ವೀರಾಜಪೇಟೆ, ಅ. ೨೪: ಬೇಟೋಳಿ ಗ್ರಾಮದ ಪಟ್ಟಡ ಐನ್‌ಮನೆಯ ಶತಮಾನೋತ್ಸವ ತಾ. ೨೯ ಮತ್ತು ತಾ. ೩೦ರಂದು ಪಟ್ಟಡ ಕುಟುಂಬದ ಐನ್‌ಮನೆಯಲ್ಲಿ ನಡೆಯಲಿದೆ. ತಾ. ೨೯ರಂದು ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸಮಾರೋಪ ಸಮಾರಂಭವು ತಾ.೩೦ರಂದು ಬೆಳಿಗ್ಗೆ ೧೦.೧೫ ಗಂಟೆಗೆ ಕುಟುಂಬದ ಪಟ್ಟೆದಾರ ಚೋಮುಣಿ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗುವುದೆಂದೂ, ಆ ದಿನದ ಕಾರ್ಯಕ್ರಮವನ್ನು ಕುಟುಂಬದ ಅಧ್ಯಕ್ಷ ಪಟ್ಟಡ ಶಂಭು ಚರ್ಮಣ ಅವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆಯ ಹಿರಿಯ ವಕೀಲ ಮನೆಯಪಂಡ ವಿಠಲ ಅಪ್ಪಯ್ಯ, ಉದ್ಯಮಿ ಕಂಬೆಯAಡ ಎ. ಅಪ್ಪಚ್ಚು, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಭಾಗವಹಿಸಲಿದ್ದಾರೆ.