ನಾಪೋಕ್ಲು, ಅ. ೨೪: ಸಮೀಪದ ಕುಂಜಿಲ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಯಕೋಲ್ನ ಮದರಸ ವತಿಯಿಂದ ಪ್ರವಾದಿ ಮಹಮ್ಮದ್ ಮುಸ್ತಫಾ (ಸ ಅ) ರವರ ೧೪೯೭ನೇ ಮೀಲಾದುನ್ನಬಿ ಕಾರ್ಯಕ್ರಮವನ್ನು ವಿಜೃಂಭಣೆಯಿAದ ಆಚರಿಸ ಲಾಯಿತು.
ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಮಿಲಾದ್ ಜಾಥಾ, ಮೌಲಿದ್ ಪಾರಾಯಣ, ಅನ್ನದಾನ ಮತ್ತು ವಿಶೇಷವಾಗಿ ಮಕ್ಕಳ ಭಾಷಣ, ಮದ್ಹ್ ಹಾಡು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆದವು.
ಪ್ರವಾದಿಯವರ ಮಾದರಿಯ ಜೀವನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಪರೋಪಕಾರಿಯಾಗಿ ಶಾಂತಿಯುತ ಜೀವನವನ್ನು ನಡೆಸಬೇಕೆಂದು ನಿಝಾರ್ ಅಹ್ಸನಿ ಉಸ್ತಾದರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರೌಳತುಲ್ ಉಲೂಂ ವಿದ್ಯಾರ್ಥಿಗಳ ಆಕರ್ಷಕ ದಫ್ ಪ್ರದರ್ಶನ ಮತ್ತು ಕಮರುದ್ದೀನ್ ಸಖಾಫಿ ಮತ್ತು ಸಂಗÀಡಿಗರ ವಿಶೇಷ ಬುರ್ದಾ ಆಲಾಪನೆ ನಡೆಯಿತು
ಕಾರ್ಯಕ್ರಮದಲ್ಲಿ ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ನ ಅಧ್ಯಕ್ಷ ಶೌಕತ್ ಮಕ್ಕಿ, ಖತೀಬರಾದ ನಿಝಾರ್ ಅಹ್ಸನಿ, ವಯಕೋಲ್ ಸಮಿತಿ ಅಧ್ಯಕ್ಷ ಹಂಸ, ಇಸ್ಮಾಯಿಲ್ ಲತೀಫಿ ಹಾಗೂ ವಯಕೋಲ್ ಮದರಸ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.