ಮಡಿಕೇರಿ, ಅ. ೨೪: ಕೊಡಗು ಪತ್ರಿಕಾ ಭವನದ ೨೧ನೇ ವಾರ್ಷಿಕೋತ್ಸವ ಹಿನ್ನೆಲೆ ಪತ್ರಿಕಾ ಭವನದಲ್ಲಿ ಆಯೋಜಿತ ಒಳಾಂಗಣ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದವರ ವಿವರ ಈ ಕೆಳಕಂಡAತಿದೆ.

ಒಳಾAಗಣ ಕ್ರೀಡಾಕೂಟದ ಕೇರಂ ಸಿಂಗಲ್ಸ್ನಲ್ಲಿ ಕೊಡಗು ಚಾನಲ್‌ನ ಕೋಚನ ಚೇತನ್ ಪ್ರಥಮ, ಹೊಸ ದಿಗಂತ ಪತ್ರಿಕೆಯ ಬಿ.ಎಸ್. ದಿನೇಶ್ ದ್ವಿತೀಯ ಮತ್ತು ಕನ್ನಡ ಪ್ರಭ ಪತ್ರಿಕೆಯ ಹರೀಶ್ ಕುಮಾರ್ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಡಬಲ್ಸ್ನಲ್ಲಿ ಕೊಡಗು ಚಾನಲ್‌ನ ಕೋಚನ ಚೇತನ್-ಹೊಸ ದಿಗಂತದ ಬಿ.ಎಸ್. ದಿನೇಶ್ ತಂಡ ಪ್ರಥಮ, ಶಕ್ತಿ ಪತ್ರಿಕೆಯ ಉಜ್ವಲ್ ರಂಜಿತ್- ಶಕ್ತಿ ಪತ್ರಿಕೆಯ ಪಿ.ವಿ. ಪ್ರಭಾಕರ್ ತಂಡ ದ್ವಿತೀಯ ಮತ್ತು ಶಕ್ತಿ ಪತ್ರಿಕೆಯ ಕುಡೆಕಲ್ ಸಂತೋಷ್ ಮತ್ತು ಕೊಡಗು ನ್ಯೂಸ್.ಕಾಂನ ಅಶೋಕ್ ತೃತೀಯ ಸ್ಥಾನ ಗಳಿಸಿಕೊಂಡರು.

ಟೇಬಲ್ ಟೆನ್ನಿಸ್ ಸಿಂಗಲ್ಸ್ನಲ್ಲಿ ಕೊಡಗು ಚಾನಲ್‌ನ ಜಿ.ವಿ.ರವಿ ಕುಮಾರ್ ಪ್ರಥಮ, ಪತ್ರಿಕಾ ಭವನದ ರಾಜೇಶ್ ಬಿ.ಪಿ. ದ್ವಿತೀಯ ಮತ್ತು ಕೌಸರ್ ತೃತೀಯ ಸ್ಥಾನ ಪಡೆದುಕೊಂಡರು. ಡಬಲ್ಸ್ನಲ್ಲಿ ಕೊಡಗು ಚಾನಲ್‌ನ ಜಿ.ವಿ. ರವಿಕುಮಾರ್- ಕೌಸರ್ ತಂಡ ಪ್ರಥಮ, ಗಡಿನಾಡ ಸಂಚಾರಿಯ ಟಿ.ಪಿ.ರಮೇಶ್- ಪತ್ರಿಕಾ ಭವನದ ರಾಜೇಶ್ ಬಿ.ಪಿ. ತಂಡ ದ್ವಿತೀಯ , ಸಂಯುಕ್ತ ಕರ್ನಾಟಕ ಪತ್ರಿಕೆಯ ಟಿ.ಕೆ. ಸಂತೋಷ್ ಮತ್ತು ಕನ್ನಡ ಪ್ರಭ ಪತ್ರಿಕೆಯ ಮೋಹನ್ ರಾಜ್ ತೃತೀಯ ಬಹುಮಾನವನ್ನು ಪಡೆದುಕೊಂಡರು.

ಚೆಸ್ ಪಂದ್ಯಾವಳಿಯಲ್ಲಿ ಪ್ರಜಾವಾಣಿ ಪತ್ರಿಕೆಯ ಡಿ.ಪಿ.ಲೋಕೇಶ್ ಪ್ರಥಮ, ಕೊಡಗು ಚಾನಲ್‌ನ ವಿನೋದ್ ಮೂಡಗದ್ದೆ ದ್ವಿತೀಯ ಮತ್ತು ರಂಜಿತ್ ಕವಲಪಾರ ತೃತೀಯ ಸ್ಥಾನ ಪಡೆದುಕೊಂಡರು. ಮಕ್ಕಳ ವಿಭಾಗದ ಚೆಸ್‌ನಲ್ಲಿ ಮೌಲ್ಯ ಬಜೆಕೋಡಿ, ಅಹಾನ್, ಮೋಕ್ಷದಾಯಿ ಮತ್ತು ವಿಶ್ವಾಸ್ ವೆಂಕಟ್ ಸ್ಪರ್ಧಿಸಿ ಉತ್ತಮ ಆಟದ ಪ್ರದರ್ಶನ ನೀಡಿದರೆ, ಕೇರಂನಲ್ಲಿ ನಿಹಾಲ್ ಕುಡೆಕಲ್ ಗಮನ ಸೆಳೆದಿದ್ದಾನೆ.

ಕೊಡಗು ಪತ್ರಿಕಾ ಭವನದ ವಾರ್ಷಿಕೋತ್ಸವದ ನ. ೫ ರಂದು ನಡೆಯುವ ಸಮಾರಂಭದಲ್ಲಿ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳಿಗೂ ಪ್ರಶಂಸನಾ ಪತ್ರವನ್ನು ನೀಡಲಾಗುತ್ತದೆ ಎಂದು ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ತಿಳಿಸಿದ್ದಾರೆ.