ಮಡಿಕೇರಿ, ಅ. ೨೫: ಕೇಂದ್ರ ಸರಕಾರದ ಮಹತ್ತರ ಯೋಜನೆ ಗಳಲ್ಲೊಂದಾದ ಭವಿಷ್ಯಕ್ಕಾಗಿ ನೀರಿನ ಸಂರಕ್ಷಣೆಯ ಹಿತದೃಷ್ಟಿಯಿಂದ ಜಾರಿಗೆ ತಂದಿರುವ ‘ಅಮೃತ ಸರೋವರ’ ಯೋಜನೆಯು ಕೊಡಗು ಜಿಲ್ಲೆಯಲ್ಲಿಯೂ ಅನುಷ್ಠಾನ ಗೊಳ್ಳುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ ೧೪ ಸರೋವರ, ಸರೋವರ ಮೂಲಗಳ ಅಭಿವೃದ್ಧಿ ಪೂರ್ಣ ಗೊಂಡಿದ್ದು, ಮರುಜೀವ ಸಿಕ್ಕಂತಾಗಿದೆ. ಇನ್ನೂ ೩೧ ಕಾಮಗಾರಿಗಳು ಪ್ರಗತಿಯಲ್ಲಿದ್ದು, ೪೧ ಕಾಮಗಾರಿಗಳು ಪ್ರಾರಂಭವಾಗ ಬೇಕಿದೆ. ಒಟ್ಟು ೮೬ ಸರೋವರಗಳಿಗೆ ಪುನರ್ಜೀವ ನೀಡುವ ಕಾರ್ಯ ಅಮೃತ ಸರೋವರ ಯೋಜನೆ ಮೂಲಕ ನಡೆಯಲಿದೆ. ಸರೋವರಗಳಲ್ಲಿನ ಹೂಳನ್ನು ತೆಗೆದು, ಗಿಡಗಂಟಿಗಳನ್ನು ಸ್ವಚ್ಛಗೊಳಿಸುವುದ ರೊಂದಿಗೆ ಕೃಷಿ, ಕುಡಿಯುವ ನೀರಿಗೆ ಯೋಗ್ಯವಾಗುವಂತೆ ಸರೋವರಗಳು ಅಭಿವೃದ್ಧಿ ಹೊಂದಲಿವೆ.

೨೦೨೨ರ ಏಪ್ರಿಲ್ ೨೪ ರಂದು ರಾಷ್ಟಿçÃಯ ಪಂಚಾಯತ್ ರಾಜ್ ದಿನದ ಪ್ರಯುಕ್ತ ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ರಾಷ್ಟçದ ಎಲ್ಲಾ ಜಿಲ್ಲೆಗಳಲ್ಲೂ ಕನಿಷ್ಟ ೭೫ ಸರೋವರಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಈ ಮಹತ್ವದ ಯೋಜನೆಯನ್ನು ಜಾರಿಗೆ ತಂದಿತು.

ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮೇಲುಸ್ತುವಾರಿಯಲ್ಲಿ ಗ್ರಾಮ ಪಂಚಾಯಿತಿಗಳ ಸಹಭಾಗಿತ್ವದಲ್ಲಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಎಕ್ಸ್.ವಿ ಫೈನಾನ್ಸ್ ಕಮಿಷನ್ ಗ್ರಾಂಟ್ಸ್, ಪ್ರಧಾನ ಮಂತ್ರಿ ಕೃಷಿ ಸಿಂಚಾನ ಯೋಜನೆ, ‘ವಾಟರ್‌ಶೆಡ್ ಡೆವೆಲಪ್‌ಮೆಂಟ್ ಕಾಂಪೊನೆAಟ್’, ‘ಹರ್ ಕೇತ್ ಕೊ ಪಾನಿ’ ಸೇರಿದಂತೆ ರಾಜ್ಯಗಳಿಗೆ ಸೀಮಿತವಾಗಿರುವ ಇತರ ಯೋಜನೆಗಳ ಸಹಯೋಗದೊಂದಿಗೆ ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಟ ೭೫ ಸರೋವರಗಳ ಅಭಿವೃದ್ಧಿಗೆ ಅಮೃತ ಸರೋವರ ಯೋಜನೆ ಸಹಕಾರಿಯಾಗಲಿದೆ.

ಕೊಡಗಿನಲ್ಲಿ ಒಟ್ಟು ೮೬ ಸರೋವರಗಳ

ಅಭಿವೃದ್ಧಿ – ರೂ.೮೯೭.೮ ಲಕ್ಷ ವೆಚ್ಚದಲ್ಲಿ ಕಾಮಗಾರಿ

ಕೇಂದ್ರ ಸರಕಾರದ ಮಹತ್ವದ ಯೋಜನೆಯಡಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು ೮೬ ಸರೋವರಗಳ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಯೋಜನೆ ಘೋಷಣೆಯಾಗಿದ್ದು, ಜಿಲ್ಲೆಯ ಹಲವೆಡೆ ಕಾಮಗಾರಿ ಪ್ರಾರಂಭವಾಗಿದ್ದು ಆಗಸ್ಟ್ ೧೫ ರಂದು ಸ್ವಾತಂತ್ರೊö್ಯÃತ್ಸವದAದು ಜಿಲ್ಲೆಯ ಒಟ್ಟು ೧೪ ಕಡೆಗಳಲ್ಲಿ ಅಭಿವೃದ್ಧಿ ಪಡಿಸಲಾದ ಸರೋವರಗಳನ್ನು ಉದ್ಘಾಟನೆ ಮಾಡಲಾಗಿದೆ. ಸೋಮವಾರಪೇಟೆ

(ಮೊದಲ ಪುಟದಿಂದ) ತಾಲೂಕಿನಲ್ಲಿ ೧೦ ಸರೋವರಗಳು ಪೂರ್ಣಗೊಂಡಿದ್ದು, ೨೬ ಸರೋವರಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ವೀರಾಜಪೇಟೆ ತಾಲೂಕಿನಲ್ಲಿ ೪ ಸರೋವರಗಳ ಅಭಿವೃದ್ಧಿ ಪೂರ್ಣಗೊಂಡಿವೆ ಹಾಗೂ ೩ ಸರೋವರಗಳ ಕಾಮಗಾರಿ ಪ್ರಗತಿಯಲ್ಲಿದೆ. ಮಡಿಕೇರಿಯಲ್ಲಿ ಇದುವರೆಗೆ ಸರೋವರ ಕಾಮಗಾರಿಗಳು ಪೂರ್ಣ ಗೊಂಡಿಲ್ಲವಾದರೂ ೨ ಸರೋವರಗಳ ಕಾಮಗಾರಿಗಳು ಪ್ರಗತಿಯಲ್ಲಿವೆ.

ಒಟ್ಟು ೮೬: ಅಮೃತ ಸರೋವರ ಯೋಜನೆಯಡಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ ೧೨, ಸೋಮವಾರಪೇಟೆ ತಾಲೂಕಿನಲ್ಲಿ ೪೯ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ೨೫ ಸರೋವರಗಳೊಂದಿಗೆ ಒಟ್ಟು ೮೬ ಸರೋವರಗಳು ಜಿಲ್ಲೆಯಲ್ಲಿ ಅಭಿವೃದ್ಧಿ ಹೊಂದಲಿವೆ. ಮಡಿಕೇರಿಯ ೧೨ ಸರೋವರಗಳು ರೂ.೧೪೪ ಲಕ್ಷ, ಸೋಮವಾರಪೇಟೆಯ ೪೯ ಸರೋವರಗಳ ಅಭಿವೃದ್ಧಿಗೆ ರೂ. ೫೧೧.೫ ಲಕ್ಷ ಹಾಗೂ ವೀರಾಜಪೇಟೆಯ ೨೫ ಸರೋವರಗಳ ಅಭಿವೃದ್ಧಿಗೆ ರೂ. ೨೪೨.೩ ಲಕ್ಷ ವೆಚ್ಚವಾಗಲಿದ್ದು, ಒಟ್ಟು ವೆಚ್ಚ ರೂ. ೮೯೭.೮ ಲಕ್ಷ ಆಗಲಿದೆ.

ಎಲ್ಲೆಲ್ಲಿ ಸರೋವರ ಅಭಿವೃದ್ಧಿ..?

ಮಡಿಕೇರಿ ತಾಲೂಕಿನ ಹೊದ್ದೂರು, ಹಾಕತ್ತೂರು, ಕಡಗದಾಳು, ಬಲ್ಲಮಾವಟಿ ಕಾಂತೂರು, ಮೂರ್ನಾಡು ನರಿಯಂದಡ, ಮದೆ, ಗಾಳಿಬೀಡು, ಹೊಸ್ಕೇರಿ ಹಾಗೂ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸರೋವರ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ.

ವೀರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ, ಬಾಳೆಲೆ, ಬಲ್ಯಮಂಡೂರು, ಬೇಟೋಳಿ, ಬಿಟ್ಟಂಗಾಲ, ಚೆನ್ನಯನಕೋಟೆ, ಹಾಲುಗುಂದ, ಹುದಿಕೇರಿ, ಕಿರುಗೂರು, ಮಾಲ್ದಾರೆ, ಮಾಯಮುಡಿ, ನಿಟ್ಟೂರು, ಪೊನ್ನಂಪೇಟೆ, ಪೊನ್ನಪ್ಪಸಂತೆ, ಶ್ರೀಮಂಗಲ, ತಿತಿಮತಿ ಹಾಗೂ ಸಿದ್ದಾಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸರೋವರ ಅಭಿವೃದ್ಧಿ ಕಾಮಗಾರಿಗಳು ನಡೆಸಲು ಉದ್ದೇಶಿಸಲಾಗಿದ್ದು, ಬೇಟೋಳಿ, ಹುದಿಕೇರಿ, ಬಿ.ಶೆಟ್ಟಿಗೇರಿ ಹಾಗೂ ಪೊನ್ನಂಪೇಟೆ ಪಂಚಾಯಿತಿ ವ್ಯಾಪ್ತಿಗಳಲ್ಲಿ ಈಗಾಗಲೇ ಸರೋವರಗಳು ಅಭಿವೃದ್ಧಿ ಹೊಂದಿವೆ.

ಸೋಮವಾರಪೇಟೆ ತಾಲೂಕಿನ ೭ನೇ ಹೊಸಕೋಟೆ, ಆಲೂರು ಸಿದ್ದಾಪುರ, ಬೇಳೂರು, ಬೆಸೂರು, ಬೆಟ್ಟದಳ್ಳಿ, ಬ್ಯಾಡಗೊಟ್ಟ, ದೊಡ್ಡಮಳ್ತೆ, ದುಂಡಳ್ಳಿ, ಗನಗೂರು, ಗರ್ವಾಲೆ, ಗೌಡಳ್ಳಿ, ಗುಡ್ಡೆಹೊಸೂರು, ಹಂಡ್ಳಿ, ಹರದೂರು, ಹೆಬ್ಬಾಲೆ, ಹಾನಗಲ್ಲು, ಕಿರಗಂದೂರು, ಕೊಡಗರಹಳ್ಳಿ, ಕೊಡ್ಲಿಪೇಟೆ, ಕೂಡಿಗೆ, ನೇರುಗಳಲೆ, ನಿಡ್ತ, ಶಾಂತಳ್ಳಿ, ಶಿರಂಗಾಲ, ತೋಳೂರುಶೆಟ್ಟಳ್ಳಿ, ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆಸಲು ಯೋಜನೆ ರೂಪಿಸಿದ್ದು, ಗೌಡಳ್ಳಿ, ಗನಗೂರು, ಹಂಡ್ಳಿ, ನಿಡ್ತ, ಕೊಡ್ಲಿಪೇಟೆ, ಆಲೂರು, ಹಾನಗಲ್ಲು ಹಾಗೂ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸರೋವರಗಳ ಅಭಿವೃದ್ಧಿ ಪೂರ್ಣಗೊಂಡಿದೆ.

-ಪ್ರಜ್ವಲ್ ಜಿ.ಆರ್.