ಗೋಣಿಕೊಪ್ಪಲು, ಅ.೨೫: ನಾಗರಹೊಳೆ ರಾಷ್ಟಿçÃಯ ಉದ್ಯಾನವನದಲ್ಲಿ ವನ್ಯ ಪ್ರಾಣಿಗಳನ್ನು ಅತ್ಯಂತ ಸಮೀಪದಲ್ಲಿ ನೋಡುವ ಮಾಡುವ ಹಾಗೂ ಕಾಡಿನಲ್ಲಿರುವ ಪರಿಸರವನ್ನು ವೀಕ್ಷಣೆ ಮಾಡುವ ಸಲುವಾಗಿ ಅರಣ್ಯ ಇಲಾಖೆಯು ಮತ್ತೊಂದು ಸಫಾರಿ ಕೇಂದ್ರವನ್ನು ಆರಂಭಿಸಲು ಮುಂದಾಗಿರುವುದಕ್ಕೆ ಜಿಲ್ಲಾ ರೈತ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆ ಎಚ್ಚರಿಕೆಯನ್ನು ನೀಡಿದೆ.

ತಿತಿಮತಿ-ಆನೆಚೌಕೂರು ರಸ್ತೆ ಸಮೀಪ ಸಫಾರಿ ಕೇಂದ್ರ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಮೀಪದ ಹತ್ತಾರು ಗ್ರಾಮಗಳಿಗೆ ವನ್ಯ ಪ್ರಾಣಿಗಳು ಲಗ್ಗೆ ಇಡುವ ಸಾಧ್ಯತೆ ಇದೆ. ಈ ಭಾಗದಲ್ಲಿ ಆರಂಭವಾಗುವ ಸಫಾರಿ ಕೇಂದ್ರವನ್ನು ತಡೆ ಹಿಡಿಯುವಂತೆ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಮಜ್ಜಿಗೆಹಳ್ಳ ಬಳಿ ತೆರಳಿ ಸ್ಥಳಕ್ಕೆ ಮತ್ತಿಗೋಡು ವಲಯದ ಡಿಆರ್‌ಎಫ್‌ಒ ವಿನೋದ್ ಕುಮಾರ್‌ರವರನ್ನು ಬರಮಾಡಿಕೊಂಡು ಸಮಗ್ರ ಮಾಹಿತಿಯನ್ನು ಪಡೆದುಕೊಂಡರು. ಕೊಡಗಿನಲ್ಲಿ ವನ್ಯ ಜೀವಿ ಉಪಟಳದಿಂದ ರೈತರ ಜಾನುವಾರುಗಳು ಸೇರಿದಂತೆ ಮನುಷ್ಯನ ಜೀವ ಬಲಿಯಾಗುತ್ತಿದೆ. ಈ ಭಾಗದಲ್ಲಿ ಪ್ರವಾಸಿಗರು ಅರಣ್ಯದ ಒಳಗೆ ಸಂಚಾರ ಮಾಡುವುದರಿಂದ ಕಾಡಿನಲ್ಲಿರುವ ವನ್ಯ ಪ್ರಾಣಿಗಳಿಗೆ ಸಹಜವಾಗಿಯೇ ಅಡಚಣೆ ಆಗಲಿದೆ. ಅಲ್ಲದೆ ಮೈಸೂರು ಕೊಡಗು ಸಂಪರ್ಕ ರಸ್ತೆಯ ಸಮೀಪದಲ್ಲೇ ಈ ಸಫಾರಿ ಕೇಂದ್ರ ಆರಂಭವಾಗುವುದರಿAದ ಈ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಪ್ರತಿನಿತ್ಯ ವನ್ಯ ಪ್ರಾಣಿಗಳಿಂದ ಅಪಾಯವಾಗುವ ಎಲ್ಲ ಲಕ್ಷಣಗಳಿದ್ದು ಈ ಭಾಗದಿಂದ ಸಫಾರಿ ಕೇಂದ್ರವನ್ನು ಸ್ಥಳಾಂತರಿಸುವAತೆ ಒತ್ತಾಯಿಸಿದರು.

ರೈತ ಮುಖಂಡರುಗಳ ಮಾತಿಗೆ ಉತ್ತರಿಸಿದ ಮತ್ತಿಗೋಡು ವನ್ಯ ಜೀವಿ ವಲಯದ ಡಿಆರ್‌ಎಫ್‌ಒ ವಿನೋದ್ ಕುಮಾರ್, ತಮ್ಮಗಳ ವಿರೋಧವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ ಅವರು, ಕೆಲವೇ ದಿನಗಳಲ್ಲಿ ನೂತನವಾಗಿ ಆರಂಭವಾಗಲಿರುವ ಸುಮಾರು ೨೮ ಕಿ.ಮೀ. ವ್ಯಾಪ್ತಿಯ ಸಫಾರಿ ಕೇಂದ್ರದ ಸಾಧಕ ಬಾಧಕಗಳನ್ನು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ತೆರಳಿ ಸಮಗ್ರವಾಗಿ ಚರ್ಚಿಸಲಾಗುವುದು. ಅಲ್ಲಿಯ ತನಕ ಕಾಮಗಾರಿ ಮುಂದುವರೆಸದAತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ರೈತ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ತಿತಿಮತಿ ಭಾಗದ ರೈತ ಮುಖಂಡರುಗಳಾದ ಚೆಪ್ಪುಡೀರ ಕಾರ್ಯಪ್ಪ, ತಿತಿಮತಿ ಅಧ್ಯಕ್ಷ ಕಳ್ಳಿಚಂಡ ಅಶ್ವಥ್, ಪದಾಧಿಕಾರಿಗಳಾಧ ವಿ.ಎಸ್.ಸತೀಶ್, ಬೊಳ್ತಂಡ ಬಿ.ಚಂಗಪ್ಪ, ಚೆಪ್ಪುಡೀರ ರಂಜನ್, ಬೊಳ್ಳಿಮಾಡ ನಂಜಪ್ಪ. ಎ.ಎನ್.ಅಶೋಕ್, ಹೆಚ್.ಜಿ.ಸ್ವಾಮಿ, ಹೆಚ್.ಎಸ್. ಗೋವಿಂದ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಈಗಾಗಲೇ ಸಫಾರಿ ಆರಂಭಕ್ಕೆ ಸಕಲ ವ್ಯವಸ್ಥೆಗೆ ನಡೆಯುತ್ತಿದೆ. ಪ್ರವಾಸಿಗರ ಆಗಮನ ಸಂದರ್ಭ ಆಸೀನರಾಗಲು ವಿಶ್ರಾಂತಿ ಕೊಠಡಿ, ಟಿಕೆಟ್ ಕೌಂಟರ್ ಹಾಗೂ ಶೌಚಾಲಯ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ.

ಮುAಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಅರಣ್ಯ ಇಲಾಖೆಯ ವಾಹನದಲ್ಲಿ ರಾಷ್ಟಿçÃಯ ಉದ್ಯಾನವನದಲ್ಲಿ ಸಫಾರಿ ನಡೆಸುವ ಮೂಲಕ ವನ್ಯ ಪ್ರಾಣಿಗಳ ಚಲನ ವಲನಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸುವುದು ಇಲಾಖೆಯ ಉದ್ದೇಶವಾಗಿದೆ. ತಿತಿಮತಿ ಆನೆ ಚೌಕೂರು -ತಿತಿಮತಿ ಮುಖ್ಯ ರಸ್ತೆಗೆ ಹೊಂದಿಕೊAಡಿರುವ ‘ಬಫರ್’ ಸಫಾರಿ ಕೇಂದ್ರ ಇದಾಗಿದೆ.

(ಹೆಚ್.ಕೆ.ಜಗದೀಶ್)