ್ಸ್ ತಂಡದ ಮೋನು ಹಾಗೂ ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಫ್ಲಸ್ಟರ್ಸ್ ತಂಡದ ನಾಯಕ ಸಿನಾನ್ ಪಡೆದುಕೊಂಡರು.

ಪAದ್ಯಾವಳಿಯ ತೀರ್ಪುಗಾರರಾಗಿ ಇರ್ಷಾದ್ ಕೆ.ಎಂ. ಷರೀಫ್ ಪಿ.ಎಂ, ಸವಾದ್ ಈ.ಯು. ಹಾಗೂ ರಶೀದ್ ಪಿ.ಎಂ. ಕಾರ್ಯನಿರ್ವಹಿಸಿದರು. ಪ್ರಶಸ್ತಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಷರೀಫ್.ಪಿ.ಎಂ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಚೆಟ್ಟಳ್ಳಿ ಪೊಲೀಸ್ ಉಪಠಾಣಾಧಿಕಾರಿ ದಿನೇಶ್ ಬಿ.ಆರ್., ಪೊಲೀಸ್ ಕಾನ್ಸ್ಟೇಬಲ್ ಮಂಜುನಾಥ್ ,ಉಮೇಶ್, ನೌಷಾದ್ ಪೊನ್ನತ್ಮೊಟ್ಟೆ, ಚಂದ್ರ ಆಟೋ, ಗಾಂಧಿ ಯುವಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ, ಸಂಘಟನಾ ಕಾರ್ಯದರ್ಶಿ ಸುಹೈಲ್ ಓ.ಎಸ್, ಉನೈಸ್ ಕೆ.ಎಂ., ಉಪಾಧ್ಯಕ್ಷರುಗಳಾದ ಹಕೀಂ ವಿ.ಹೆಚ್. ಹಾಗೂ ಉವೈಸ್ ಸಿ.ಎ. ಇದ್ದರು.