ಕುಶಾಲನಗರ, ಅ. ೨೪: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುವ ವೇಳೆ ಉಲ್ಫಾ ಉಗ್ರಗಾಮಿಗಳ ಗುಂಡಿಗೆ ಬಲಿಯಾದ ಹುತಾತ್ಮ ರಾಘವೇಂದ್ರ ಅವರ ಪುತ್ಥಳಿಯನ್ನು ಅವರು ವ್ಯಾಸಂಗ ಮಾಡಿದ ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸ್ಥಾಪಿಸಲಾಗಿದೆ.
೧೯೯೫ರಲ್ಲಿ ಬ್ಯಾಂಕ್‌ನಿAದ ಹಣ ತೆಗೆದುಕೊಂಡು ಹೋಗುವ ಸಂದರ್ಭ ಭದ್ರತೆಯ ಕರ್ತವ್ಯ ವೇಳೆ ನಾಗಲ್ಯಾಂಡ್‌ನಲ್ಲಿ ಉಗ್ರಪಡೆಯ ದಾಳಿಯಲ್ಲಿ ರಾಘವೇಂದ್ರ ಮೃತಪಟ್ಟಿದ್ದರು. ಪೊಲೀಸರ ಹುತಾತ್ಮ ದಿನಾಚರಣೆ ಅಂಗವಾಗಿ ಅವರ ಪುತ್ಥಳಿಗೆ ಸಿಐಎಸ್‌ಎಫ್‌ನ ಉನ್ನತ ಅಧಿಕಾರಿಗಳು ಹಾಗೂ ರಾಘವೇಂದ್ರನ ಪೋಷಕರು ಗೌರವ ಸಮರ್ಪಣೆ ಮಾಡಿದರು. ಈ ಸಂದರ್ಭ ಶಾಲಾ ಶಿಕ್ಷಕ ವೃಂದದವರು ಇದ್ದರು.