ಶನಿವಾರಸAತೆ, ಅ. ೨೫: ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಬಗ್ಗೆ ಪ್ರಶ್ನಿಸಿದ ಪತಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ನ್ಯಾಯಾಲಯ ಅಪರಾಧಿಗೆ ಮೂರು ವರ್ಷ ಸಾದಾ ಸಜೆ ಹಾಗೂ ರೂ. ೫ ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಕಳೆದ ತಾ. ೧೦.೪.೨೦೧೬ ರಂದು ಮೂದರವಳ್ಳಿ ಗ್ರಾಮದ ಮಹಿಳೆಯೋರ್ವರು ಮನೆಯಲ್ಲಿದ್ದ ಸಂದರ್ಭ ಅದೇ ಗ್ರಾಮದ ನಿವಾಸಿ ಸಂತೋಷ್ ಎಂಬಾತ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಈ ಸಂಬAಧ ಆಕೆ ಪತಿಗೆ ವಿಚಾರ ತಿಳಿಸಿದ್ದಾರೆ.

ಪತಿ ಆರೋಪಿಯನ್ನು ಪ್ರಶ್ನಿಸಿ ದಾಗ ಆರೋಪಿ ಅವಾಚ್ಯ ಪದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಒಡ್ಡಿದ್ದಾಗಿ ಪತ್ನಿ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ಕೊಂಡ ಅಂದಿನ ಠಾಣಾಧಿಕಾರಿ ರವಿಕಿರಣ್ ಮೊಕದ್ದಮೆ ದಾಖಲಿಸಿ, ಸೋಮವಾರಪೇಟೆ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಂತೋಷ್‌ಗೆ ನ್ಯಾಯಾಲಯ ಮೂರು ವರ್ಷ ಸಾದಾ ಸಜೆ ಹಾಗೂ ರೂ. ೫ ಸಾವಿರ ದಂಡ ವಿಧಿಸಲಾಗಿದೆ. ಸರಕಾರದ ಪರ ಅಭಿಯೋಜಕ ಹೇಮಂತ್ ವಾದ ಮಂಡಿಸಿದ್ದರು.