ಮಡಿಕೇರಿ, ಅ. ೨೫: ನಿರಂತರ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಬೆಳೆಹಾನಿ ವರದಿಯಾಗಿರುವುದಾಗಿದೆ. ಈ ಸಂಬAಧ ಬೆಳೆ ಹಾನಿಯನ್ನು ಅಂದಾಜಿಸಲು ಇಲಾಖಾವಾರು ಜಂಟಿ ಸಮೀಕ್ಷೆ ಕೈಗೊಂಡಿದೆ. ಜಿಲ್ಲೆಯ ೫ ತಾಲೂಕುಗಳಲ್ಲಿಯೂ ನಿರಂತರ ಮಳೆಯಿಂದಾಗಿ ಶೇ. ೩೩ ಕ್ಕಿಂತ ಅಧಿಕ ಪ್ರಮಾಣದಲ್ಲಿ ತೋಟಗಾರಿಕಾ ಮತ್ತು ಕಾಫಿ ಬೆಳೆಗಳು ಹಾನಿಗೊಳಪಟ್ಟಿರು ವುದಾಗಿ ವರದಿ ಸಲ್ಲಿಕೆಯಾಗಿರುತ್ತದೆ. ಆದ್ದರಿಂದ ಬೆಳೆಹಾನಿ ಪರಿಹಾರ ಸಂಬAಧ ಸಂತ್ರಸ್ತ ರೈತರಿಂದ ಬೆಳೆಹಾನಿ ಪರಿಹಾರ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಬೆಳೆಹಾನಿ ಯಾಗಿದ್ದಲ್ಲಿ ಸಾರ್ವಜನಿಕರು ಸಂಬAಧಪಟ್ಟ ನಾಡ ಕಚೇರಿಯಲ್ಲಿ ಆರ್‌ಟಿಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿಯೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ತಿಳಿಸಿದ್ದಾರೆ.