ಬೆAಗಳೂರು, ಅ. ೨೫: ಮಹಿಳೆಯರ ಕಾಫಿ ಅಲೈಯನ್ಸ್, ಇಂಡಿಯಾ ಚಾಪ್ಟರ್ (Womeಟಿ ಅoಜಿಜಿee ಂಟಟiಚಿಟಿಛಿe Iಟಿಜiಚಿ ಅhಚಿಠಿಣeಡಿ) ತನ್ನ ಎರಡು ದಿನಗಳ ಕಾಫಿ ಸಂತೆಯ ಆರನೇ ವರ್ಷದ ಆಚರಣೆಯನ್ನು ತಾ. ೨೯ ರಿಂದ ಬೆಂಗಳೂರಿನ ಜಯಮಹಲ್ ಪ್ಯಾಲೇಸ್ ಹೊಟೇಲ್‌ನಲ್ಲಿ ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಕಾಫಿ ಬೀಜಗಳು, ಹೊಸ ಕಾಫಿ ಉತ್ಪನ್ನಗಳು ಮತ್ತು ಸಂಬAಧಿತ ಆಹಾರಗಳ ಬಿಡುಗಡೆ, ಕಾಫಿ ಉಪಕರಣಗಳ ಪ್ರದರ್ಶನಗಳು ಮತ್ತು ಸಾಮಗ್ರಿಗಳು, ಕಾಫಿ ಸಂಬAಧಿತ ಮಾಹಿತಿ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಡಬ್ಲುö್ಯಸಿಎಐ ಅಧ್ಯಕ್ಷೆ ಸುನಾಲಿನಿ ಮೆನನ್ ತಿಳಿಸಿದರು.
ಈ ಮೇಳದಲ್ಲಿ ಪ್ರಮುಖ ಕಾಫಿ ಉತ್ಪಾದಿಸುವ ಮತ್ತು ಸೇವಿಸುವ ದೇಶಗಳನ್ನು ಪ್ರತಿನಿಧಿಸುವ ಗಣ್ಯರು ಮತ್ತು ಭಾರತದ ಅನೇಕ ಕಾಫಿ ಕೆಫೆ ಸರಪಳಿಗಳು ಮತ್ತು ಸಣ್ಣ ಮಹಿಳಾ ಚಿಲ್ಲರೆ ವ್ಯಾಪಾರಿಗಳಿಗೆ ‘ವುಮನ್ ಕಾಫಿ ಬ್ರೂಯಿಂಗ್ ಸ್ಟಾರ್’ (ತಿomeಟಿ ಅoಜಿಜಿee bಡಿeತಿiಟಿg sಣಚಿಡಿ) ಎಂಬ ಪ್ರಶಸ್ತಿಯನ್ನೂ ಆಯೋಜಿಸಲಾಗಿದೆ. ಪ್ರಮುಖ ಕಾಫಿ ಕಂಪನಿಗಳು ತಮ್ಮ ಉತ್ಪನ್ನಗಳು ಮತ್ತು ಚಟುವಟಿಕೆಗಳನ್ನು ಪ್ರದರ್ಶಿಸುವ ಜತೆಗೇ ಮತ್ತು ಲೈವ್ ನೃತ್ಯ ಮತ್ತು ಸಂಗೀತವು ವೀಕ್ಷಕರ ಮನರಂಜಿಸಲಿದೆ. ಜನವರಿ ೨೦೧೯ ರಲ್ಲಿ ನಡೆಸಿದ ಕೊನೆಯ ಕಾಫಿ ಸಂತೆ ಕಾರ್ಯಕ್ರಮದಲ್ಲಿ ಸುಮಾರು ೩೦೦೦ಕ್ಕೂ ಹೆಚ್ಚು ಕಾಫಿ ಪ್ರಿಯರು ಭಾಗವಹಿಸಿದ್ದರು ಎಂದು ಮೆನನ್ ಹೇಳಿದರು.
೨೦೧೪ ರಿಂದ ವಾರ್ಷಿಕವಾಗಿ ಆಯೋಜಿಸಲಾಗುತ್ತಿರುವ ಈ ಮೇಳವು ಭಾರತದಲ್ಲಿನ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಏಳಿಗೆಗಾಗಿ ನಡೆಯುತ್ತಿರುವ ಯೋಜನೆಗಳನ್ನು ಬೆಂಬಲಿಸಲು ಸಂಘಟನೆಯ ವಾರ್ಷಿಕ ನಿಧಿಸಂಗ್ರಹಣೆ ಕಾರ್ಯಕ್ರಮವಾಗಿದೆ ಎಂದು ಅವರು ತಿಳಿಸಿದ್ದಾರೆ.
ವುಮೆನ್ ಸ್ಟಾರ್ಸ್ ಬ್ರೂವರ್ ಸ್ಕಿಲ್ಸ್ ಚಾಂಪಿಯನ್ಶಿಪ್ನಲ್ಲಿ, ಮಹಿಳಾ ಸ್ಪರ್ಧಿಗಳು ವಿವಿಧ ಹೋಮ್ ಬ್ರೂಯಿಂಗ್ ಉಪಕರಣಗಳಲ್ಲಿ ಸುವಾಸನಾಭರಿತ ಕಾಫಿಯನ್ನು ತಯಾರಿಸುವಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲಿದ್ದಾರೆ. ಈ ವರ್ಷ, ಚಾಂಪಿಯನ್‌ಶಿಪ್ ಸ್ಪರ್ಧೆಯು ಹೋಮ್ ಬ್ರೂಯಿಂಗ್ ಸಲಕರಣೆಗಳ ಮೇಲೆ ನಡೆಯುತ್ತಿದ್ದು ಫೈನಲ್ಸ್ ತಾ. ೨೯ ರಂದು ನಡೆಯಲಿದೆ ಎಂದು ಅವರು ಹೇಳಿದರು.
ಕಾಫಿ ನಕ್ಷತ್ರ ಸ್ಪರ್ಧೆಯಲ್ಲಿ, ಸ್ಥಳೀಯ ಮತ್ತು ಅಂರ‍್ರಾಷ್ಟಿçÃಯ ತೀರ್ಪುಗಾರರು ‘ಸಾಂಪ್ರದಾಯಿಕ ಭಾರತೀಯ ಫಿಲ್ಟರ್ ಕಾಫಿ’, ‘ಕ್ಯಾಪುಸಿನೊ’ ಮತ್ತು ‘ಸಿಗ್ನೇಚರ್ ಬೆವರೇಜ್-ಹಾಟ್/ಕೋಲ್ಡ್’ ಎಂಬ ಮೂರು ವಿಭಾಗಗಳಲ್ಲಿ ಪ್ರತಿಯೊಂದರಲ್ಲೂ ‘ಟೇಸ್ಟಿ’ ಕಾಫಿಯನ್ನು ಆಯ್ಕೆ ಮಾಡುತ್ತಾರೆ. ಕಾಫಿ ಕೆಫೆಗಳಿಗಾಗಿ ಆಯೋಜಿಸಿರುವ ಈ ಸ್ಪರ್ಧೆಯ ಫೈನಲ್ ತಾ. ೩೦ ರಂದು ನಡೆಯಲಿದೆ. ಕಾಫಿ ಸಂತೆಯಲ್ಲಿ ತಾ. ೩೦ ರಂದು ‘ವಿಮೆನ್ ಸ್ಟಾರ್ಸ್ ಬ್ರೂವರ್ ಸ್ಕಿಲ್ಸ್ ಚಾಂಪಿಯನ್‌ಶಿಪ್’ (ತಿomeಟಿ sಣಚಿಡಿs bಡಿeತಿeಡಿ sಞiಟಟs ಛಿhಚಿmಠಿioಟಿshiಠಿ) ಮತ್ತು ‘ಕಾಪಿ ನಕ್ಷತ್ರ’ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲು ‘ಚೀರ್ಸ್ ಟು ಕಾಫಿ’ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
-ಕೋವರ್ ಕೊಲ್ಲಿ ಇಂದ್ರೇಶ್