ಕೂಡಿಗೆ, ಅ. ೨೫: ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ರಚನೆಗೊಂಡಿದ್ದು, ಅದರ ಮೂಲಕ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಶಾಲಾ ಅಭಿವೃದ್ಧಿಗೆ ಪೂರಕವಾದ ಯೋಜನೆ ಗಳಿಗೆ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗುರುಪ್ರಸಾದ್ ಚಾಲನೆ ನೀಡಿದರು.

ಶಾಲೆಯ ಅಭಿವೃದ್ಧಿಗೆ ಸಂಬAಧಿಸಿದAತೆ ಪೂರ್ವಭಾವಿ ಸಭೆಯನ್ನು ನಡೆಸಿ ಪ್ರಮುಖವಾಗಿ ಶಾಲೆಯಲ್ಲಿ ಕಳೆದ ೬೦ ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿರುತ್ತಾರೆ. ಅವರುಗಳ ಸಹಕಾರದೊಂದಿಗೆ ಶಾಲೆಯ ಪ್ರಗತಿಗೆ ಅನುಕೂಲವಾಗು ವಂತೆ ಈಗಿನ ವಿದ್ಯಾರ್ಥಿಗಳಿಗೆ ಸಹಕಾರವಾಗಲು ಶಾಲೆ ಮುಂಭಾಗದ ಆಟದ ಮೈದಾನವನ್ನು ಸಮತಟ್ಟು ಗೊಳಿಸಿ, ಶುಚಿತ್ವ ಮಾಡಿ ಸಿದ್ದತೆ ಮಾಡುವುದು ಅಲ್ಲದೆ ಶಾಲೆ ಮುಂಭಾಗದಲ್ಲಿ ವಿದ್ಯಾರ್ಥಿಗಳ ಕಾರ್ಯಕ್ರಮಗಳಿಗೆ ಅನುಕೂಲ ವಾಗುವ ರೀತಿಯಲ್ಲಿ ಸಭಾಂಗಣ ನಿರ್ಮಾಣಕ್ಕೆ ಶಾಸಕ ಅನುದಾನ ಪಡೆಯಲು ತಂಡ ಶಾಸಕರ ಭೇಟಿ ಮಾಡಿ ಅನುದಾನವನ್ನು ಕೋರುವ ಬಗ್ಗೆ ಚರ್ಚೆಗಳು ನಡೆದವು.

ಈಗಾಗಲೇ ದುರಸ್ತಿಯಲ್ಲಿರುವ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬAಧಿಸಿದ ಇಲಾಖೆ ಅನುದಾನ ವನ್ನು ಪಡೆಯಲು ವಿಷಯವನ್ನು ಪ್ರಸ್ತಾವನೆ ಮಾಡಲಾಯಿತು. ಸಭೆಯಲ್ಲಿ ಎಲ್ಲಾ ಹಳೆ ವಿದ್ಯಾರ್ಥಿಗಳ ಗಮನಕ್ಕೆ ತಂದು ಅಭಿವೃದ್ಧಿ ಪೂರಕವಾದ ಅಂಶಗಳ ಬಗ್ಗೆ ಹಾಜರಿದ್ದ ಹಳೆಯ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗುರುಪ್ರಸಾದ್, ಕಾರ್ಯದರ್ಶಿ ಶಿಕ್ಷಕ ಯೋಗೇಶ್, ಹಳೆಯ ವಿದ್ಯಾರ್ಥಿ ಗಳಾದ ಶಶಿಕಿರಣ್, ಧರ್ಮ, ಸುನಿಲ್ ರಾವ್, ಪ್ರವೀಣ್, ಆರ್ಕೇಶ್, ರೆಡ್ಡಿ, ಶಿವು, ಚಂದ್ರಶೇಖರ್ ಸೇರಿದಂತೆ ಇನ್ನಿತರರು ಹಾಜರಿದ್ದರು.