ಚೆಯ್ಯಂಡಾಣೆ, ಅ. ೨೫: ಕೊಡಗು ಸುನ್ನೀ ವೆಲ್ಫೇರ್ ಸೌದಿ ಅರೇಬಿಯಾ ರಾಷ್ಟಿçÃಯ ಸಮಿತಿ ವತಿಯಿಂದ ‘ಪ್ರವಾದಿ ಹಾದಿಯಲ್ಲಿ ಗೆಲುವಿದೆ’ ಎಂಬ ಘೋಷ ವಾಕ್ಯದೊಂದಿಗೆ ಮಿಲಾದ್ ಸಮಾವೇಶ ರಿಯಾದ್ ಅಲ್ ಮಾಸ್ ರೆಸ್ಟೋರೆಂಟ್ನಲ್ಲಿ ನಡೆಯಿತು.
ಕಾರ್ಯಕ್ರಮವು ರಿಯಾಝ್ ಹಾಷ್ಮಿ ಅವರ ಕಿರಾಅತ್ತ್ನೊಂದಿಗೆ ಪ್ರಾರಂಭಗೊAಡಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆಸಿಎಫ್ ಅಂರ್ರಾಷ್ಟಿçÃಯ ಸಮಿತಿ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್ ಮಾತನಾಡಿ, ಕೇವಲ ಒಂದು ಜಿಲ್ಲೆಯ ಅನಿವಾಸಿ ಒಕ್ಕೂಟವಾಗಿದ್ದರೂ ಸಹ ತನ್ನದೇ ಆದ ಕಾರ್ಯ ಚಟುವಟಿಕೆಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಮುನ್ನುಗ್ಗುತ್ತಿರುವ ಕೊಡಗು ಸುನ್ನೀ ವೆಲ್ಪೇರ್ ಅಸೋಸಿಯೇಷನ್ ಎಲ್ಲರಿಗೂ ಮಾದರಿಯಾಗಿದೆ ಎಂದರು.
ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಸಿಎಫ್ ಅಂರ್ರಾಷ್ಟಿçÃಯ ಸಮಿತಿ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್ ಕೆಎಸ್ಎ, ಕೆಸಿಎಫ್ ಅಂರ್ರಾಷ್ಟಿçÃಯ ಸಮಿತಿ ಕೋಶಾಧಿಕಾರಿ ಅಲಿ ಮುಸ್ಲಿಯಾರ್ ಬಹರೈನ್, ವೆಲ್ಫೇರ್ ಸಮಿತಿಯ ಜಿಸಿಸಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಕೊಟ್ಟಮುಡಿ ಯುಎಇ ಹಾಗೂ ವೆಲ್ಫೇರ್ ಜಿಸಿಸಿ ಸಮಿತಿಗೆ ಕೋಶಾಧಿಕಾರಿಯಾಗಿ ಆಯ್ಕೆಯಾದ ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಅವರುಗಳನ್ನು ಸನ್ಮಾನಿಸಲಾಯಿತು. ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಕೊಡಗು ಜಿಲ್ಲೆಯ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಒದಗಿಸಲು ಸಂಘವು ಆದ್ಯತೆ ನೀಡಬೇಕೆಂದು ರಾಷ್ಟಿçÃಯ ಸಮಿತಿ ಅಧ್ಯಕ್ಷ ಡಾ. ಫಹೀಂ ರಹ್ಮಾನ್ ಸಲಹೆ ನೀಡಿದರು. ಮುಖ್ಯ ಭಾಷಣವನ್ನು ಐಸಿಎಫ್ ದಾಇ ಅಬ್ದುಲ್ಲ ಸಖಾಫಿ ಓಂಙಲ್ಲೂರ್ ಮಾಡಿದರು. ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ ಸ್ವಾಗತಿಸಿದರೆ ನಾಸಿರ್ ಮರ್ಝುಕಿ ಕಾರ್ಯಕ್ರಮ ನಿರೂಪಿಸಿ ಮುಸ್ತಫ ಝೈನಿ ವಂದಿಸಿದರು.